ವಿಮ್ಸ್ ನಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹ”


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.02: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಸಂಘದ ಸಹಯೋಗದಲ್ಲಿ ಇಂದು ವೈದ್ಯ ಭವನದಲ್ಲಿ  “ವಿಶ್ವ ಸ್ತನ್ಯಪಾನ ಸಪ್ತಾಹ” ವನ್ನು ಆಚರಿಲಾಯಿತು.
ಶತಶತಮಾನಗಳಿಂದಲೂ ತಾಯಿ ಮಗುವಿಗೆ ಹಾಲುಣಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ , ಕೆಲವು ವರ್ಷಗಳಿಂದ ಮಹಿಳೆಯ ಕಾರ್ಯಕ್ಷೇತ್ರ ಬದಲಾಗುತ್ತಿರುವುದರಿಂದ ಹಾಗೂ ಮಹಿಳೆಯರಲ್ಲಿ ಕೆಲಸದ ಒತ್ತಡದಿಂದ ಸ್ತನ್ಯಪಾನದ ಮಹತ್ವ ಕಡಿಮೆಯಾಗಿದ್ದರಿಂದ 1991 ರಲ್ಲಿ 148 ದೇಶಗಳಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹ” ವನ್ನು ಆರಂಭಿಸಲಾಯಿತು .ಆಗಸ್ಟ್ 1 ರಿಂದ 7ರವರೆಗೆ ಎದೆಹಾಲಿನ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತದೆ.ಈ ಹಿನ್ನೆಲೆಯಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಸಂಘದ ಸಹಯೋಗದಲ್ಲಿ  ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ವಿಮ್ಸ್ ನಿರ್ದೇಶಕ ಡಾ .ಟಿ ಗಂಗಾಧರ ಗೌಡ ಅವರು ಕಾರ್ಯಕ್ರಮವನ್ನು ಉದ್ಝಾಟಿಸಿ “ಭಾರತದಲ್ಲಿ ಶೇಕಡ 89 ರಷ್ಟು  ಹೆರಿಗೆಗಳು ಆಸ್ಪತ್ರೆಯಲ್ಲಿ ಆದರೂ ಕೇವಲ ಶೇ.51ತಾಯಂದಿರು ಮಾತ್ರ ಹೆರಿಗೆಯಾದ 1 ತಾಸಿನ ಒಳಗೆ ಮಕ್ಕಳಿಗೆ ಎದೆಹಾಲು ನೀಡುತ್ತಿದ್ದು  ಕಳವಳಪಡುವ ವಿಷಯವಾಗಿದೆ,ಸ್ತನ್ಯಪಾನ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು ಮಗುವಿನ ಉಳಿವು ಹಾಗೂ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತದೆ .ಎದೆಹಾಲಿನಲ್ಲಿರುವ ಪೋಷಕಾಂಶಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸಾಕಷ್ಟು ರೋಗಗಳಿಗೆ ಲಸಿಕೆಯಂತೆ ಕಾರ್ಯನಿರ್ವಹಿಸಿ ನವಜಾತ ಸೋಂಕುಗಳನ್ನು ತಡೆಗಟ್ಟುತ್ತದೆ ಆದ್ದರಿಂದ ಪ್ರತಿಯೊಬ್ಬ ತಾಯಿಯೂ ಮೊದಲ 6 ತಿಂಗಳವರೆಗೆ ಮಗುವಿಗೆ ಕೇವಲ ಎದೆಹಾಲನ್ನು ಮಾತ್ರ ನೀಡಲು ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಆಹಾರಗಳಿಂದ ದೂರವಿರಲು ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ದಿವ್ಯ ಹಾಗೂ ಡಾ.ಸುಮಾ ಗುಡಿ ಯವರು ಭಾಗವಹಿಸಿದ್ದರು.                    ಇತರೆ ಅತಿಥಿಗಳಾದ ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಯೋಗೇಶ್ , ಉಪ ಅಧೀಕ್ಷಕರಾದ ಡಾ.ಗುರುಬಸವನ ಗೌಡ,  ಡಾ.ಶಿವ ನಾಯ್ಕ್ ,       ಡಾ.ಕೃಷ್ಣಸ್ವಾಮಿ ,ಪ್ರಾಂಶುಪಾಲರು ,ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ದುರುಗಪ್ಪ ರವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು , ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ.ಬಿ.ಕೆ.ಶ್ರೀಕಾಂತ್ ,ವಿಮ್ಸ್ ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲರಾದ   ಶ್ರೀಮತಿ.ಜ್ಯೋತಿ.  ಯವರು, ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ.ಸುಮನ್ ಗಡ್ಡಿ ,ಡಾ.ಶೈಲಾ ಗೌಡ ಡಾ.ಉಷಾರಾಣಿ ,ಡಾ.ಆಶಾರಾಣಿ ಮತ್ತಿರರು ಉಪಸ್ಥಿತರಿದ್ದರು.ಡಾ.ವಿನಯ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.