ವಿಮಾನ ನಿಲ್ದಾಣಕ್ಕೆ ಗ್ರಾಮಸ್ಥರು ವಿರೋಧ

ರಾಯಚೂರು,ಜು.೧೪- ನಗರದ ಹೊರವಲಯದ ಏಗನೂರು ಹಾಗೂ ಯರಮರಸ್ ಗ್ರಾಮದ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಸಲು ದಂಡು ಗ್ರಾಮದ ಮನೆಗಳು ಮತ್ತು ಖಾಲಿ ನಿಲ್ದಾಣ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವುದನ್ನು ದಂಡು ಗ್ರಾಮಸ್ಥರು ವಿರೋಧಿಸಿ ನಗರ ಶಾಸಕ ಶಿವರಾಜ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಸಿದರು.
ಸದರಿ ಗ್ರಾಮದವರು ಸುಮಾರು ೨೦೦ ವರ್ಷಗಳಿಂದ ಕಳೆದು ಹೋಗಿರುತ್ತವೆ. ೧೯೪೨ ರಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಅಂದಿನ ನಿಜಾಮ್ ಸರ್ಕಾರವು ದಂಡು ಗ್ರಾಮದ ಸುಮಾರು ಮನೆಗಳನ್ನು ತೆಗೆಯಿಸಿ ನಿಜಾಂ ಸರ್ಕಾರವು ಆರ್ಥಿಕ ಸಹಾಯಧನ ನೀಡಿರುತ್ತಾರೆಂದು ಎಂದು ನಮ್ಮ ಪೂರ್ವ ಜರು ತಿಳಿಸಿದ್ದಾರೆ.ಗ್ರಾಮದ ಪೂರ್ವ ದಿಕ್ಕಿಗೆ ಇರುವ ಮಸೀದಿಯ ಮುಂದಿನಿಂದ ವಿಮಾನ ನಿಲ್ದಾಣದ ಸರಹದ್ದು ಇದೆ ಎಂದು ಹಿಂದಿನ ಕಾಲದಲ್ಲಿಯೂ ಸರ್ವೆ ಮಾಡಿದ್ದು, ನಮ್ಮ ಪೂರ್ವಜರಿಗೆ ತಿಳಿದಿರುತ್ತದೆ ಮತ್ತು ಅದರಂತೆ ಈ ಹಿಂದಿನ ವಿಮಾನ ನಿಲ್ದಾಣ ಸರ್ವೆಗಳಲ್ಲಿಯೂ ಸಹ ಮಸೀದಿಯ ಮುಂದಿನಿಂದ ವಿಮಾನ ನಿಲ್ದಾಣದ ಸರಹದ್ದು ಇದೆ ಎಂದು, ಸರ್ವೆಯರ್‌ಗಳು ಈ ಹಿಂದೆ ಎಷ್ಟೋ ಸಲ ಸರ್ವೆ ಮಾಡಿದರೂ, ವಿಮಾಣ ನಿಲ್ದಾಣದ ಸರಹದ್ದು, ಮಸೀದಿಯ ಮುಂದೆ ಇದೆಯೆಂದು ತಿಳಿಸಿರುತ್ತಾರೆ ಎಂದರು.
ಆದರೆ ಈಗ ಹೊಸದಾಗಿ ಸರ್ವೆ ಮಾಡಿಸಿ ನಾವು ನೂರಾರು ವರ್ಷಗಳಿಂದ ವಾಸಿಸುವ ಪ್ರದೇಶದಲ್ಲಿ ಹಾಗೂ ತಮ್ಮ ಸ್ವಂತ ಜಾಗಗಳಲ್ಲಿ ವಾಸಿಸುವ ಯರಮರಸ್ ದಂಡ ಗ್ರಾಮಸ್ಥರಿಗೆ ತಾವು ವಿಮಾನ ನಿಲ್ದಾಣದ ಪ್ರದೇಶದಲ್ಲಿ ಇದ್ದೀಲಿ ಎಂದು ತಪ್ಪಾಗಿ ಸರ್ವೆ ಮಾಡಿ ನಮ್ಮನ್ನು ನಿರ್ಗತೀಕರಣ ಮಾಡುವ ಹುನ್ನಾರ ನಡೆದಿರುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಯರಮಸ್ ದಂಡ ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಸರ್ವೆ ಮಾಡಿಸಿ ಎರಡು ಎಕರೆ ಜಮೀನಿನಲ್ಲಿ ೪೦ ನಿವೇಶನಗಳೂ ಕಾಯ್ದಿರಿಸಿ ೪೦ ಮನೆಗಳನ್ನು ನಿರ್ಮಾಣ ಮಾಡಿಸಿ ತಾಲೂಕ ಪಂಚಾಯತ್ ನಿಂದ ಹಕ್ಕು ಪತ್ರ ನೀಡಿರುತ್ತಾರೆ ಎಂದರು.
