ವಿಭಿನ್ನ ಸಾಹಸ ಆರಂಭಿಸಿದ ಕುಂದರಗಿಮಠ : ಕನ್ನಡ ಜಾಗೃತಿ ಮೂಡಿಸುವ ಸಂಚಾರಕ್ಕೆ ಅಲ್ಲಮಪ್ರಭು ಚಾಲನೆ ಹ್ಯಾಂಡಲ್ ಇಲ್ಲದ ಬೈಕ್‍ನಲ್ಲಿ ರಾಜಧಾನಿಗೆ

ಕಲಬುರಗಿ :ಡಿ.28: ಕರ್ನಾಟಕ ಹೆಸರು ನಾಮಕರಣಗೊಂಡ ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಮತ್ತು ಕನ್ನಡ ಕುರಿತು ಜಾಗೃತಿ ಮೂಡಿಸಲು ಬಾಗಲಕೋಟೆ ಜಿಲ್ಲೆಯ ಇಲಕಲ್‍ನ ಯುವಕ ಈರಣ್ಣ ಜಿ.ಕುಂದರಗಿಮಠ ಕಲಬುರಗಿಯಿಂದ ರಾಜಧಾನಿ ಬೆಂಗಳೂರಿನವರೆಗೂ ಹ್ಯಾಂಡಲ್ ಇಲ್ಲದ ಬೈಕ್ ಓಡಿಸಿಕೊಂಡು ಹೋಗುವ ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದು, ಬುಧವಾರ ನಗರದಿಂದ ಬೆಂದಕಾಳೂರು ಕಡೆಗೆ ಸವಾರಿ ಶುರು ಮಾಡಿದರು.
ಬುಧವಾರ ನಗರದ ಜಗತ್ ವೃತ್ತದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹ್ಯಾಂಡಲ್ ಇಲ್ಲದ ಬೈಕ್ ಸವಾರಿಗೆ ಕನ್ನಡ ಧ್ವಜವನ್ನು ತೋರಿಸಿ ಚಾಲನೆ ನೀಡಿದರು. ಹೊಸ ತೆರನಾದ ಸಾಹಸಕ್ಕೆ ಮುಂದಾಗಿ ರಾಜಧಾನಿಗೆ ತೆರಳುತ್ತಿರುವ ಕುಂದರಗಿಮಠ ಅವರಿಗೆ ಶಾಸಕರು ಸನ್ಮಾನಿಸಿ ಶುಭ ಹಾರೈಸಿದರು. ಅನೇಕರು ಸಾಕ್ಷಿಯಾದರು. ಅಲ್ಲಿಂದ ಸುಲಫಲ ಮಠಕ್ಕೆ ತೆರಳಿದಾಗ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜಿಯವರು ಕನ್ನಡತಾಯಿಯ ಸೇವೆಯನ್ನು ವಿಭಿನ್ನವಾಗಿ ಮಾಡುತ್ತಿರುವ ಬೈಕ್ ಸವಾರನಿಗೆ ಗೌರವಿಸಿದರು.
