ವಿಮಾನ ಪ್ರಯಾಣಿಕರ ಮಿತಿ ಶೇ. 50ಕ್ಕೆ ನಿಗದಿ

ನವದೆಹಲಿ, ಮೇ.೨೯- ಏರ್ ಲೈನ್ಸ್ ವಿಮಾನದ ದೇಶೀಯ ಪ್ರಯಾಣ ಜೂನ್ ೧ ರಿಂದ ಪುನರಾರಂಭಗೊಳ್ಳಲಿದ್ದು, ಶೇ.೫೦ ರಷ್ಟು ಮಾತ್ರ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಕಳೆದ ಕೋವಿಡ್ ಸಂದರ್ಭ ಮೇ ನಲ್ಲಿ ಶೇಕಡಾವಾರು ೩೦ರಷ್ಟು ವಿಮಾನಗಳ ಹಾರಾಟ ನಡೆಯಿತಿತ್ತು.ಆನಂತರ ಡಿಸೆಂಬರ್ ವೇಳೆಗೆ ಇದರ ಪ್ರಮಾಣ ಶೇಕಡಾ ೮೦ರಷ್ಟು ಆಗಿತ್ತು. ಇದೀಗ ಮತ್ತೆ ಶೇಕಡ ೫೦ ರಷ್ಟು ವಿಮಾನಗಳ ಹಾರಾಟ ನಡೆಸಲು ಮುಂದಾಗಿದ್ದು, ಇದರಲ್ಲಿ ಪ್ರಯಾಣಿಕರ ಸಂಖ್ಯೆಯೂ ಮಿತಿ ಮೀರಿದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಕೊರೋನಾ ಎರಡನೇ ಅಲೆಯ ಹಿನ್ನಲೆಯಲ್ಲಿ ವಿಮಾನ ಪ್ರಯಾಣವನ್ನು ಕಡಿತಗೊಳಿಸಲಾಗಿತ್ತು.ಇದೀಗ ಜೂನ್ ನಿಂದ ಆರಂಭವಾಗುತ್ತೀರುವ ಕಾರಣ, ಪ್ರಯಾಣದ ದರದಲ್ಲಿಯೂ ಕೊಂಚ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.