ವಿಮರ್ಶೆಗಳಿಂದ ಪುಸ್ತಕದ ವಸ್ತು ನಿಷ್ಠತೆ ಅನಾವರಣ

ಜಗಳೂರು.ಮಾ.೩೦;ಲೇಖಕನ ಭಾಷೆಯ ವಸ್ತುನಿಷ್ಠತೆ ಹೊರ ಬರಬೇಕಾದರೆ ಹೆಚ್ಚು ವಿಮರ್ಶೆಗಳಾಗಬೇಕು ಆಗ ಮಾತ್ರ ಪುಸ್ತಕದ ಗಟ್ಟಿತನ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ವಿಶ್ರಾಂತ ಪ್ರಾಚಾರ್ಯರಾದ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ವ್ಯಾಖ್ಯಾನಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ   ಪತ್ರಕರ್ತ ಎಸ್.ಎಂ ಸೋಮನಗೌಡ  ಕಟ್ಟಿಗೆಹಳ್ಳಿ ವಿರಚಿತ ಇವರೇ ನಮ್ಮ ಭಾರತದ ರತ್ನಗಳು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.ಗ್ರಾಮೀಣ ಭಾಗದ ಪತ್ರಕರ್ತ ಸೋಮನಗೌಡ ಅವರು ಪರಿಶ್ರಮದ ಫಲದಿಂದ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಮಾಹಿತಿ ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಸಹಕಾರಿಯಾಗಲಿದೆ ಎಂದರು.ಇಂದಿನ ಆಧುನಿಕ ಜಗತ್ತಿನ ಭರಾಟೆಯಲ್ಲಿ ಸಾಹಿತಿ, ಕವಿ, ಲೇಖಕರಿಗೆ ಸಿಗಬೇಕಾದ ಸ್ಥಾನ ಮಾನಗಳು ಸಿಗದೇ ತುಂಬ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಇಂತವರನ್ನು ಗುರುತಿಸಿ ಪ್ರೋತ್ಸಹಿಸುವ ಕೆಲಸ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಲೊಳ್ಳಲು ಹೋದ ವ್ಯಕ್ತಿಗೆ ರೈಲು ಬರಲು ತಡವಾಗಿದ್ದರಿಂದ ಜೇಬಿನಲ್ಲಿದ್ದ ಪುಟಿಗಾಸನ್ನು ಕೊಟ್ಟು ಪುಸ್ತಕ ಖರೀದಿಸಿ ಓದಲು ಮುಂದಾದಾಗ ಎಲ್ಲವನ್ನು ಮರೆತು ಪುಸ್ತಕದಲ್ಲಿ  ತಲ್ಲೀನನಾಗಿ ಸಾಯುವುದನ್ನು ದೂರನಿಲ್ಲಿಸಿತು ಅವರೇ ಅಣ್ಣ ಹಜಾರೆ. ಇಂದು ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ‌.ಅವರು  ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದರು.ಭಾರತ ರತ್ನ ಪ್ರಶಸ್ತಿ ಪಡೆದ  ಮಹಾನ್ ನಾಯಕರಲ್ಲಿ ಕೆಲವರು ಬಿಟ್ಟರೇ ಉಳಿದವರೆಲ್ಲರು ಬಡತನದ ನೋವಿನಿಂದ ಮೇಲೆ ಬಂದವರು. ಗುಡಿಸಲಲ್ಲಿ ಓದಿ ಸಮಾಜಕ್ಕೆ ಬೆಳಕಾಗಿದ್ದಾರೆ ಅಂತವರನ್ನು ಸ್ಮರಿಸುವ ಅವಕಾಶವನ್ನು ನೀಡಿದ್ದಾರೆ ಎಂದರು.

ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಹೆಗಡೆ ಮಾತನಾಡಿ,  ಜೀವನುತ್ಸವದ ಸಂಕೇತಗಳನ್ನು ಹೊಂದಿರುವ ಜಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದ್ದರು. ಇಲ್ಲಿನ ಕಲೆ, ಸಾಹಿತ್ಯ, ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಎಂದರು. 

ತಾಲೂಕಿನ ಕೊಣಚಗಲ್ಲು ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಲಿಂಗರಂಗ ಸಮಾಧಿ ಇರುವುದು ಪತ್ತೆಯಾಗಿದ್ದು, ಭಾರತ ರತ್ನಗಳಲ್ಲಿ ಮಹಾಲಿಂಗರಂಗ ಒಬ್ಬರಾಗಿದ್ದಾರೆ. ಅವರ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಬೇಕಾಗಿದೆ ಎಂದರು.

ಕ್ಷೇತ್ರದಲ್ಲಿ ರಾಜಕಾರಣಿಗಳು ಹೇಗೆ ಅನುದಾನ ಖರ್ಚು ಮಾಡುತ್ತಾರೆ ಎಂಬುವುದನ್ನು ಪ್ರಶ್ನೆ ಮಾಡಬೇಕು. ಇತಿಹಾಸ ಪರಂಪರೆಗಳನ್ನು ಉಳಿಸಿ ಬೆಳೆಸದೇ ಹೋದರೆ  ಎಲ್ಲವನ್ನು ಮರೆತು ಬಿಡುತ್ತಾರೆ ಎಂದರು.