ವಿಮ್ಸ್ ನ ಲೋಪದೋಷ ಸರಿಪಡಿಸಲು ಆಗ್ರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.15: ನಗರದಲ್ಲಿನ ವಿಮ್ಸ್ ಆಸ್ಪತ್ರೆ ದಿನ ನಿತ್ಯ ಸಾವಿರಾರು ರೊಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದು ಸ್ವಾಗತಾರ್ಹ. ಆದರೆ ಕೆಲ ಲೋಪ ದೋಷಗಳಿದ್ದು ಅವನ್ನು ಸರಿಪಡಿಸಬೇಕೆಂದು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸಂಘರ್ಷ ಸಮಿತಿ  ಆಸ್ಪತ್ರೆಯ ನಿರ್ದೇಶಕರಿಗೆ ಆಗ್ರಹಿಸಿದೆ.
ಸಮಿತಿಯ ಅಧ್ಯಕ್ಷ ಮಹೇಶ್ ಕುರುವಳ್ಳಿ, ಸಹ ಕಾರ್ಯದರ್ಶಿ ಜಿ.ವಿಶ್ವನಾಥ ಮೊದಲಾದವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ.
ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚೀಟಿ ಮಾಡುವ ಕೌಂಟರ್ ಹಾಗೂ ವಿವಿಧ ಪರೀಕ್ಷೆಗಳಿಗೆ ಹಣ ಪಾವತಿ ಮಾಡುವ ಕೌಂಟರ್ ದೂರ ಇದ್ದು ಅವನ್ನು ಚಿಕಿತ್ಸೆ ಕೊಡುವ ವೈದ್ಯರ ಕೊಠಡಿ ಪಕ್ಕದಲ್ಲಿ ಸ್ಥಾಪಿಸಬೇಕು.
ಐಸಿಯು ಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿದೆ. ತುರ್ತು ಚಿಕಿತ್ಸೆಗಳಿಗೆ ಇದರಿಂದ ತೊಂದರೆ ಇದೆ, ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಎಲ್ಲಾ ಜಿಲ್ಲಾ ಮೆಡಿಕಲ್ ಆಸ್ಪತ್ರೆಗಳಿಗೂ ಕೋಟ್ಯಂತರ ರೂ. ಹಣವನ್ನು ಬಿಡುಗಡೆ ಮಾಡುತ್ತಿದ್ದರು.  ಅಗತ್ಯವಿರುವಷ್ಟು ವೆಂಟರೇಟ‌ಗಳನ್ನು ಹಾಗೂ ತುರ್ತು ಚಿಕಿತ್ಸೆಯ ಇತರ ಪರಿಕರಗಳನ್ನು ಖರೀದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುಬೇಕಿದೆ.
ಆಸ್ಪತ್ರೆಯ ಶೌಚಾಲಯಗಳು ಸ್ವಚ್ಚತೆಯಿಂದ ಕೂಡಿಲ್ಲ. ದುರ್ನಾಥ ಬೀರುತ್ತಿದ್ದೂ ಇದಕ್ಕೆ ಕಾರಣ ನೀರಿನ ಕೊರತೆಯೋ? ನಿರ್ವಹಣೆಯ ಕೊರತೆಯೋ? ಸ್ವಚ್ಛವಾದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ವ್ಹೀಲ್  ಚೇರ್ ಗಳಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುವುದಕ್ಕೆ ಆಯಾಗಳು ಹಣಕ್ಕಾಗಿ ಪೀಡಿಸುತ್ತಿರುವ ದೂರುಗಳು ಬಹಳಷ್ಟಿವೆ. ಈ ತೊಂದರೆಯನ್ನು ನಿವಾರಿಸಬೇಕು.  ಟ್ರಾಮಾ ಕೇರ್ ಸೆಂಟರ್ ನಲ್ಲಿ  ಕ್ಷ-ಕಿರಣದ ಯಂತ್ರಗಳು ಅಗತ್ಯಕಿಂತ ಕಡಿಮೆ ಇವೆ.  ಇದರಿಂದ ರೋಗಿಗಳಿಗೆ  ತೊಂದರೆಯಾಗುತ್ತಿದೆ. ಅಗತ್ಯವಿರುವಷ್ಟು ಯಂತ್ರಗಳನ್ನು ಅಡವಳಿಸಬೇಕು.
ವಾರ್ಡ್‌ಗಳಲ್ಲಿ ನರ್ಸ್‌ಗಳು ಸಕಾಲಕ್ಕೆ ಇರುವುದಿಲ್ಲ, ಕರ್ತವ್ಯದಲ್ಲಿ  ನಿರ್ಲಕ್ಷ್ಯತೆಗಳಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ಈ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ  ಗೌರವ ಅಧ್ಯಕ್ಷ ಶಿವಕುಮಾರ್,  ರಾಮ್ ಕುಮಾರ್, ಚಂದ್ರ ಪ್ರಕಾಶ್, ಪಂಪಾಪತಿ ಮತ್ತಿತರರು  ಇದ್ದರು