ವಿಯೆಟ್ನಾಂಗೆ ಭಾರತದ ಕಾರ್ವೆಟ್ ಕ್ಷಿಪಣಿ ಉಡುಗೊರೆ

ನವದೆಹಲಿ,ಜೂ.೨೦- ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಅನ್ನು ಭಾರತ , ವಿಯೆಟ್ನಾಂಗೆ ಉಡುಗೊರೆಯಾಗಿ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ಚೀನಾದ ಕಣ್ಣು ಕ್ಷಿಪಣಿಯತ್ತ ನೆಟ್ಟಿದೆ.

ಚೀನಾದ ಆಕ್ರಮಣಕಾರಿ ಮನೋಭಾವನೆಯ ಮೇಲೆ ಕಣ್ಣಿಡುವ ಉದ್ದೇಶದಿಂದ ಭಾರತ, ವಿಯೆಟ್ನಾಂಗೆ ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಅನ್ನು “ಉಡುಗೊರೆ”ಯಾಗಿ ನೀಡಲಿದೆ

ಜಲಾಂತರ್ಗಾಮಿ ಮತ್ತು ಫೈಟರ್ ಜೆಟ್ ಕಾರ್ಯಾಚರಣೆಗಳಲ್ಲಿ ವಿಯೆಟ್ನಾಂ ಸಿಬ್ಬಂದಿಗಳ ತರಬೇತಿ ಹೆಚ್ಚಿಸಲು ಸಹಕಾರಿಯಾಗಲಿದೆ.ಸೈಬರ್ – ಭದ್ರತೆ ಮತ್ತು ಎಲೆಕ್ಟ್ರಾನಿಕ್ ಯುದ್ಧ, ಇತರ ಕ್ಷೇತ್ರಗಳ ನಡುವೆ ಸಹಕಾರ ಮನೋಭಾವನೆ ಹೆಚ್ಚಿಸಲು ನೆರವಾಗಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ವಿಯೆಟ್ನಾಂ ಸಹವರ್ತಿ ಜನರಲ್ ಫಾನ್ ವ್ಯಾನ್ ಗಿಯಾಂಗ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆ ನಡೆಯುವ ವೇಳೆ ವಿಯಟ್ನಾಂಗೆ ಭಾರತ ಕ್ಷಿಪಣಿ ನೀಡಲು ಮುಂದಾಗಿದೆ.

ವಿಶೇಷವಾಗಿ ರಕ್ಷಣಾ-ಕೈಗಾರಿಕಾ ಸಹಕಾರ, ಕಡಲ ಭದ್ರತೆ ಮತ್ತು ಬಹುರಾಷ್ಟ್ರೀಯ ಸಹಕಾರ ಕ್ಷೇತ್ರದಲ್ಲಿ
ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ಇತರ ಮಿಲಿಟರಿ ಯಂತ್ರಾಂಶ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯ ಕಡೆಗೆ ಸಹಕಾರ ವರ್ಧನೆಗೆ ಅನುಕೂಲವಾಗಲಿದೆ.

ಸ್ವದೇಶಿ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಸ್ವಾಧೀನಪಡಿಸಿಕೊಳ್ಳುವ ಕುರಿತು ಚರ್ಚೆ ನಡೆಸುತ್ತಿರುವ ವಿಯೆಟ್ನಾಂ, ತಂತ್ರಜ್ಞಾನ ವರ್ಗಾವಣೆಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದೆ” ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ನೌಕಾಪಡೆಯೊಂದಿಗೆ ಸೇವೆಯಲ್ಲಿರುವ ೧,೩೫೦ ಟನ್ ತೂಕದ ಖುಕ್ರಿ-ಕ್ಲಾಸ್ ಕ್ಷಿಪಣಿ ಕಾರ್ವೆಟ್ ಅನ್ನು ಐಎನ್‌ಎಸ್ ಕಿರ್ಪಾನ್ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. “ವಿಯೆಟ್ನಾಂ ಪೀಪಲ್ಸ್ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಒಂದು ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.