ವಿಮ್ಸ್ ದುರಂತ: ಅಧಿಕಾರಿಗಳ ಅಮಾನತಿಗೆ
ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ಇಲ್ಲಿನ  ವಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತೆಯ ವಿರುದ್ದ ಇಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡಲು ಆಗ್ರಹಿಸಿ. ಮೃತರ ಕುಟುಂಬಗಳಿಗೆ  50 ಲಕ್ಷ ರೂ ಪರಿಹಾರ ನೀಡುವಂತೆ ರಾಜ್ಯಪಾಲರಲ್ಲಿ  ಮನವಿ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಸೇರಿದ ಮುಖಂಡರು, ಕಾರ್ಯಕರ್ತರು ವಿಮ್ಸ್ ಅಧಿಕಾರಿಗಳ, ಸಿಬ್ವಂದಿಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿರುವುದರ ವಿರುದ್ದ ಘೋಷಣೆ ಕೂಗಿದರು.
ನಂತರ ರಾಜ್ಯ ಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮಾಲಪಾಟಿ ಅವರಿಗೆ ಸಲ್ಲಿಸಲಾಯಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನಾಗೇಂದ್ರ ಅವರು. ವಿಮ್ಸ್ ಆಸ್ಪತ್ರೆಗೆ  ಜಿಲ್ಲೆಯ ಇತರೆ ಪ್ರದೇಶಗಳಿಂದ ಮತ್ತು ಪಕ್ಕದ ಆಂಧ್ರಪ್ರದೇಶ ರಾಜ್ಯದಿಂದ ಬಡ ರೈತರು, ಕೂಲಿ ಕಾರ್ಮಿಕರು ತುರ್ತು ಸಂದರ್ಭದಲ್ಲಿ ತಮ್ಮ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಇಲ್ಲಿ ಸೂಕ್ತಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಇದೆ.
ಸೆ.14  ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವಿದ್ಯುತ್ ಕಡಿತವಾದಾಗ ಜೆನರೇಟರ್ ಸಹ ಚಾಲನೆ ಆಗದೆ, ವೆಂಟಿಲೇಟರ್ ಕಾರ್ಯ ಸ್ಥಗಿತಗೊಂಡು  ನಾಲ್ಕು ಜನ ರೋಗಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತಪಟ್ಟವರಲ್ಲಿ ಎಂಟು ವರ್ಷದ ಅಪ್ರಾಪ್ತ ಬಾಲಕ ಕೂಡ ಸೇರಿದ್ದಾನೆ. ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರವು ಕೋಟಿಗಟ್ಟಲೆ ಅನುದಾನ, ವೈದ್ಯಕೀಯ ಉಪಕರಣಗಳು ಮತ್ತು ಇನ್ನಿತರ ಅವಶ್ಯಕ ಸಲಕರಣೆಗಳು ನೀಡಿದ್ದಾಗ್ಯೂ ರೋಗಿಗಳನ್ನು ಸಂರಕ್ಷಿಸಲು ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆ.
ಆದ್ದರಿಂದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೃತ  ರೋಗಿಗಳ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರದಿಂದ ಕೊಡಿಸಬೇಕು.
ಅಮಾಯಕ ರೋಗಿಗಳ ಮರಣಕ್ಕೆ ಕಾರಣವಾದ ವಿಮ್ಸ್‌ನ ನಿರ್ದೇಶಕ ಡಾ.ಟಿ. ಗಂಗಾಧರ ಗೌಡ ಇವರನ್ನು, ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ತಾಂತ್ರಿಕ ಉದ್ಯೋಗಿಗಳನ್ನು ತಕ್ಷಣ ಅವರ  ಹುದ್ದೆಗಳಿಂದ ಅಮಾನತ್ತುಗೊಳಿಸಿ, ಸೂಕ್ತ ತನಿಖಾ ಆಯೋಗವನ್ನು ನೇಮಿಸಿ, ತನಿಖೆ ನಡೆಸಿ, ಈ ಘಟನೆಗೆ ಕಾರಣರಾದ ಪ್ರತಿಯೊಬ್ಬರನ್ನು ಶಿಕ್ಷೆಗೆ ಒಳಪಡಿಸಬೇಕು. ಅಸಹಾಯಕ  ಆರೋಗ್ಯ ಸಚಿವ  ಡಾ.ಕೆ.ಸುಧಾಕರ್ ಅವರು ಇಂತಹ ನಿರ್ಲಕ್ಷ್ಯದ ಧೋರಣೆಗಳನ್ನು ಸುಧಾರಿಸುವಲ್ಲಿ ಈ ಹಿಂದೆಯಿಂದ ನಿರಂತರವಾಗಿ ವಿಫಲರಾಗಿದ್ದಾರೆ. ಜನರ ಆರೋಗ್ಯದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದೇ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ಸಚಿವರ ಮತ್ತು ಅಧಿಕಾರಿಗಳ ಹಣದ ಆಸೆಯ ಮುಂದೆ ಜನರ ಜೀವವು ಸಹಿತ ಲೆಕ್ಕವಿಲ್ಲದಂತಾಗಿದೆ. ಆದ್ದರಿಂದ ತಾವು ಇಂತಹ ಅಸಹಾಯಕ ಅರೋಗ್ಯ ಸಚಿವರಿಂದ ಈ ಕೂಡಲೇ ರಾಜೀನಾಮೆಯನ್ನು ಪಡೆಯಬೇಕೆಂದರು.
ಮತ್ತೊಮ್ಮೆ ಇಂತಹ ದುರ್ಘಟನೆಗಳು ಸಂಭವಿಸದಂತೆ, ಸೂಕ್ತ  ಅಧಿಕಾರಿಗಳನ್ನು ಹಾಗೂ ಉದ್ಯೋಗಿಗಳನ್ನು ನೇಮಿಸಿ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕೆಂದರು.
 ಅವಿವೇಕಿಗಳು:
 ವಿಮ್ಸ್ ನಿರ್ದೇಶಕ ಡಾ ಗಂಗಾಧರಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರು ಅವಿವೇಕಿಗಳಾಗಿದ್ದಾರೆಂದು ಗ್ರಾಮೀಣ ಶಾಸಕ ನಾಗೇಂದ್ರೌಅಗ್ದಾಳಿ ನಡೆಸಿ.
ನೈತಿಕತೆಯಿಂದ ಇವರು ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದರು.
ಅವಿವೇಕಿ ಮಂತ್ರಿ ತಾನು ವೈದ್ಯನೆಂದು  ಬಹಳ ದೊಡ್ಡದಾಗಿ ಬಿಂಬಿಸಿಕೊಂಡು ಓಡಾಡ್ತಾರೆ. ನಿಮ್ಮ ಸ್ವಾರ್ಥಕ್ಕಾಗಿ ಬಳ್ಳಾರಿ ಜನರು ಸಾಯ್ತಿದ್ದಾರೆ. ಇಲ್ಲಿ ಹಣ ಲೂಟಿ ಹೊಡೆದು ಯಾರನ್ನೋ ಅಧಿಕಾರಿಯನ್ನ ಕೂರಿಸ್ತೀರಿ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರುಗಳಾದ ಜೆ.ಎಸ್.ಆಂಜನೇಯುಲು, ಎ.ಮಾನಯ್ಯ, ಮುಂಡರಗಿ ನಾಗರಾಜ್, ನಾರಾ ಭರತ್ ರೆಡ್ಡಿ, ರಾವೂರು ಸುನೀಲ್, ಬೆಣಕಲ್ ಬಸವರಾಜಗೌಡ, ವೆಂಕಟೇಶ್ ಹೆಗಡೆ, ಶಿವರಾಜ್ ಹೆಗಡೆ, ಜಿ.ವೆಂಕರಮಣ, ರಾಮ್ ಪ್ರಸಾದ್, ಹೆಚ್.ಸಿದ್ದೇಶ್, ವಿಲ್ಸನ್, ಅಲುವೇಲು ಸುರೇಶ್, ಮಹಿಳಾ ಅಧ್ಯಕ್ಷೆ ಮಂಜುಳಾ, ಮೊದಲಾದವರು ಇದ್ದರು.

Attachments area