ವಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ: ಗಂಗಾಧರಗೌಡ

ಬಳ್ಳಾರಿ, ಏ.23: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಪ್ರಕರಣಗಳು ಅತಿ ಹೆಚ್ಚಾಗಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಗಣಿನಾಡು ಬಳ್ಳಾರಿಯೂ ಒಂದಾಗಿದೆ. ಅವಿಭಜಿತ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೋವಿಡ್ ಸೋಂಕಿತ ರೋಗಿಗಳಿಗೆ ವಿಮ್ಸ್ ಆಸ್ಪತ್ರೆಯಲ್ಲಿ 581 ಆಕ್ಸಿಜನ್ ಪೂರೈಕೆ ಮಾಡುವಂತಹ ಹಾಸಿಗೆಗಳ ವ್ಯವಸ್ಥೆ ಮಾಡಿದೆ ಎಂದು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಹೇಳಿದ್ದಾರೆ
ಸಧ್ಯ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 3872 ಜನರು ಸೋಂಕಿತರು ಇದ್ದಾರೆ. ಇವರಲ್ಲಿ ಅನೇಕರು ಹೋಮ್ ಐಸಲೋಷನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರೆ. ಉಳಿದವರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಬಳ್ಳಾರಿಯಲ್ಲಿ 1867 ಜನರು, ಸಂಡೂರಿನಲ್ಲಿ 504, ಹೊಸಪೇಟೆಯಲ್ಲಿ 674 ಜನರು ಸೋಂಕಿತರಿದ್ದಾರೆ.ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಜನರಿಗೂ ಇಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ನ ಎರಡನೇ ಅಲೆಯಲ್ಲಿ 35 ಜನ ಚಿಕಿತ್ಸೆ ಫಲಿಸದೆ ಸಾನ್ನಪ್ಪಿದ್ದಾರೆ ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ನಿಂದ 631 ಜನರು ಸತ್ತಿದ್ದಾರೆ. ದಿನಂ ಪ್ರತಿ ಜಿಲ್ಲೆಯಲ್ಲಿ 3 ವರೆ ಸಾವಿರಕ್ಕೀಂತಲೂ ಹೆಚ್ಚು ಜನರ ಪರೀಕ್ಷೆ ನಡೆಸಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದೆ. ಮುಖ್ಯವಾಗಿ ಆಕ್ಸಿಜನ್ ಕೊರತೆ ಮತ್ತಿತರೇ ಕಾಯಿಲೆಗಳ ಜೊತೆ ಕೋವಿಡ್ ನಿಂದ ಬಳಲುವ ರೋಗಿಗಳಿಗೆ ವಿಮ್ಸ್‍ನ ಟ್ರಾಮಾ ಕೇರ್ ಸೆಂಟರ್, ಹಳೆ ಮತ್ತು ಹೊಸ ದಂತ ಕಾಲೇಜುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಜೆವಾಣಿಯೊಂದಿಗೆ ಮಾತನಾಡಿರುವ ಅವರು ವಿಮ್ಸ್ ಆಸ್ಪತ್ರೆಗಳಲ್ಲಿ 581 ಬೆಡ್‍ಗಳಿಗೆ ಆಕ್ಸಿಜನ್ ಪೂರೈಕೆ ಮಾಡುವಂತಹ ವ್ಯವಸ್ಥೆ ಇದೆ. ಅಲ್ಲದೆ 87 ಐಸಿಯು ಹಾಸಿಗೆಗಳು ಇವೆ, ಇನ್ನೂ 100 ಹಾಸಿಗೆಗಳು ಕರೋನಾ ಸೋಂಕಿತ ಸಮಾನ್ಯ ರೋಗಿಗಳಿಗೆ ಮೀಸಲಿರಿಸಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ಅಮ್ಲಜಕದ ಕೊರತೆ ಇಲ್ಲ, ಟ್ರಾಮಕೇರ್ ಸೆಂಟರ್‍ನಲ್ಲಿ 32 ಕೆ.ಎಲ್. ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ 19 ಕೆ.ಎಲ್. ಸಾಮರ್ಥ್ಯದ ಅಮ್ಲಜನಕ ಸಂಗ್ರಹ ಇದೆ. ಔಷಧದ ಕೊರತೆಯೂ ಇಲ್ಲ. ಅದಕ್ಕೆ ಬೇಕಾದಂತಹ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತ ನೀಡುತ್ತಿದೆ. ರೆಮಿಡಿಸ್ ಔಷಧಿಯೂ ಸಹ ಸಂಗ್ರಹಿದೆ. ಕೋವಿಡ್ ಸೆಂಟರ್‍ಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇಲ್ಲ. ಈ ಮೊದಲಿನಂತೆ ನರ್ಸ್, ಮೊದಲಾದ ಸಿಬ್ಬಂದಿ ಇದೆ ಎಂದು ಹೇಳಿದ್ದಾರೆ.