ವಿಮ್ಸ್ ನಲ್ಲಿ 23 ಜನರಿಗೆ ದಂತಪಂಕ್ತಿ ಜೋಡಣೆ

ಬಳ್ಳಾರಿ,ನ. 10:  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಗರದ ವಿಮ್ಸ್ ಸರ್ಕಾರಿ ದಂತ ವೈದ್ಯಕೀಯ ಮಹಾ ವಿದ್ಯಾಲಯ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಏಕದಿನ ದಂತಪಂಕ್ತಿ ಜೋಡಣಾ ಹಾಗೂ ವಿತರಣಾ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು .
ಶಿಬಿರದಲ್ಲಿ ಹೆಚ್.ಬಿ ಹಳ್ಳಿ ಹಾಗೂ ಹಡಗಲಿ ದಂತ ಆರೋಗ್ಯ ಅಧಿಕಾರಿಗಳು ಆಯ್ದು ಗುರುತಿಸಿದ 23 ಫಲಾನುಭವಿಗಳನ್ನು ಪರಿಗಣಿಸಿ ಚಿಕಿತ್ಸೆಗೆ ಕ್ರಮವಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ, ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಹೆಚ್ ಹಾಗೂ ಕೃತಕ ದಂತ ಜೋಡಣಾ ವಿಭಾಗದ ಮುಖ್ಯಸ್ಥ ಡಾ.ಆದರ್ಶ್ ಎನ್., ಎನ್‍ಓಹೆಚ್‍ಪಿ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ, ಡಾ.ವೀರಾರೆಡ್ಡಿ, ಎಲ್ಲಾ ಸಹ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.