ವಿಮೆ ಮೂಲಕ ಗ್ರಾಹಕರಿಗೆ ಭದ್ರತೆ

ಮುಳಬಾಗಿಲು ಮಾ ೨೩: ಕರ್ನಾಟಕ ಗ್ರಾಮೀಣ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಲವನ್ನು ನೀಡುವ ಮೂಲಕ ಆರ್ಥಿಕ ಅಭಿವೃಧ್ಧಿಗೆ ಸಹಕರಿಸಲಾಗುತ್ತಿದೆ ಇದಲ್ಲದೆ ವಿಮಾ ಪಾಲಿಸಿಗಳನ್ನು ಮಾಡಿಸುವ ಮೂಲಕ ಬ್ಯಾಂಕಿನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಜೀವನ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್.ಅಶ್ವತ್ಥಾಚಾರ್ ಹೇಳಿದರು.
ತಾಲೂಕಿನ ಹೆಬ್ಬಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವತಿಯಿಂದ ವಿಮಾದಾರರ ಕುಟುಂಬದ ಸದಸ್ಯರಿಗೆ ಕೆನರಾ ಹೆಚ್.ಎಸ್.ಬಿ.ಸಿ. ಯೋಜನಯಡಿಯಲ್ಲಿ ೫.೮೧ ಲಕ್ಷ ವಿಮಾ ಚೆಕ್ಕನ್ನು ವಿತರಿಸಿ ಮಾತನಾಡಿ ಸಾರ್ವಜನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜನರು ವ್ಯವಹರಿಸುವ ಮೂಲಕ ತಮ್ಮ ಹಣದ ಭದ್ರತೆಯನ್ನು ಪಡೆಯಬಹುದು ಎಂದು ಹೇಳಿದರು.
ಕೆ.ಜಿ.ಬಿ ಹೆಬ್ಬಣಿ ಶಾಖಾ ವ್ಯವಸ್ಥಾಪಕ ಕೆ.ವಿಜಯಕುಮಾರ್ ಮಾತನಾಡಿ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಸೇವೆಗಳನ್ನು ಮನೆಬಾಗಿಲಿಗೆ ಒದಗಿಸಲಾಗುತ್ತಿದೆ, ಪ್ರಾಮಾಣಿಕತೆಯಿಂದ ವ್ಯವಹರಿಸಿದರೆ ಮುಂದೆ ಉತ್ತಮ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಸರ್ಕಾರದ ವಿವಿಧ ಸೌಲಭ್ಯಗಳು ಪಡೆದುಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು, ಸಣ್ಣ ಕೈಗಾರಿಕೆಗಳು ಕೃಷಿ ಚಟುವಟಿಕೆಗಳು, ಗೃಹೋದ್ಯಮಿಗಳ ಬಗ್ಗೆ ಆಸಕ್ತರಾಗಬೇಕೆಂದು ಸಲಹೆ ನೀಡಿ ಪ್ರತಿಯೊಬ್ಬ ಗ್ರಾಹಕರೂ ವಿಮೆಯನ್ನು ತುಂಬುವ ಮೂಲಕ ಕುಟುಂಬದ ಸದಸ್ಯರಿಗೆ ಆಧಾರ ಸ್ತಂಭವಾಗಬೇಕೆಂದು ಸಲಹೆ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಬ್ಬಣಿ ಬ್ಯಾಂಕಿನ ಸಿಬ್ಬಂದಿಯಾದ ಭಾರತಿ, ರವಿಕುಮಾರ್, ನಂಜುಂಡೇಗೌಡ, ಕೆನರಾ ಹೆಚ್.ಎಸ್.ಬಿ.ಸಿ ಹಿರಿಯ ವಿಮೆ ಮಾರಾಟ ಪ್ರತಿನಿಧಿ ಹರೀಶ್‌ಕುಮಾರ್ ಮತ್ತಿತರರು ಇದ್ದರು.