ವಿಮರ್ಶೆ… ಭಾವನಾತ್ಮಕ ಸನ್ನಿವೇಶ ಅನಾವರಣ

ಚಿತ್ರ: ನಾನೊಂಥರಾ
ನಿರ್ದೇಶನ : ರಮೇಶ್ ಕಗ್ಗಲ್
ಕಲಾವಿದರು : ಡಾ. ತಾರಖ್, ರಕ್ಷಕ್, ದೇವರಾಜ್, ರಾಕ್‌ಲೈನ್ ಸುಧಾಕರ್, ಜೈಸನ್, ಜಾಕ್ಲಿನ್ ಫ್ರಾನ್ಸಿಸ್ ಹಾಗೂ ಇತರರು.
ರೇಟಿಂಗ್ :****

ಕುಡಿತದ ಚಟಕ್ಕೆ ಬಿದ್ದು ದಾರಿತಪ್ಪಿದ ಯುವಕನನ್ನು ಅದರಿಂದ ಪಾರುಮಾಡಲು ಯುವತಿಯ ಪಡುವ ಪಾಡು ಕಷ್ಟ ಜೊತೆಗೆ ಆಕೆಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತೆರೆಗೆ ತರಲಾಗಿದೆ “ನಾನೊಂಥರ ” ಚಿತ್ರದ ಮೂಲಕ.

ತಂದೆ ಮಗನ ಬಾಂಧವ್ಯ, ಸಹೋರನ ವಾತ್ಸಲ್ಯದ ನಡುವೆಯೂ ನಡೆಯುವ ಘಟನೆ ನಾಯಕನನ್ನ ಕುಡಿತದ ಚಟಕ್ಕೆ ದಾಸನಾಗಿ ಮಾಡುತ್ತದೆ ಆದ್ದರಿಂದ ಆತ ಹೊರಬರಲು ಏನೆಲ್ಲಾ ಕಷ್ಟ ಪಡುತ್ತಾನೆ ಎನ್ನುವುದನ್ನು ನಿರ್ದೇಶಕ ರಮೇಶ್ ಕಗ್ಗಲ್ ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಹಗಲಿನಲ್ಲಿ ಮನೆಯಲ್ಲೇ ಬಾರ್ ಮಾಡಿಕೊಳ್ಳುವ ತಾರಕ್ (ತಾರಖ್ ವಿ. ಶೇಖರಪ್ಪ) ಹಿನ್ನಲೆಯನ್ನು ಪ್ಲಾಸ್ಟಿಕ್ ಮೂಲಕ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ ಪ್ರೀತಿ-ಪ್ರೇಮ ವಾತ್ಸಲ್ಯ ಎಲ್ಲವನ್ನು ಅಳಿಸಿ ಚಿತ್ರವನ್ನು ತೆರೆಗೆ ತಂದಿದ್ದಾರೆ

ಕುಡಿತದ ಚಟಕ್ಕೆ ಒಳಗಾಗಿ ಅದನ್ನೇ ಕಾಯಕ ಮಾಡಿಕೊಂಡವನನ್ನು ಪ್ರೇಮ(ರಕ್ಷಕ), ಆತನ ಪತ್ನಿಯಾಗಿ ಜೀವನದಲ್ಲಿ ಹೊಸಬೆಳಕು ಮೂಡಿಸುತ್ತಾಳೆ. ಆದರೆ ತನ್ನ ಮೊದಲ ಮಗುವಿನ ಮುಖವನ್ನೂ ನೋಡದೆ ಹೆರಿಗೆ ಸಮಯದಲ್ಲೇ ಮೃತಳಾಗುತ್ತಾಳೆ. ಇದು ತಾರಖ್ ಗೆ ದೊಡ್ಡ ಆಘಾತ ನೀಡುತ್ತದೆ. ಮುಂದೇನು ಎನ್ನುವುದು ಕುತೂಹಲಕಾರಿ ಸಂಗತಿ.

ತಂದೆ-ಮಗನ ನಡುವಿನ ಭಾವನಾತ್ಮಕ ಸನ್ನಿವೇಶಗಳನ್ನು ನಿರ್ದೇಶಕರು ಅನಾವರಣ ಮಾಡಿದ್ದಾರೆ.ಇನ್ನುಷ್ಟು ಪರಿಣಾಮಕಾರಿಯಾಗಿ ಮಾಡುವ ಅವಕಾಶವೂ ಇತ್ತು.ಇರುವುದರಲ್ಲಿ ಚಿತ್ರವನ್ನು ನೋಡುವ ರೀತಿ ಕಟ್ಟಿಕೊಟ್ಟಿದ್ದಾರೆ.

ನಾಯಕ ತಾರಖ್ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ. ಸಾಹಸ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ರಕ್ಷಕ ಅಭಿನಯದಲ್ಲಿ ಇನ್ನೂಸ್ವಲ್ಪ ಪಳಗಬೇಕಿದೆ. ಹಿರಿಯ ಕಲಾವಿದರಾದ ದೇವರಾಜ್ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು.

ಸುನಿರಾಜ್ ಸಂಭಾಷಣೆ ಇಷ್ಟವಾಗುತ್ತದೆ. ಸುನಿಲ್ ಸಾಮ್ಯುಯಲ್ ಸಂಗೀತದ ಹಾಡುಗಳು ಚೆನ್ನಾಗಿವೆ. ವಿನು ಮನಸು ಅವರ ಹಿನ್ನೆಲೆ ಸಂಗೀತ ಮುದ ನೀಡುತ್ತದೆ.
ಚರ್ಚ್‌ನ ಮದರ್ ಆಗಿ ನಿರ್ಮಾಪಕಿ ಡಾ.ಜಾಕ್ಲಿನ್ ಫ್ರಾನ್ಸಿಸ್ ಪಾತ್ರ ಹೊಸ ಟ್ವಿಸ್ಟ್ ಕೊಡುತ್ತದೆ.
ಚಿತ್ರದಲ್ಲಿ ವೀಕ್ಷಕರನ್ನು ಕಾಡುವ ಮತ್ತೊಂದು ಪಾತ್ರ ಅಜ್ಜಿಯದು. ನಾಯಕನ ಪಾತ್ರದ ಮೂಲಕ ಮಾನವತೆಯ ಮಹತ್ವವನ್ನು ವೀಕ್ಷಕರಿಗೆ ಮನಮುಟ್ಟುವ ಹಾಗೆ ಹೇಳುವಲ್ಲಿ ನಿರ್ದೇಶಕರು ಸಫರಾಗಿದ್ದಾರೆ.

ಕಳಪೆ-* / ನೋಡಬಹುದು-** / ಪರವಾಗಿಲ್ಲ – ***/ ಉತ್ತಮ-****/ ಅತ್ಯುತ್ತಮ-*****