ಈಗ ವಿಮಾನ ನಿಲ್ದಾಣ ನಿರ್ಮಿಸಲು ಸುಮಾರು ೬ ತಿಂಗಳುನಿಂದ ನಡೆಯುತ್ತಿರುವ ಸರ್ವೆ ತಪ್ಪಾಗಿದೆ. ಸರ್ವೆ ನಡೆಯುವ ಸಮಯದಲ್ಲಿಯೇ ನಾವು ಗ್ರಾಮಸ್ಥರು ಆಕ್ಷೇಪಣೆಯನ್ನು ಸರ್ವೆಗಳಲ್ಲಿ ಹೇಳಲಾಗಿದೆ ಎಂದರು
ಸರ್ವ ಸಮಯದಲ್ಲಿ ಬಂದಂತಹ ಸರ್ವೆಯರ್‌ಗಳು ನಮ್ಮನ್ನು ಸಮಜಾಯಿಸಿ ಇದು ತಾತ್ಕಾಲಿಕ ಸರ್ವೆ ಎಂದು ತಿಳಿಸಿರುತ್ತಾರೆ. ಅದರಂತೆ ನಮ್ಮ ಗ್ರಾಮದ ಪೂರ್ವದಿಕ್ಕಿಗೆ ಇರುವ ಮಸೀದಿಯವರೆಗೆ ನಮ್ಮ ಹಳೆಯ ಗ್ರಾಮ ಇರುತ್ತದೆ. ಅಲ್ಲಿಯವರೆಗೆ ಇರುವ ಮನೆಗಳನ್ನು ವಿಮಾನ ನಿಲ್ದಾಣ ನಿರ್ಮಿಸಲು ನಮ್ಮ ಜಾಗವನ್ನು ಮನೆಗಳನ್ನು ಕೊಡಲು ನಮ್ಮ ಸಹಮತ ಇರುವುದಿಲ್ಲ. ಮತ್ತು ನಮ್ಮ ಮನೆಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಸಹ ನಮ್ಮ ಸಹಮತ ಇರುವುದಿಲ್ಲ.
ಆದ್ದರಿಂದ ದಯಾಳುಗಳಾದ ಈಗ ವಿಮಾನ ನಿಲ್ದಾಣಕ್ಕೆ ದಂಡು ಗ್ರಾಮದಲ್ಲಿ ಗುರುತಿಸಿರುವ ಜಾಗದಿಂದ ೧೫೦ ಫೀಟ್ ಪೂರ್ವಕ್ಕೆ ಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮತ್ತು ಸುಮಾರು ೮೦ ಮನೆಗಳು ಉಳಿದು ಸರ್ಕಾರಕ್ಕೆ ಸುಮಾರು ೧೫ ಕೋಟಿ ಹಣ ಉಳಿತಾಯವಾಗುತ್ತದೆ. ಮತ್ತು ವಿಮಾನ ನಿಲ್ದಾಣ ನಿರ್ಮಿಸಲು ಗ್ರಾಮಸ್ಥರಿಗೂ ಯಾವುದೇ ಅಡಚಣೆ ಸುಗಮವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯರಮರಸ್ ಹಾಗೂ ದಂಡು ಗ್ರಾಮಸ್ಥರು ಇದ್ದರು.