ಶಾಸಕ ಅಲ್ಲಮಪ್ರಭು ಮಾತನಾಡಿ, ಕನ್ನಡ ನಾಡು, ನುಡಿ ಜಾಗೃತಿಗಾಗಿ ಕೈಗೊಂಡಿರುವ ಹ್ಯಾಂಡಲ್ ಇಲ್ಲದ ಬೈಕ್ ಓಡಿಸುವಂತ ವಿಭಿನ್ನ ಸಾಹಸಕ್ಕೆ ಕೈ ಹಾಕಿರುವ ಕುಂದರಗಿಮಠ ಕಾರ್ಯವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅವರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷ ಸನ್ಮಾನ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರಮುಖರಾದ ಬಸವರಾಜ ಬಿರಬಿಟ್ಟಿ, ಶಾಂತಕುಮಾರ ಬಿರಾದಾರ, ಸಿದ್ದರಾಜು ಯಳಮೇಲಿ, ಅಣವೀರಯ್ಯ ಪ್ಯಾಟಿಮನಿ, ಸಿದ್ದರಾಮಯ್ಯ ಸಂಕನೂರಮಠ, ಮಹಾಂತೇಶ ಮೋಟಗಿ, ಮಹೇಶ ತಳಕೇರಿ, ಶರಣಗೌಡ ಪಾಟೀಲ್ ಸಂಕನೂರ,ದಯಾನಂದ ಪಾಟೀಲ್, ಅಂಬಾರಾಯ ಬೆಳಕೋಟಾ, ಅರವಿಂದ ಬಿರಾದಾರ, ಅಂಬಾರಾಯ ಬೆಳಮಗಿ, ಸಿದ್ಧಾರೂಢ ಸಮತಾಜೀವನ, ಗುರು ಸಂಕಿನಮಠ, ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯದರ್ಶಿ ಶಿವರಾಜ ಅಂಗಡಿ, ವಿನೋದಕುಮಾರ ಜನೇವರಿ ಮೊದಲಾದವರಿದ್ದರು.

ನಾಲ್ಕು ದಿನಗಳಲ್ಲಿ ಬೆಂಗಳೂರಿಗೆ
ಕಲಬುರಗಿಯಿಂದ ಹೊರಟು ಸುಮಾರು 860 ಕಿಮೀ ದೂರವನ್ನು ಹ್ಯಾಂಡಲ್ ಇಲ್ಲದ ಬೈಕ್‍ನೊಂದಿಗೆ ಸವಾರಿ ಮಾಡಿ ನಾಲ್ಕು ದಿನಗಳಲ್ಲಿ ಬೆಂಗಳೂರಿಗೆ ತಲುಪುವುದಾಗಿ ಈರಣ್ಣ ಕುಂದರಗಿಮಠ ತಿಳಿಸಿದರು. ಹೊಸಪೇಟೆ, ಹರಿಹರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಕಡೂರು, ತಿಪಟೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದರು. ಈ ಹಿಂದೆ ಕೈ ಮತ್ತು ಕಾಲು ಕಟ್ಟಿಕೊಂಡು ಕಾರ್ ಚಾಲನೆ ಮಾಡಿ ಲಿಮ್ಕಾ ಬುಕ್ ದಾಖಲೆ ಮಾಡಿz್ದÉೀನೆ, ಅಲ್ಲದೆ ಇದೇ ತೆರನಾದ ಬೈಕ್ ಓಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿರುವುದಾಗಿ ಈರಣ್ಣ ಪತ್ರಕರ್ತರಿಗೆ ತಿಳಿಸಿದರು. ಈ ಸಾಹಸಕ್ಕೆ ತಮ್ಮೂರಿನ ಗಣ್ಯರು ಸಹಕಾರ ನೀಡಿದ್ದಾರೆ. ನನ್ನ ಜತೆಗೆ ಕಾರಿನಲ್ಲಿ ಸ್ನೇಹಿತರ ತಂಡ ಇರಲಿದೆ ಎಂದರು.
ಕಲಬುರಗಿಯಿಂದ ಹೊರಟು, ಫರಹತಾಬಾದ, ಜೇವರ್ಗಿ, ಚಿಗರಳ್ಳಿ, ಭೀಮರಾಯನಗುಡಿ,ಶಹಾಪುರ, ಸುರಪುರ ಲಿಂಗಸುಗೂರು ಮಾರ್ಗವಾಗಿ ಮಸ್ಕಿಗೆ ತೆರಳಿ ಮೊದಲ ದಿನ ವಾಸ್ತವ್ಯ ಮಾಡಿದರು. ಮಾರ್ಗದುದ್ದಕ್ಕೂ ಅನೇಕ ಸಂಘ ಸಂಸ್ಥೆಂiÀsುವರು, ಗ್ರಾಮಸ್ಥರು ಸ್ವಾಗತಿಸಿ ಗೌರವಿಸಿ ಮುಂದಿನ ಪ್ರಯಾಣಕ್ಕೆ ಬಿಳ್ಕೋಟ್ಟರು.