ವಿಮಾನಗಳ ಡಿಕ್ಕಿ-6 ಮಂದಿ ಸಾವು

ಡಲ್ಲಾಸ್,ನ.೧೩- ಆಗಸದಲ್ಲಿ ಲೋಹದ ಹಕ್ಕಿಗಳ ವೈಮಾನಿಕ ಪ್ರದರ್ಶನ ಕಣ್ಣು ತುಂಬಿಕೊಳ್ಳುತ್ತಿದ್ದ ಸಮಯದಲ್ಲಿ ಎರಡನೇ ವಿಶ್ವ ಮಹಾಯುದ್ದದಲ್ಲಿ ಪಾಲ್ಗೊಂಡಿದ್ದ ಎರಡು ಸೇನಾ ವಿಮಾನಗಳ ನಡುವೆ ನಡೆದ ಪರಸ್ಪರ ಡಿಕ್ಕಿ ಹೊಡೆದು ನೆಲಕ್ಕುರುಳಿದ ಪರಿಣಾಮ ಕನಿಷ್ಠ ೬ ಮಂದಿ ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ಅಮೇರಿಕಾದ ಡಲ್ಲಾಸ್‌ನಲ್ಲಿ ಇಂದು ಮುಂಜಾನೆ ದುರಂತ ಸಂಭವಿಸಿದೆ.
ಅಮೇರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎರಡು ವಿಂಟೇಜ್ ಯುದ್ದ ವಿಮಾನಗಳ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.ಅಮೇರಿಕಾವನ್ನು ಬೆಚ್ಚಿ ಬೀಳಿಸಿದೆ. ವಿಮಾನಗಳ ಡಿಕ್ಕಿಯ ರಭಸಕ್ಕೆ ಆಕಾಶದ ಮಾರ್ಗಮಧ್ಯೆ ಬೆಂಕಿ ಹೊತ್ತಿ ನೆಲಕ್ಕುರುಳುವುದರಲ್ಲಿ ವಿಮಾನ ಛಿದ್ರ ಛಿದ್ರವಾಗಿದ್ದು ಅಪಘಾತದ ಭೀಕರತೆಯನ್ನು ಬಿಂಬಿಸುತ್ತಿದೆ.
ಅಮೇರಿಕಾದ ವೈಮಾನಿಕ ಪ್ರದರ್ಶನದಲ್ಲಿ ನಡೆದ ಮೊಟ್ಟ ಮೊದಲ ವಿಮಾನ ಅಪಘಾತ ಎಂದು ಕೂಡ ಹೇಳಲಾಗಿದೆ.
ವಿಮಾನದಲ್ಲಿ ಎಷ್ಟು ಜನರಿದ್ದರು ಎನ್ನುವುದು ನಿಖರವಾಗಿ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ೬ ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎರಡು ಐತಿಹಾಸಿಕ ಸೇನಾ ವಿಮಾನಗಳು ಡಿಕ್ಕಿ ಹೊಡೆದು ನೆಲಕ್ಕೆ ಪತನಗೊಂಡಿದ್ದು, ಜ್ವಾಲೆಯ ಚೆಂಡನ್ನು ಸ್ಫೋಟಿಸಿ ಕಪ್ಪು ಹೊಗೆಯ ಸುತ್ತಲೂ ಆವರಿಸಿಕೊಂಡ ಹಿನ್ನೆಲೆಯಲ್ಲಿ ಸರಿ ಸುಮಾರು ೫ ಸಾವಿರ ಮಂದಿ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ.
ಎರಡೂ ವಿಮಾನಗಳು ಕಡಿಮೆ ಎತ್ತರದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಅರ್ಧದಷ್ಟು ಮುರಿದು ಬೆಂಕಿಗೆ ಆಹುತಿಯಾಗಿದೆ. ಬೋಯಿಂಗ್ ಬಿ -೧೭ ಫ್ಲೈಯಿಂಗ್ ಫೊಟ್ರೆಸ್ – ಡಲ್ಲಾಸ್ ಬಳಿ ಸ್ಮರಣಾರ್ಥ ಏರ್ ಶೋನಲ್ಲಿ ವಿಮಾನಗಳು ಭಾಗಿಯಾಗಿದ್ದವು.
ಅಮೆರಿಕನ್ ಏರ್‌ಲೈನ್ಸ್ ಪೈಲಟ್‌ಗಳನ್ನು ಪ್ರತಿನಿಧಿಸುವ ಅಲೈಡ್ ಪೈಲಟ್ಸ್ ಅಸೋಸಿಯೇಷನ್, ಟೆರ್ರಿ ಬಾರ್ಕರ್ ಮತ್ತು ಲೆನ್ ರೂಟ್ – ಅದರ ಇಬ್ಬರು ಮಾಜಿ ಸದಸ್ಯರು – ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಅಪಘಾತದ ಬಗ್ಗೆ ತನಿಖೆ:
ವೈಮಾನಿಕ ಪ್ರದರ್ಶನ ನಡೆಯುವ ವೇಳೆ ವಿಮಾನ ಅಪಘಾತವಾಗಿ ಕನಿಷ್ಟ ೬ ಮಂದಿ ಮೃತಪಟ್ಟ ಪ್ರಕರಣವನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನ ಅಪಘಾತದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
ವೆಟರನ್ಸ್ ಡೇ ಗೌರವಾರ್ಥ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದ್ದು ಸರಿ ಸುಮಾರು ೪,೦೦೦ ರಿಂದ ೬,೦೦೦ ಜನರು ವೈಮಾನಿಕ ಪ್ರದರ್ಶನ ವೀಕ್ಷಿಸುತ್ತಿದ್ದ ಸಮಯದಲ್ಲಿ ಈ ಭಯಾನಕ ವಿಮಾನ ಅಫಘಾತ ನಡೆದಿದೆ ಎಂದು ಡಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಹೇಳಿದ್ದಾರೆ.

ಅಮೇರಿಕಾದ ಇತಿಹಾಸದಲ್ಲ ಇದೊಂದು “ಭಯಾನಕ ದುರಂತ” ಎಂದು ಹೇಳಿದ ಅವರು ವಿಮಾನ ಡಿಕ್ಕಿ ಹೊಡೆಯುವ
ಈ ವಿಡಿಯೋಗಳು ಹೃದಯ ವಿದ್ರಾವಕವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.