
ಬಳ್ಳಾರಿ ಮಾ 15 : ನಗರದ ವಿಮ್ಸ್ ಮೈದಾನವನ್ನು ಅಭಿವೃದ್ದಿಪಡಿಸಲು ಖಾಸಗಿ ಸಂಸ್ಥೆಗೆ ನೀಡದಿರುವಂತೆ ವಿರೋಧಿಸಿ ಇಂದು ವಿಮ್ಸ್ ನಿರ್ದೇಶಕರ ಕಚೇರಿ ಎದುರಿನಲ್ಲಿ ವಿಮ್ಸ್ ಮೈದಾನ ಉಳಿಸಿ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು.
ಸಮಿತಿಯ ಮುಖಂಡರಾದ
ಎಂ. ಹನುಮ ಕಿಶೋರ್, ಕೆ ಏರಿಸ್ವಾಮಿ, ಮುರಳಿ, ಕೃಷ್ಣ, ಆದಿ ಮೂರ್ತಿ, ಗಾದಿಲಿಂಗಪ್ಪ, ರಾಮು, ಚಂದ್ರಶೇಖರ್, ಗಂಗಣ್ಣ, ಗೋಪಾಲ್, ಶ್ರೀನಿವಾಸ್, ವೆಂಕಟೇಶ್, ಪ್ರಸಾದ್, ನಾಗರಾಜ್, ಕಿಶೋರ್, ರಂಗಸ್ವಾಮಿ, ಪಂಪಾಪತಿ, ಹೊನ್ನೂರಪ್ಪ, ನೀಲಕಂಠ, ಲಿಂಗಣ್ಣ ಮೊದಲಾದವರು ಪ್ರತಿಭಟನೆ ನಡೆಸಿ ವಿಮ್ಸ್ ಆಡಳಿತದ ವಿರುದ್ದ ಘೋಷಣೆ ಕೂಗಿದರು.
ಸ್ಥಳಕ್ಕೆ ಬಂದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರಿಗೆ ಜಿ.ಸಿ. ಮೀಟಿಂಗ್ ನಲ್ಲಿ ಮೈದಾನ ಖಾಸಗಿಯವರಿಗೆ ನೀಡುವ ಕುರಿತು ಯಾವುದೇ ಚರ್ಚೆ ನಡೆಯದಿದ್ದರೂ. ಮೈದಾನದಲ್ಲಿ ಅವರು ಬಂದು ಕೆಲಸ ಮಾಡಲು ಬಿಟ್ಟಿದ್ದು ಹೇಗೆ. ಕೂಡಲೇ ಅಲ್ಲಿನ ಸಾಮಾಗ್ರಿಗಳನ್ನು ಮತ್ತು ಅವರು ಅಳವಡಿಸಿರುವ ಸಿಸಿ ಕೆಮೆರಾಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸಮ್ಮತಿಸಿದ ನಿರ್ದೇಶಕರು ಈ ಕೂಡಲೇ ಮೈದಾನದಲ್ಲಿ ಸಾಮಾಗ್ರಿಗಳನ್ನು ತೆರವುಗೊಳಿಸಲು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.