ವಿಮ್ಸ್ ನ ಮಕ್ಕಳ ತಜ್ಞರಿಂದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ


ಸಂಜೆವಾಣಿ ವಾರ್ತೆ,
ಸಂಡೂರು: ಮೇ: 19:  ತಾಲೂಕಿನ ಸಂಡೂರು ಪಟ್ಟಣದ ಬಾಲ ಚೈತನ್ಯ ಶಿಬಿರದಲ್ಲಿರುವ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಇಂದು ವಿಮ್ಸ್ ನ ಮಕ್ಕಳ ತಜ್ಞರಾದ ಡಾ.ರಿಯಾಜ್ ಅಹಮ್ಮದ್, ಡಾ.ರಾಜೇಶ್,ಡಾ.ರಾಮಕೃಷ್ಣ ಇವರ ಆಗಮಿಸಿ ತಪಾಸಣೆ ಕಾರ್ಯ ಕೈಗೊಂಡರು, ಒಟ್ಟು 34 ಮಕ್ಕಳ ತಪಾಸಣೆ ಕೈಗೊಂಡರು, ಇವರಲ್ಲಿ ಒಂದು ಹೃದಯ ಸಂಬಂಧಿ ಕಾಯಿಲೆ,ಮೆದುಳು ಬೆಳವಣಿಗೆ ಕುಂಠಿತ, ವಿಳಂಬ ಬೆಳವಣಿಗೆ  ಮತ್ತು ಪಾಶ್ರ್ವವಾಯು ಪ್ರಕರಣಗಳನ್ನು ವಿಮ್ಸ್ ಗೆ ಸೂಚಿಸಿದರು, ಇನ್ನುಳಿದಂತೆ ಮಕ್ಕಳಲ್ಲಿ ಅಪೌಷ್ಟಿಕತೆ, ಅತಿಸಾರ,ರಕ್ತಹೀನತೆ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡಿದರು,
ಹಾಗೆಯೇ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಕ್ಕಳ ತಾಯಂದಿರಿಗೆ ಅಪೌಷ್ಟಿಕ ವಿಷ ವರ್ತುಲದಿಂದ ಮಕ್ಕಳು ಹೊರ ಬಂದು ಆರೋಗ್ಯ ರಕ್ಷಿಸುವುದು, ಜಂತು ಹುಳುಗಳ ಬಾಧೆ  ನಿವಾರಣೆ, ವೈಯಕ್ತಿಕ ಸ್ವಚ್ಛತೆ ಬಗ್ಗೆ  ಹಾಗೂ ಊಟಕ್ಕೆ ಮುಂಚೆ,ಶೌಚಾಲಯಕ್ಕೆ ಹೋಗಿ ಬಂದ  ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಬಗ್ಗೆ ಅರಿವು ಮೂಡಿಸಲಾಯಿತು, ಆಶಾ ಕಾರ್ಯಕರ್ತೆ ಜಲಜಾಕ್ಷಿ ಅವರು ತಾಯಂದಿರಿಗೆ ಕೈತೊಳೆಯುವುದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು, 9 ಡ್ರಾಪ್ಔಟ್ ಮಕ್ಕಳಿಗೆ ಲಸಿಕೆ ನೀಡಲಾಯಿತು,
 ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್,ಸಿ.ಡಿ.ಪಿ.ಒ ಎಳೆನಾಗಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್, ಡಾ.ಅಕ್ಷಯ್ ಎಕ್ ಬೋಟೆ,ಡಾ.ದಿಲೀಪ್ ಕುಮಾರ್, ಶ್ರೀಮತಿ ಜಯಲಕ್ಷ್ಮಿ ಎಮ್.ಆಂಡ್ ಇ,  ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ನಾಗಭೂಷಣ್,ಶುಶ್ರೂಷಕಿ ನಾಗಮ್ಮ, ನಾಗವೇಣಿ,ಪಾರ್ಮಸಿ ಅಧಿಕಾರಿ ದೀಪಾ, ಐ.ಸಿ.ಡಿ.ಎಸ್  ಮಹಿಳಾ ಮೇಲ್ವಿಚಾರಕಿ ಎಮ್.ಎಮ್.ಭಜಂತ್ರ,ಲಕ್ಷ್ಮಿ,ಎ.ಪಿ ಕುಂಬಾರ್,ಗೀತಾ,ಶರಣಬಸವೇಶ್ವರಿ,ಚೇತನಾಗೌಡ ಇತರರು ಉಪಸ್ಥಿತರಿದ್ದರು