
ಕಲಬುರಗಿ, ಸೆ.15- ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಕ್ಕೆ ದೊಡ್ಡಪ್ಪ ಅಪ್ಪ ಅವರ ಕೊಡುಗೆಯ ಜತೆಗೆ ಈ ಭಾಗದ ಜನರಿಗೆ ಕನ್ನಡ ಭಾಷೆ ಕಲಿಕೆಗಾಗಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಉಪನ್ಯಾಸಕರಾದ ಡಾ,ಶಿವರಂಜನ್ ಸತ್ಯಂಪೇಟೆ ಅವರು ಹೇಳಿದರು.
ನಗರದ ಸರ್ವಜ್ಞ ಪಿ ಯು ಕಾಲೇಜುದಲ್ಲಿ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ” ಮೋಚನಾ ಸಪ್ತಾಹ-2023, ವಿಮೋಚನಾ ಹೋರಾಟಗಾರರ ಹೋರಾಟದ ಹಾದಿ.” ಪೂಜ್ಯ ದೊಡ್ಡಪ್ಪ ಅಪ್ಪ ರವರ ಕುರಿತು ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ವಜ್ಞ ಕಾಲೇಜಿನ ಅಧ್ಯಕ್ಷರಾದ ಪೆÇ್ರೀ,ಚನ್ನಾರೆಡ್ಡಿ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಮುಖ್ಯ ಅಥಿತಿಗಳಾಗಿ ಸುರೇಶ ಬಡಿಗೇರ ಮಾಜಿ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪ್ರಭುಗೌಡರು,ಬಸವರಾಜ ಯಡ್ರಾಮಿ, ಗೋಪಾಲ ನಾಟೀಕಾರ ,ಮನೋಹರ ಬೀರನೂರು, ಆನಂದ ತೇಗನೂರು,ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು,