ವಿಮ್ಸ್ ನಲ್ಲಿ ಕಿಮೋಥೆರಪಿ ಇನ್ಸೂಶನ್ ಸೆಂಟರ್ ಪ್ರಾರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ,: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮುಖ್ಯ ಮಂತ್ರಿಗಳಾಗಿ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಗರದ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಕಿಮೋಥೆರಪಿ ಇನ್ಸೂಶನ್ ಸೆಂಟರ್ ನ್ನು ಇಂದು ಪ್ರಾರಂಭಿಸಲಾಯಿತು.
ವಿಮ್ಸ್ ನಿರ್ದೇಶಕ ಡಾ|| ಟಿ.ಗಂಗಾಧರಗೌಡ ಅವರು ಕಿಮೋಥೆರಪಿ ಇನ್ಸೂಶನ್ ಸೆಂಟರನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಸ್ಪತ್ರೆಯ ವೈದ್ಯರು, ಶುಕ್ರೂಷಕರು, ತಂತ್ರಜ್ಞರು ಹಾಗು ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಅಧೀಕ್ಷಕರು, ದಂತ ವೈದ್ಯ ಕಾಲೇಜಿನ ಪ್ರಾಂಶುಪಾಲರು, ಟ್ರಾಮಾ ಕೇರ್ ಸೆಂಟರನ್ನು ವೈದ್ಯಕೀಯ ಅಧೀಕ್ಷಕರು, ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಶುಶೂಷಕ ಕಾಲೇಜಿನ ಪ್ರಾಂಶುಪಾಲರು, ಶುಶೂಷಕ ಅಧೀಕ್ಷಕರು, ಸರ್ಜಿಕಲ್ ಅಂಕಾಲಜಿಸ್ಟ್ ಗಳಾದ ಡಾ|| ಗುರುಬಸವನ ಗೌಡ, ಡಾ| ಮಾಣಿಕ್ಯ ರಾವು, ಡಾ||ಶಿವಕುಮಾರ್, ರೇಡಿಯೋಥೆರಪಿ ವಿಭಾಗದ ಡಾ|| ಮೆಹ‌ರ್ ಕುಮಾರ್ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಯಾನ್ಸರ್ ರೋಗಿಗಳು ಸೆಂಟರ್ ನಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರು ಹಾಗು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಹಾಗು ಕಿಮೋಥೆರಪಿ ಬಗ್ಗೆ ಹೆಚ್ಚಿನ ಮಾಹಿತಿ ಹಾಗು ಸಲಹೆ ಬೇಕಾದಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ, ಬೆಂಗಳೂರು ನಿರ್ದೇಶಕ ಡಾ|| ರಾಮಚಂದ್ರ ಅವರನ್ನು ಸಂಪರ್ಕಿಸಬಹುದು  ಎಂದು ತಿಳಿಸಿದರು.

Attachments area