ಮುಂಬೈ, ಮಾ.೨೪- ಟೀಂ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಕಾರ್ಯಕ್ರಮವೊಂದರಲ್ಲಿ ಸಖತ್‌ಗೆ ಕಾಣಿಸಿಕೊಂಡು ಮಿಂಚಿದ್ದಾರೆ.
ಅನುಷ್ಕಾ ಶರ್ಮಾ ಅವರು ನೇರಳೆ ಬಣ್ಣದ ಗೌನ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ಪರ್ಪಲ್ ಗೌನ್ ಧರಿಸಿದ್ದರು. ಹೈ ಸ್ಲಿಟ್ ಬಾಡಿಕಾನ್ ಡ್ರೆಸ್‌ನಲ್ಲಿ ಅವರು ಕ್ಯೂಟ್ ಕಾಣಿಸಿದ್ದಾರೆ.
ಮುಂಬೈನಲ್ಲಿ ನಡೆದ ಇವೆಂಟ್‌ನಲ್ಲಿ ಸ್ಟಾರ್ ಕಪಲ್ ಜೋಡಿಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಇದರಲ್ಲಿ ವಿರಾಟ್ ಕೊಹ್ಲಿ ಬ್ಲ್ಯಾಕ್ ಕಲರ್ ಸೂಟ್ ಧರಿಸಿ ಕಾಣಿಸಿಕೊಂಡರು. ಅವರ ಲುಕ್ ಸ್ಟೈಲಿಷ್ ಆಗಿತ್ತು.ಭಾರತೀಯ ಕ್ರೀಡಾಪಟುಗಳ ಸಂಭ್ರಮಾಚರಣೆಯಲ್ಲಿ ಸ್ಟಾರ್ ಜೋಡಿಗಳು ಭಾಗಿಯಾಗಿದ್ದಾರೆ. ಇಂಡಿಯನ್ ಸ್ಪೋರ್ಟ್ಸ್ ಹಾನರ್ಸರ್ ೨೦೨೩ರಲ್ಲಿ ಈ ಜೋಡಿ ಆಕರ್ಷಣೆಯ ಬಿಂದುವಾಗಿದ್ದರು.
ನಟಿ ಸಿಂಪಲ್ ಆಗಿ ಸಿಲ್ವರ್ ಇಯರಿಂಗ್ಸ್ ಧರಿಸಿದ್ದರು. ಸುಂದರವಾದ ರಿಂಗ್‌ಗಳನ್ನು ಕೂಡಾ ಧರಿಸಿದ್ದರು. ನಟಿ ಕಾಲಿಗೂ ವಿಶೇಷ ಆಭರಣ ಧರಿಸಿದ್ದು ಆಕರ್ಷಕವಾಗಿತ್ತು.ವಿರಾಟ್ ಕೊಹ್ಲಿ ಅವರು ಬ್ಲ್ಯಾಕ್ ಕಲರ್ ಸೂಟ್ ಧರಿಸಿ ಪೋಸ್ ಕೊಟ್ಟರು. ಅವರ ಲುಕ್ ಅತ್ಯಂತ ಆಕರ್ಷಕವಾಗಿತ್ತು. ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಅಂಗದ್ ಬೇಡಿ, ನೇಹಾ ಧುಪಿಯಾ, ರಿಯಾ ಚಕ್ರವರ್ತಿ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರೂ ಇವೆಂಟ್ನಲ್ಲಿ ಭಾಗಿಯಾಗಿದ್ದರು. ಕ್ರಿಕೆಟರ್ ಶುಭಮನ್ ಗಿಲ್ ಹಾಗೂ ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ ಕೂಡಾ ಸ್ಟೈಲಿಷ್ ಆಗಿ ಕಾರ್ಯಕ್ರಮಕ್ಕೆ ಬಂದಿದ್ದರು.ಕೊಹ್ಲಿ ಅವರು ಶೇರ್ ಮಾಡಿದ ಫೋಟೋಗಳಿಗೆ ೭೩ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ೪೨ ಸಾವಿರದಷ್ಟು ಜನರು ವಿರುಷ್ಕಾ ಫೋಟೋಗೆ ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ.