ವಿಮಾನ ಪತನದ ಬಳಿಕ ೪ ಮಕ್ಕಳು ಜೀವಂತ

ನವದೆಹಲಿ,ಮೇ.೧೮- ವಿಮಾನ ಅಪಘಾತದ ನಂತರ ಕೊಲಂಬಿ ಯಾದ ಅಮೆಜಾನ್‌ನಲ್ಲಿ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆ ಯಾಗಿದ್ದು ಮಕ್ಕಳ ರಕ್ಷಣೆಗೆ ರಕ್ಷಣಾ ಸಿಬ್ಬಂಧಿ ಆದ್ಯತೆ ನೀಡಿದೆ.
ಕೊಲಂಬಿಯಾದ ಅಮೆಜಾನ್‌ನಲ್ಲಿ ವಿಮಾನ ಅಪಘಾತದ ನಂತರ ಎರಡು ವಾರಗಳಿಗೂ ಹೆಚ್ಚು ಕಾಲ ಕಾಣೆಯಾಗಿದ್ದ ನಾಲ್ಕು ಸ್ಥಳೀಯ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿವೆ.
ಕೊಲಂಬಿಯಾದ ಅಮೆಜಾನ್‌ನಲ್ಲಿ ನಡೆದ ವಿಮಾನ ಅಪಘಾತದ ನಂತರ ಎರಡು ವಾರಗಳಿಗೂ ಹೆಚ್ಚು ಕಾಲ ಕಾಣೆಯಾಗಿದ್ದ ನಾಲ್ಕು ಸ್ಥಳೀಯ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಖಚಿತ ಪಡಿಸಿದ್ದಾರೆ.
ನಮ್ಮ ಮಿಲಿಟರಿ ಪಡೆಗಳ ಪ್ರಯಾಸಕರ ಹುಡುಕಾಟದ ಪ್ರಯತ್ನಗಳ ನಂತರ ನಾವು ಮೇ ೧ ರಂದು ದಕ್ಷಿಣ ಕೊಲಂಬಿಯಾದಲ್ಲಿ ವಿಮಾನ ಅಪಘಾತದಿಂದ ಕಣ್ಮರೆಯಾದ ನಾಲ್ಕು ಮಕ್ಕಳನ್ನು ಜೀವಂತವಾಗಿ ಪತ್ತೆ ಮಾಡಲಾಗಿದೆ ಅವರ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತದಲ್ಲಿ ಇಡೀ ವಿಮಾನ ಸುಟ್ಟು ಕರಕಲಾದರೂ ಕೂಡ ಪವಾಡ ಸದೃಶ ರೀತಿಯಲ್ಲಿ ನಾಲ್ಕು ಮಕ್ಕಳು ಜೀವಂತವಾಗಿ ಬದುಕಿದ್ದಾರೆ.