ವಿರಾಜಪೇಟೆಯಲ್ಲಿ ಎಂ.ಲಕ್ಷ್ಮಣ, ಎ.ಎಸ್ ಪೆÇನ್ನಣ್ಣ ಮತಯಾಚನೆ

ಸಂಜೆವಾಣಿ ನ್ಯೂಸ್
ಮೈಸೂರು,ಏ.19:- ವಿರಾಜಪೇಟೆ ಕ್ಷೇತ್ರವಾರು ಮುಂದುವರಿದ ಅಬ್ಬರದ ಪ್ರಚಾರವು ಸಂಜೆ ಭಾಗಮಂಡಲದಿಂದ ಪ್ರಾರಂಭಿಸಿ ಜನ ಸಭೆ ಕಾರ್ಯಕ್ರಮದಲ್ಲಿ ತಪ್ಪದೇ ಮತದಾನ ಮಾಡಲೇ ಬೇಕು ಎಂದು ಹೇಳಿ ಶಾಸಕರ ಜೊತೆಯಲ್ಲಿ ಲಕ್ಷ್ಮಣರವರು ಮತಯಾಚಿಸಿಕೊಂಡರು. ಅದೇ ಸಮಯದಲ್ಲಿ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿ ಪಕ್ಷದಲ್ಲಿದ್ದ ಕೆಲವರು ಪಕ್ಷ ಸೇರಿದರು. ಜನರ ಬಳಿ ಲಕ್ಷ್ಮಣ ರವರು ಕೈ ಮುಗಿದು ಮರೆಯದೆ ಮತ ನೀಡಿ ಅವಕಾಶವನ್ನು ಕೈತಪ್ಪಿಸಿಕೊಳ್ಳ ಬೇಡಿ ಎಂದು ಹೇಳಿ ಮತಯಾಚನೆ ಮಾಡಿ ಸಂಪಾಜೆಗೆ ಭೇಟಿ ನೀಡಿದರು.
ಜನಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿ ಮುಂದಿನ ದಿನ ಪ್ರಜಾಪ್ರಭುತ್ವದ ವ್ಯವಸ್ಥೆ ಎಷ್ಟು ಮಹತ್ವವಿದೆ ಹಿಂದೆ ಇದ್ದ ಸಂಸದರನ್ನು ನಾವು ನೋಡಿಲ್ಲ ಈಗ ನೀವು ಬಂದಿದ್ದೀರಾ ನಿಮ್ಮ ಮಾತಿನಲ್ಲಿ ನಮ್ಮ ಕಷ್ಟಗಳನ್ನು ಗೆದ್ದ ಬಳಿಕ ಕೇಳುತ್ತೀರಾ ಎಂಬ ನಂಬಿಕೆ ನಮಗಿದೆ ಈ ಬಾರಿ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ ಬಳಿಕ ಎಲ್ಲರಲ್ಲೂ ಕೈ ಮುಗಿದು ಮತ ಕೇಳಿದರು.
ಇದೆ ಸಂದರ್ಭದಲ್ಲಿ ಶಾಸಕರಾದ ಪೆÇನ್ನಣ್ಣ ರವರು ಮಾತನಾಡುತ್ತ ನೀವೆಲ್ಲ ಬಂದಿರುವುದನ್ನು ನೋಡುತ್ತಿದ್ದರೆ ಲಕ್ಷ್ಮಣರವರು ಗೆಲ್ಲುವ ಸಂಕೇತ ತೋರುತಿದೆ. ಕಳೆದ ಚುನಾವಣೆ ಯಲ್ಲಿ ನಾವು ನಿಮ್ಮ ಮನೆ ಬಾಗಿಲಿಗೆ ಬಂದು ಗ್ಯಾರಂಟಿ ಕಾರ್ಡ್ ಕೊಟ್ಟಿ ನಮ್ಮ ಮೇಲೆ ವಿಶ್ವಾಸವಿಡಿ ಎಂದು ಕೇಳಿ ಕೊಂಡಿದ್ದೆವು. ಗೆದ್ದ ಬಳಿಕ ಬಹಳ ಸಮಯ ತೆಗೆದು ಕೊಳ್ಳದೆ ಎಲ್ಲವನ್ನೂ ಅನುಷ್ಠಾನಕ್ಕೆ ತಂದಾಗಿದೆ. ಮಾತಿಗೆ ಬೆಲೆ ಇರಬೇಕು ಗೆದ್ದ ಬಳಿಕ ಜನರನ್ನು ನಿರ್ಲಕ್ಷ ಮಾಡಬಾರದು. ನಾವು ಹಾಗೆ ಮಾಡಿದ್ದಿದ್ದರೆ ಜನಗಳ ವಿರೋಧಿ ಗಳಾಗುತ್ತಿದ್ದೇವಿ ಆದರೆ ನೀವು ಕೊಟ್ಟಿರುವ ಅಧಿಕಾರದಲ್ಲಿ ನಿಮ್ಮ ಕಣ್ಣೋರಿಸುವ ಕೆಲಸ ಮಾಡಿದ್ದೇವೆ. ಜನರಿಗೆ ಅನುಕೂಲವಾಗಬೇಕು ರಾಜ್ಯ ಸಮೃದ್ಧಿಯಾಗಿರಬೇಕು ಇದು ನಮ್ಮ ಉದ್ದೇಶ. ಸರ್ವ ಧರ್ಮಗಳ ಅಭಿವೃದ್ದಿಯಲ್ಲಿ ನಮ್ಮ ಕ್ಷೇತ್ರ ನಡೆಯುತ್ತಿದೆ. ಜನರ ಆಶೀರ್ವಾದ, ಪ್ರೀತಿ, ವಿಶ್ವಾಸ, ಇರುವವರೆಗೂ ನಮ್ಮ ಕಾಂಗ್ರೆಸ್ ಪಕ್ಷವನ್ನು ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ. ಮಳೆಯ ಸಂದರ್ಭದಲ್ಲಿ ಕೊಡಗು ತತ್ತರಿಸಿ ಹೋಗುತ್ತಿತ್ತು ಅದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಹೆಣಗಳ ಜೊತೆಯಲ್ಲಿದ್ದು ಅಂತ್ಯಸಂಸ್ಕಾರದ ಕೆಲಸ ಮಾಡಿದ್ದೇವೆ. ಆಗಾಗಿ ನನ್ನ ಕೈ ಬಲ ಗೊಳಿಸಬೇಕೆಂದರೆ ಲಕ್ಷ್ಮಣ ರವರ ಕೈ ಹಿಡಿಯ ಬೇಕು ನೀವೆಲ್ಲ. ಇವರೆಲ್ಲ ನಿಮ್ಮ ಬಳಿ ಬಂದು ಹೇಳುತ್ತಾರೆ ರಾಜ್ಯದಲ್ಲಿ ಯೋಜನೆಗಳನ್ನು ಕೊಟ್ಟು ಸಾಲ ಮಾಡಿ ಮುಂದೆ ನಿಮ್ಮ ಮೇಲೆ ಸಾಲದ ಹೊರೆ ಹಾಕುತ್ತಾರೆ ಎಂದು ಹೇಳುತ್ತಾರೆ ನೀವು ಯಾವ ನೈತಿಕತೆ ಇಟ್ಟುಕೊಂಡು ಮತಕೇಳಲಿಕ್ಕೆ ಬಂದಿದ್ದೀರಾ ಇಷ್ಟು ದಿನ ನಮ್ಮ ಕಷ್ಟ ಕಾಣಿಸಲಿಲ್ಲವ ಎಂದು ಹೇಳಿಕಳಿಸಬೇಕು ನೀವು. ಸತ್ಯ ಮನೆ ಬಾಗಿಲಿಗೆ ಬಂದಿದೆ ನೀವು ತೂಕ ಮಾಡಿ ನಿಮ್ಮ ಬೆನ್ನೆಲುಬಾಗಿ ನಿಂತಿರುವವರ ಜೊತೆ ಇರಿ. ಸುಳ್ಳು ಹೇಳಿಕೊಂಡು ಬರುವವರಿಗೆ ಎಂದಿಗೂ ಬೆಂಬಲ ಸಿಗಬಾರದು. ನಮ್ಮ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲಿಕ್ಕೆ ನಮ್ಮ ಅಭ್ಯರ್ಥಿ ಲಕ್ಷ್ಮಣ ರವರು ಈಗಾಲೇ ಪ್ರಣಾಳಿಕೆ ಬಿಡುಗಡೆ ಮಾಡಿ ಗೆದ್ದ ಬಳಿಕ ಮೊದಲು ಇದನ್ನೆಲ್ಲ ಮಾಡೇ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಯಾವುದಾದ್ರೂ ಪಕ್ಷ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಿ ಆಲೋಚನೆ ಮಾಡಿ ಗೆಲ್ಲುವ ಮುನ್ನವೇ ಪ್ರಣಾಳಿಕೆ ನೀಡುತ್ತದೆ ಎಂದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆ ಕೆಲಸವನ್ನು ಲಕ್ಷ್ಮಣರವರು ಮಾಡಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲ ಕೊಡಿ ನಿಮ್ಮ ಪರ ನಾನು ಮತ್ತೆ ಅವರು ಇರುತ್ತೇವೆ ಕೆಲಸ ಮಾಡಿ ನಿಮ್ಮ ಸೇವೆಗೆ ಮುಂದಾಗುತ್ತೇವೆ. ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಎಂ ಲಕ್ಷ್ಮಣ ರವರು ಮಾತನಾಡುತ್ತ ನಿಮ್ಮ ತಲೆ ಮೇಲೆ 1 ಲಕ್ಷ ಸಾಲದ ಹೊರೆ ಹಾಕಿದ್ದಾರೆ. ನಿಮಗೆಲ್ಲ ತಿಳಿಯದ ರೀತಿ ನಿಮ್ಮ ಬಳಿ ಹಣ ತೆಗೆದು ಕೊಳ್ಳುತ್ತಿದ್ದಾರೆ. ನೀವು ಕಟ್ಟುತ್ತಿರುವ ಜಿ ಎಸ್ ಟಿ ಆ ಭೂತದಿಂದ ಹಣವನ್ನು ನಿಮಗೆ ಗೊತ್ತಾಗದ ಹಾಗೆ ಪಡೆದು ನಿಮ್ಮನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. ಅದೆಲ್ಲ ತಿಳಿಯದೆ ಮೋದಿ ನೋಡಿಕೊಂಡು ಮತ ಹಾಕಬೇಕು ಎಂದು ಹೇಳುತ್ತಾರೆ ನಂಬಿ ಮೋಸ ಹೋಗಿದ್ದೀರಾ ಮತ್ತೆ ನಂಬಬೇಡಿ. ಕಾಂಗ್ರೆಸ್ ಸರಕಾರ ಕೊಟ್ಟ ಅನ್ನಭಾಗ್ಯದಿಂದ ಇಂತ ಬರ ಪರಿಸ್ಥಿತಿ ಬಂದಿದ್ದರು ಸಹ ಬಡವರು ಮೂರು ಒತ್ತು ಹೊಟ್ಟೆ ತುಂಬ ಊಟ ಮಾಡುತ್ತಿದ್ದಾರೆ.
ಗ್ಯಾರಂಟಿ ಯೋಜನೆ ಗಳ ಬಗ್ಗೆ ವಿದೇಶದಲ್ಲಿ ಇರುವವರು ಅಧ್ಯಯನ ಮಾಡಿ ಕೇಳಿ ಸಂತಸ ಪಡುತ್ತಿದ್ದಾರೇ ಆದರೆ ವಿರೋಧ ಪಕ್ಷದವರು ಜನರನ್ನು ಸೋಮಾರಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಶ್ರೀಮಂತರು ಅವರೆಲ್ಲ ಅವರಿಗೇನು ಗೊತ್ತು ಜನರ ಕಷ್ಟ. ಪ್ರಜಾಪ್ರಭುತ್ವವನ್ನು ಕಗ್ಗತ್ತಲು ಮಾಡಲಿಕ್ಕೆ ಹೊರಟಿರುವವರಿಗೆ ಜನರು ಎಲ್ಲಿ ಕಾಣಿಸುತ್ತಾರೆ. ಮತ್ತೆ ಅಂತವರಿಗೆ ಅವಕಾಶ ಕೊಟ್ಟರೆ ನಾವೆಲ್ಲರೂ ಭಿಕ್ಷೆ ಬೇಡುವ ರೀತಿ ಮಾಡುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅತ್ಯಂತ ಲೀಡ್ ಕೊಟ್ಟಿದ್ದೀರಾ ಕೆಲಸ ಮಾತ್ರ ಮಾಡಿಲ್ಲ ಮತ್ತೆ ನಿಮ್ಮ ಬಳಿ ಯಾವ ಮುಖ ಹೊತ್ತು ಬಂದು ಮಾತಕೇಳುತ್ತರೋ ಬಿಜೆಪಿಯವರು. ನೀವೆಲ್ಲರೂ ನಿಮ್ಮ ಮಕ್ಕಳ ಭವಿಷ್ಯ ನೋಡಿ ಅವರ ಬದುಕಿನ ಭವಿಷ್ಯವನ್ನೂ ತಿರುಚುವ ಕೆಲಸ ಮಾಡುತ್ತಾರೆ. ದೇಶ ಉಳಿಯಲು ಯುವಕರು ಯುವತಿಯರು ಬಹಳ ಮುಖ್ಯ. ಅವರೆಲ್ಲ ಅರಿತು ನಿಮ್ಮ ಮನೆಗೆ ತಿಳಿಸಿ ಉತ್ತಮ ವ್ಯಕ್ತಿಯನ್ನು ಆರಿಸುವುದು ನಿಮ್ಮಗಳ ಕರ್ತವ್ಯ ದಯ ಮಾಡಿ ಅದನ್ನು ಮಾಡಿ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಶಾಸಕರಾದ ಎ. ಎಸ್ ಪೆÇನ್ನಣ್ಣ ರವರು ಜಿಲ್ಲಾಧ್ಯಕ್ಷರಾದ ದರ್ಮಜ ಉತ್ತಪ್ಪ, ಪಕ್ಷದ ಹಿರಿಯ ನಾಯಕರುಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ, ಸೆಲ್ ಅಧ್ಯಕ್ಷರುಗಳು ಮತ್ತು ಪ್ರಮುಖರು ಭಾಗವಹಿಸಿದರು