ವಿಮ್ಸ್ ನಿರ್ದೇಶಕರಾಗಿ ಡಾ|| ಗಂಗಾಧರಗೌಡ ನೇಮಕ

ಬಳ್ಳಾರಿ, ಜ.07: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ನ ನೂತನ ನಿರ್ದೇಶಕರಾಗಿ ಸಮುದಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|| ಗಂಗಾಧರಗೌಡ ಅವರು ಇಂದು ಕಾರ್ಯಭಾರ ವಹಿಸಿಕೊಂಡಿದ್ದಾರೆ.
ಡಾ|| ದೇವಾನಂದ ಅವರು ಈ ವರೆಗೆ ವಿಮ್ಸ್ ನಿರ್ದೇಶಕರಾಗಿದ್ದರು. ವಿಮ್ಸ್ ನಿರ್ದೇಶಕರಾಗಿ ನಿಧನ ಹೊಂದಿದ ಎಲ್.ಎನ್.ರೆಡ್ಡಿ ಅವರ ನಂತರ ದೇದಾನಂದ ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ವಿಮ್ಸ್ ನ ಹೊರಂಗಣವನ್ನು ಅಭಿವೃದ್ಧಿಪಡಿಸಿದ್ದರು. 24×7 ಔಷಧಿ ವಿತರಣೆ ಸೇರಿದಂತೆ ಹಲವಾರು ಬದಲಾವಣೆ ತಂದಿದ್ದರೂ ವಿಮ್ಸ್ ನಲ್ಲಿ ರೋಗಿಗಳಿಂದ ಕೆಳಹಂತದ ಸಿಬ್ಬಂದಿ ಹಣ ವಸೂಲಿ ವೈದ್ಯರು ತಕ್ಷಣ ರೋಗಿಗಳಿಗೆ ಚಿಕಿತ್ಸೆ ನೀಡದೆ ತಮ್ಮ ಇಲ್ಲವೇ ತಾವು ಭೇಟಿ ಕೊಡುವ ನರ್ಸಿಂಗ್ ಹೋಂಗಳಿಗೆ ಕರೆಸುವುದು ನಿಲ್ಲಿಸಲಾಗಿರಲಿಲ್ಲ. ಅಲ್ಲದೆ ಕರ್ತವ್ಯಕ್ಕೆ ಬರದೆ ಬೇರೆ ಊರುಗಳಲ್ಲಿದ್ದವರಿಗೂ ವೇತನ ನೀಡುವುದನ್ನು ನಿಲ್ಲಿಸುವುದಾಗಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಪ್ರಯತ್ನವಾಗಲಿ ಆಗಲಿಲ್ಲ. ಟ್ರಾಮ್ ಕೇರ್ ಸೆಂಟರ್ ಉದ್ಘಾಟನೆ, ಶಾಸ್ತ್ರ ಚಿಕಿತ್ಸಾ, ಸಂಕೀರ್ಣ ಮೊದಲಾದ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ 2013ರಲ್ಲಿಯೇ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್ ಅವಧಿಯಲ್ಲಿಯೇ ಗಂಗಾಧರಗೌಡ ಅವರು ನಿರ್ದೇಶಕರಾಗಿದ್ದರು. ಆದರೆ ಅವರನ್ನು ತೆಗೆದು ಇದೇ ಸಿಂಗ್ ಅವರ ಶಿಫಾರಸ್ಸಿನಂತೆ ಎಲ್.ಎನ್.ರೆಡ್ಡಿ ಅವರನ್ನು ನಿರ್ದೇಶಕರನ್ನಾಗಿ ಮಾಡಲಾಗಿತ್ತು.
ಆದರೆ ಈಗ ಸಿಂಗ್ ಮತ್ತು ಡಾ|| ಸುಧಾಕರ್ ಅವರ ಕೃಪಾಕಟಾಕ್ಷದಿಂದ ನಿರ್ದೇಶಕರಾಗಿ ಬಂದಿರುವ ಗಂಗಾಧರಗೌಡರು ವಿಮ್ಸ್ ನಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸಿಬ್ಬಂದಿಗಳ ಸಹಕಾರದಿಂದ ಮಾಡಲಿ ಎಂಬುದು ನಾಗರೀಕರ ಆಶಯವಾಗಿದೆ.