ವಿರಾಟ್ ಕೊಹ್ಲಿಗೆ ಕೊರೊನಾ ದೃಢ

ಲಂಡನ್, ಜೂ.22- ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತೆರಳಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕೊರೊನಾ ಸೋಂಕು ತಗುಲಿದೆ.
ಇಂಗ್ಲೆಂಡ್ ವಿರುದ್ಧ ಬಾಕಿ ಐದನೇ ಟೆಸ್ಟ್ ಪಂದ್ಯವಾಡಲು ಭಾರತ ಕಳೆದ ವಾರ ಇಂಗ್ಲೆಂಡ್‍ಗೆ ಪ್ರಯಾಣ ಬೆಳಸಿದೆ. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರು ಮೊದಲು ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಿದ್ದರು.
ಆ ಬಳಿಕ ನಾಯಕ ರೋಹಿತ್ ಶರ್ಮಾ ಸೇರಿದಂತೆ ಇನ್ನೂಳಿದ ಇತರ ಆಟಗಾರರು ಇಂಗ್ಲೆಂಡ್‍ಗೆ ತೆರಳಿ ಅಭ್ಯಾಸ ಆರಂಭಿಸಿದ್ದರು.
ಇದೀಗ ವಿರಾಟ್ ಕೊಹ್ಲಿಗೆ ಕೊರೊನಾ ಟೆಸ್ಟ್ ವೇಳೆ ಪಾಸಿಟಿವ್ ವರದಿಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಈಗಾಗಲೇ ಸ್ಪಿನ್ ಬೌಲರ್ ಆರ್.ಅಶ್ವಿನ್ ಗೆ ಸೋಂಕು ತಗುಲಿದ್ದು ಅವರು ಕ್ವಾರಂಟೈನ್ ನಲ್ಲಿದ್ದಾರೆ.
ಐಪಿಎಲ್‌ ಬಳಿಕ ಕೊಹ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದರು. ಈ ವೇಳೆ ಕೊಹ್ಲಿಗೆ ಸೋಂಕು ತಗುಲಿತ್ತು ಇದೀಗ ಗುಣಮುಖರಾಗಿದ್ದಾರೆ ಎಂಬ ಕುರಿತು ತಂಡದ ಮೂಲಗಳಿಂದ ವರದಿಯಾಗಿದೆ.