ಬೀದರ್: ಪೂಜ್ಯ ಭಂತೆ ಸಂಘರಖೀತ್ ಆಣದೂರ ರವರ ನೇತೃತ್ವದಲ್ಲಿ ಬೀದರನಿಂದ 13 ಜನ ಉಪಾಸಕ ಉಪಾಸಕಿಯರು ದಿನಾಂಕ 23-5-23 ರಿಂದ 31-5-23 ಒಂದು ವಾರಗಳ ಕಾಲ ವಿಯೆಟ್ನಾಂ ಬೌದ್ಧ ರಾಷ್ಟ್ರದ ಪ್ರವಾಸ ಮಾಡಿ ಅಲ್ಲಿನ ಸಂಸ್ಕøತಿ ಸಾಹಿತ್ಯ, ಶಿಕ್ಷಣ ಮತ್ತು ಬೌದ್ಧ ಧರ್ಮದ ಅಧ್ಯಯನ ಕೈಗೊಂಡು ಯಶಸ್ವಿ ಪ್ರವಾಸ ಮುಗಿಸಿ ವಾಪಸ್ಸಾದ ಪ್ರಯುಕ್ತ ಬೀದರ ರೈಲ್ವೆ ಸ್ಟೇಷನ್ ನಲ್ಲಿ ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪಂಚಶೀಲ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿ ಶುಭಹಾರೈಸಿದರು.
ಯಾತ್ರೆಯಲ್ಲಿ ಪ್ರಮುಖರಾದ ರಮೇಶ ಮಂದಕನಳ್ಳಿ, ಅರುಣ ಪಟೇಲ್, ಪುನಿತಾ ಗಣಪತಿ ಗಾಯಕವಾಡ, ಸುದೇವಿ ಲಕ್ಷ್ಮಣರಾವ ಕಾಂಚೆ, ವಿದ್ಯಾವತಿ ಕಾಶಪ್ಪಾ ರಾಮಬಾಣ, ದೈವಶಾಲಾ ಗೋರಖನಾಥ ಸದಾಫುಲೆ, ಬಾಯಮ್ಮಾ ಅಮಲಾಪೂರ, ಸಾವಿತ್ರಿ ಕುಂದನ್ ವನಿತಾ ಕಾಂಚೆ ಇದ್ದರು.