ವಿಮ್ಸ್ ನ ಖಾಯಂ ನಿರ್ದೇಶಕ ಸ್ಥಾನಕ್ಕೆ ಆ 8 ಸಂದರ್ಶನ ಆರು ಜನ ಆಕಾಂಕ್ಷಿಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,6- ಇಲ್ಲಿನ ವಿಮ್ಸ್ ಸಂಸ್ಥೆಗಳು ನಿರ್ದೇಶಕ ಸ್ಥಾನಕ್ಕೆ ಖಾಯಂ ನಿರ್ದೇಶಕರ ನೇಮಕಕ್ಕೆ ಆ 8 ರಂದು ಸಂದರ್ಶನ ನಡೆಯುತ್ತದೆ. ನಿರ್ದೇಶಕರಾಗಲು ಬಯಸಿ ಆರು ಜನ ಅರ್ಜಿ ಸಲ್ಲಿಸಿದ್ದಾರಂತೆ.
ಕಳೆದ ಹಲವು ವರ್ಷಗಳಿಂದ ನಿರ್ದೇಶಕ ಸ್ಥಾನಕ್ಕೆ ತಾತ್ಕಾಲಿಕವಾಗಿ ನೇಮಕ ಮಾಡುತ್ತ ಬಂದಿತ್ತು. ಆದರೆ ಈಗ ರಾಜ್ಯ ಸರ್ಕಾರ ಬಳ್ಳಾರಿಯ ವಿಮ್ಸ್ ಸೇರಿದಂತೆ
ಮೈಸೂರು ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೀದರ್‌ನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಸರ್ಕಾರಿ ದಂತ ಕಾಲೇಜು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ, ಧಾರವಾಡದ ಮಾನಸಿಕ ಆರೋಗ್ಯ ನರ ವಿಜ್ಞಾನ ಸಂಸ್ಥೆ, ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ ಸಂಜಯ್ ಗಾಂಧಿ ಡ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಯಾದಗಿರಿಯ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ನೆಪ್ರೋ ಯುರಾಲಜಿ ಸಂಸ್ಥೆ, ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗಳಲ್ಲಿ ಕಾಯಂ ನಿರ್ದೇಶಕರನ್ನು ನೇಮಿಸಲು ಮುಂದಾಗಿದೆ.
ರಾಜ್ಯದಲ್ಲಿ 60ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಅದರಲ್ಲಿ ಸರಕಾರದ 22 ಕಾಲೇಜುಗಳಿವೆ. ಅದರಲ್ಲಿ ಕೇವಲ 8 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮಾತ್ರ ಕಾಯಂ ನಿರ್ದೇಶಕರು ಇದ್ದರು. ಇದೀಗ ಉಳಿದ ಎಲ್ಲಾ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಗಳಲ್ಲಿ ಕಾಯಂ ನಿರ್ದೇಶಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂದರ್ಶನ ನಡೆಸಿದೆ.
ಬಳ್ಳಾರಿ ವಿಮ್ಸ್ ಗೆ ಹಾಲಿ ನಿರ್ದೇಶಕರಾಗಿರುವ ಡಾ.ಟಿ.ಗಂಗಾಧರಗೌಡ, ಇಎನ್ ಟಿ ತಜ್ಞ ಡಾ.ಎನ್, ಮಂಜುನಾಥ, ಮಾಜಿ ನಿರ್ದೇಶಕ ಡಾ.ಶ್ರೀನಿವಾಸ್, ಆರ್ಥೋಪಿಡಿಕ್ ಸರ್ಜನ್ ವೆಂಕಟೇಶಲು, ಅಶ್ವಿನಿ ಕುಮಾರ್ ಸಿಂಗ್, ಮಾಜಿ ಸೂಪರಿಂಟೆಂಡೆಂಟ್ ಡಾ.ಮರಿರಾಜ್ ನಿರ್ದೇಶಕರಾಗಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಇವರಲ್ಲಿ ಆಯ್ಕೆಯಾದವರು ಮುಂದಿನ ಮೂರು ವರ್ಷಗಳಿಗೆ ಕಾಯಂ ನಿರ್ದೇಶಕರಾಗಿ ಇರಲಿದ್ದು. ವಿಮ್ಸ್ ಅಭಿವೃದ್ಧಿಗೆ ಸಹಕಾರಿಯಾಗಲಿದೆ.