ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ.ಸುನಿಲ್‍ಕುಮಾರ್

ವಿಜಯಪುರ, ಜೂ.7-ಮದಬಾವಿ-ಬುರನಾಪೂರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲನೇ ಹಂತದ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ.ಸುನಿಲ್‍ಕುಮಾರ್ ಅವರು ಇಂದು ಪರಿಶೀಲನೆ ನಡೆಸಿದರು.
ವಿಜಯಪುರ ನಗರದ ವಿಮಾನ ನಿಲ್ದಾಣದ ಮೊದಲನೇ ಹಂತದಲ್ಲಿ 95.00 ಕೋ.ರೂಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಉತ್ತಮ ದರ್ಜೆಯಲ್ಲಿ ಯಾವುದೇ ಲೋಪವಾಗದೆ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ವಿಮಾನ ನಿಲ್ದಾಣದ ರನ್ ವೇ ಉದ್ದವು ಒಟ್ಟು 2650 ಮೀಟರ ಉದ್ದವಿದ್ದು, 280 ಮೀಟರ ಅಗಲವಿರುತ್ತದೆ. ಅದರಲ್ಲಿ 1800 ಮೀಟರ ಉದ್ದ 280 ಮೀಟರ ಅಗಲಕ್ಕೆ ಫಾರಮೇಶನ ಕೆಲಸ ಪ್ರಗತಿಯಲ್ಲಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಹಾಗೆಯೇ ಟ್ಯಾಕ್ಸಿ ವೇ ಉದ್ದವು ಒಟ್ಟು 190.50 ಮೀಟರ ಉದ್ದವಿದ್ದು, 26.00 ಮೀಟರ ಅಗಲವಿದ್ದು ಮೇಶನ ಕೆಲಸ ಪೂರ್ಣಗೊಂಡಿರುತ್ತದೆ.
170ಘಿ 104 ಮೀಟರ ಅಳತೆಯ ಏಪ್ರಾನ್ ಕೆಲಸವು ಪ್ರಗತಿಯಲ್ಲಿದ್ದು, ಆಯಸೊಲೇಶನ್‍ಬೇ ಉದ್ದವು ಒಟ್ಟು 190.50 ಮೀಟರ ಉದ್ದವಿದ್ದು, 26.00 ಮೀಟರ ಅಗಲವಿದ್ದು ಫಾರಮೇಶನ ಕೆಲಸ ಪೂರ್ಣಗೊಂಡಿರುವ ಬಗ್ಗೆ ವೀಕ್ಷಣೆ ನಡೆಸಿದರು.
ಫೆರಿಫೆರಲ್ ರಸ್ತೆಯ ಉದ್ದವು ಒಟ್ಟು 8598 ಮೀಟರ ಉದ್ದವಿದ್ದು, 3.75 ಮೀಟರ ಅಗಲ ಹಾಗೂ ಎರಡು ಬದಿಗಳಲ್ಲಿ 2 ಮೀಟರ ಅಗಲಕ್ಕೆ ಶೋಲ್ಡರ ಅಳವಡಿಸಲಾಗಿದೆ. ಅದರಲ್ಲಿ 6000 ಮೀಟರ ಉದ್ದಕ್ಕೆ ಫಾರಮೇಶನ ಕೆಲಸ ಪೂರ್ಣಗೊಂಡಿದ್ದು ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ.
ಅದರಂತೆ 1350 ಮೀಟರ್, ಬಾಕ್ಷ ಕಲ್ವರ್ಟ ಉದ್ದವು 300 ಮೀಟರ (2.50 ಘಿ 2.50 ಒಣಡಿ) ಇದ್ದು, ಅದರಲ್ಲಿ 300 ಮೀಟರ ಉದ್ದಕ್ಕೆ ಕೆಳಗಡೆಯ ಕಾಮಗಾರಿಯು ಮುಗಿದಿದ್ದು ಎರಡು ಬದಿಗಳ ಗೋಡೆಗಳನ್ನು 1.50 ಮೀಟರ ಎತ್ತರಕ್ಕೆ 250 ಮಿಟರ ಉದ್ದದ ಕಾಮಗಾರಿಯು ಸರಳು ಸಹಿತ ಮುಗಿದಿದ್ದು ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ.
ಚತುಷ್ಪಥ ಅಪೆÇ್ರೀಚ್ ರಸ್ತೆ ಒಟ್ಟು 715 ಮೀಟರ ಉದ್ದವಿದ್ದು ಅದರಲ್ಲಿ 715 ಮೀಟರ ಉದ್ದ 25 ಮೀಟರ ಅಗಲಕ್ಕೆ ಫಾರಮೇಶನ ಕೆಲಸ ಪೂರ್ಣಗೊಂಡಿದ್ದು 1568 ಮೀಟರ ಉದ್ದದ ದ್ವೀಪಥದ ಲೂಪ ರಸ್ತೆಯಿದ್ದು, ಅದರಲ್ಲಿ 1500 ಮೀಟರ ಉದ್ದ 15.00 ಮೀಟರ ಅಗಲಕ್ಕೆ ಫಾರಮೇಶನ ಕೆಲಸ ಮುಗಿದಿರುತ್ತದೆ.
4892 ಮೀಟರ ಉದ್ದದ ಒಳ ರಸ್ತೆಗಳಿದ್ದು 2462 ಮೀಟರಕ್ಕೆ ಫಾರಮೇಶನ ಕೆಲಸ ಮುಕ್ತಾಯಗೊಂಡಿದ್ದು ಹಾಗೂ ಬಾಕಿ ಕೆಲಸ ಪ್ರಗತಿ ಹಂತದಲ್ಲಿದೆಯೆಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ್ ಗಿಡದಾಣಪ್ಪಗೋಳ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.