ವಿರಾಜ್ ಟ್ರಾನ್ಸ್ ಪೋರ್ಟ್ ಪಾರದರ್ಶಕವಾಗಿ ಕೆಲಸ ಆರೋಪಗಳು ಸತ್ಯಕ್ಕೆ ದೂರ ಸ್ಪಷ್ಟನೆ


ಸಂಜೆವಾಣಿ ವಾರ್ತೆ
ಕುರುಗೋಡು:ಏ.14: ವಿರಾಜ್ ಟ್ರಾನ್ಸ್ ಪೋರ್ಟ ನವರು ಕಾರ್ಖಾನೆಗಳ ಮೂಲಕ ಹಾರುವ ಬೂದಿ ಮತ್ತು ಪಾಂಡ್ ಬೂದಿಯನ್ನು ಸ್ಥಳೀಯ ಲಾರಿಗಳ ಮಾಲೀಕರಿಗೆ ಅವಕಾಶ ಕೊಟ್ಟು, ಸಾಗಾಣೆ ಮಾಡುತ್ತಿದ್ದಾರೆ. ಆದರೆ, ಇವರ ಕಾರ್ಯನಿರ್ವಹಣೆಯನ್ನು ಸಹಿಸದ ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನವರು ಸ್ಥಳೀಯ ಲಾರಿ ಮಾಲಿಕರನ್ನು ಎತ್ತಿಕಟ್ಟಿ, ಆರೋಪ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇವರ ಮೇಲೆ ಮಾಡಿರುವ ಆರೋಪಗಳು ಶುದ್ದಸುಳ್ಳು ಎಂದು ಕುಡತಿನಿ ಲಾರಿ ಮಾಲೀಕ ವಿಸಿಕೆ ಚಂದ್ರಪ್ಪ ಸ್ಪಷ್ಟಪಡಿಸಿದರು.
ಕುಡಿತಿನಿ ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿರಾಜ್ ಟ್ರಾನ್ಸ್ ಪೋರ್ಟ್ ಕಡೆಯಿಂದ ಸ್ಥಳೀಯ ಲಾರಿ ಮಾಲೀಕರಿಗೆ ಯಾವುದೇ ಅನ್ಯಾಯವಾಗಿಲ್ಲ. ಆದರೆ, ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ಲಾರಿ ಮಾಲೀಕರನ್ನು ದಿಕ್ಕುತಪ್ಪಿಸಿ, ಹೋರಾಟ ಮಾಡುವ ಮೂಲಕ ವಿರಾಜ್ ಅವರ ಹೆಸರಿಗೆ ಕಪ್ಪುಚುಕ್ಕೆ ತರುವ ಹುನ್ನಾರವಾಗಿದೆ.
ಸ್ಥಳೀಯ ಲಾರಿ ಮಾಲೀಕರಿಗೆ ಸಾಗಾಣಿಕೆ ಆಗಲಿ ಮತ್ತು ಪೇಮೆಂಟ್ ಆಗಲಿ ಇದರಲ್ಲಿ ವಿರಾಜ್ ನವರು ಯಾವುದೇ ಮೋಸ ಮಾಡಿಲ್ಲ. ಅಸೋಸಿಯೇಷನ್ ನವರು ಆರ್ಟಿಓ ಅಧಿಕಾರಿಗಳಿಗೆ ದೂರು ನೀಡಿ,  ಕೆಲ ಲಾರಿ ಮಾಲೀಕರಿಗೆ ಹಾಗೂ ಚಾಲಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಸೋಸಿಯೇಷನ್ ನವರು ತಮ್ಮ ಬೇಳೆ ಬೆಯ್ಯಿಸಿಕೊಳ್ಳುವ ಸಲ್ಲುವಾಗಿ ಸ್ಥಳೀಯ ಲಾರಿ ಮಾಲೀಕರನ್ನು ಎತ್ತಿಕಟ್ಟುವ ಮೂಲಕ ಅವರ ಹೊಟ್ಟೆ ಮೇಲೆ ಬರೆ ಎಳೆಯಲು ಹೊರಟಿದ್ದಾರೆ.
ಇಂತವರ ಮಾತುಗಳಿಗೆ ಕಿವಿಗೊಡದೇ, ಸ್ಥಳೀಯ ಲಾರಿ ಮಾಲೀಕರು ಗಮನ ಹರಿಸಿ, ವಿರಾಜ್ ಟ್ರಾನ್ಸ್ ಪೋರ್ಟ್ ನವರು ನೀಡುವ ನ್ಯಾಯಯುತ ದರಕ್ಕೆ ಹೊಡೆಯಲು ಲಾರಿ ಮಾಲೀಕರು ಮುಂದಾಗಬೇಕು ಎಂದರು.
ನಂತರ ಲಾರಿ ಮಾಲೀಕ ಕೆ.ನಾಗರಾಜ ಮಾತನಾಡಿ, ವಿರಾಜ್ ಟ್ರಾನ್ಸ್ ಪೋರ್ಟ್ ನವರು ನೀಡುವ ನ್ಯಾಯಯುತ ದರವನ್ನು ಬೇರೆಯವರು ನೀಡುವುದಿಲ್ಲ. ಪ್ರತಿ ಟನ್ಗೆ ವಿರಾಜ್ ನವರು 367 ರೂ.ಗಳ ದರವನ್ನು ನೀಡುತ್ತಿದ್ದು, 2023ರ ಏಪ್ರಿಲ್ ತಿಂಗಳಿಂದ ಪ್ರತಿ ಟನ್ಗೆ 10 ರೂ.ಗಳ ಏರಿಕೆ ಮಾಡುವ ಭರವಸೆ ನೀಡಿದ್ದು, ಕೂಡಲೇ ಸ್ಥಳೀಯ ಲಾರಿ ಮಾಲೀಕರು ಎಚ್ವರವಹಿಸಿ, ಅಸೋಸಿಯೇಷನ್ ನವರ ಮಾತುಗಳಿಗೆ ಕಿವಿಗೊಡಬಾರದು ಎಂದರು.

One attachment • Scanned by Gmail