ಕಲಬುರಗಿ:ಜೂ.2: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಐದು ಗಂಟೆಗೆ ಹಮ್ಮಿಕೊಳ್ಳಲಾದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮಗಳ ಸಚಿವ ಶರಣಬಸಪ್ಪ ದರ್ಶಾನಾಪೂರ್ ಅವರ ಅಭಿನಂದನಾ ಸಮಾರಂಭ ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮಗಳ ಸಚಿವ ಶರಣಬಸಪ್ಪ ದರ್ಶಾನಾಪೂರ್ ಅವರು ಜೂನ್ 2ರಂದು ಬೆಂಗಳೂರಿನಿಂದ ವಿಮಾನದ ಮೂಲಕ ನಗರಕ್ಕೆ ಸಚಿವರಾದ ನಂತರ ಪ್ರಥಮ ಬಾರಿಗೆ ಆಗಮಿಸುತ್ತಿರುವ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ನೂತನ ಸಚಿವರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಸಚಿವರು ಆಗಮಿಸುವ ವಿಮಾನವು ತಾಂತ್ರಿಕ ದೋಷದಿಂದ ಪುನ: ಮರಳಿ ವಾಪಸ್ಸು ಬೆಂಗಳೂರಿಗೆ ಹೋದ ಕಾರಣ ಅಭಿನಂದನಾ ಸಮಾರಂಭ ಕಾರ್ಯಕ್ರಮವು ರದ್ದಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ. ಮುಂದೆ ನಡೆಯುವ ದಿನಾಂಕ ಹಾಗೂ ಸಮಯವನ್ನು ನಂತರ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೈಲಿನ ಮೂಲಕ ಸಚಿವರ ಸಂಚಾರ: ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ್ ಅವರು ತಾಂತ್ರಿಕ ದೋಷದಿಂದ ವಿಮಾನಯಾನವನ್ನು ರದ್ದುಪಡಿಸಿದ್ದು, ಬೆಂಗಳೂರಿನಿಂದ ಹಾಸನ್- ಸೊಲ್ಲಾಪೂರ್ ರೈಲಿನ ಮೂಲಕ ನಗರಕ್ಕೆ ಜೂನ್ 3ರಂದು ಬೆಳಿಗ್ಗೆ 6 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಬಂದಿಳಿಯುವರು ಎಂದು ಜಗದೇವ್ ಗುತ್ತೇದಾರ್ ಕಾಳಗಿ ಅವರು ತಿಳಿಸಿದ್ದಾರೆ.
óನಗರಕ್ಕೆ ಆಗಮಿಸಿದ ನಂತರ ಸಚಿವರು ಶನಿವಾರದಂದು ಬೆಳಿಗ್ಗೆ 7 ಗಂಟೆಗೆ ಕಾರಿನ ಮೂಲಕ ಶಹಾಪುರಕ್ಕೆ ತೆರಳುವರು. ನಂತರ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಭಾನುವಾರ ನಗರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಸೋಮವಾರ ಕಾರಿನ ಮೂಲಕ ಯಾದಗಿರಿಗೆ ತೆರಳಿ ಬೆಳಿಗ್ಗೆ 10-30ಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ಮಾಡುವರು. 12ರಿಂದ 1 ಗಂಟೆಯವರೆಗೆ ಅಧಿಕಾರಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ ಮಾಡುವರು. ನಂತರ ಕಾರಿನ ಮೂಲಕ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಂಗಳವಾರ ಜೂನ್ 6ರಂದು ಮತ್ತೆ ಶಹಾಪುರಕ್ಕೆ ತೆರಳಿ, 11 ಗಂಟೆಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸುವರು. ಸಂಜೆ 7ಕ್ಕೆ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡುವ ಕಾರ್ಯಕ್ರಮವಿದೆ.