ವಿಭಿನ್ನ ಪ್ರಯೋಗದ `ಪರ್ಯಾಯ ಸಿದ್ದ

 

ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಮಾದರಿಯ ಕಥೆಗಳ ಸಿನಿಮಾ ತೆರೆಗೆ ಬರುತ್ತಿವೆ.ಅದರಸಾಲಿಗೆ ಮತ್ತೊಂದು ಸೇರ್ಪಡೆಪರ್ಯಾಯ“.ಹೊಸ ತಂಡ ಸೇರಿಕೊಂಡು ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಇದು. ಚಿತ್ರದ ಮೂಲಕ ಕುರುಡ,‌ ಕಿವುಡ ಮತ್ತು ಮೂಗನಕಥೆಯನ್ನುನಿರ್ದೇಶಕ ದಯಾನಂದ ಮಿತ್ರ ತೆರೆಗೆ ಬರಲು ಮುಂದಾಗಿದ್ದಾರೆ.

ತ್ರದ ಕುರಿತು ಮಾಹಿತಿ ಹಂಚಿಕೊಂಡ ದಯಾನಂದ ಮಿತ್ರ, ಕುರುಡ ಮೂಗ, ಕಿವುಡಮೂರು ವ್ಯಕ್ತಿಗಳ ಸುತ್ತ ಸಾಗುವ ಕಥೆ. ಒಬ್ಬರಿಗೂ ಒಂದೊಂದು ಆಸೆ.ಅದನ್ನು ಈಡೇರಿಸಿಕೊಳ್ಳಲು ಏನೆಲ್ಲಾ ಹರಸಾಹಸ ಮಾಡ್ತಾರೆ ಎನ್ನುವುದು ಚಿತ್ರದ ತಿರುಳು.

ಮೂಗನಿಗೆ ಸರ್ಕಾರಿ ನೌಕರಿ ಪಡೆಯಬೇಕು ಎನ್ನುವ ಗುರಿ ಇದ್ದರೆ ಕುರುಡನಿಗೆ ತನ್ನ ಕಾಲ ಮೇಲೆ ನಿಲ್ಲುವ ಆಸೆ. ಕಿವುಡನಿಗೆ ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕು ಎನ್ನುವುದೇ ಅವರ ಉದ್ದೇಶ. ಇದಕ್ಕೆ ಯಾವೆಲ್ಲಾಮಾರ್ಗ  ಹಿಡಿಯತ್ತಾರೆ ಅದರಲ್ಲಿ ಯಶಸ್ವಿ ಆಗ್ತಾರ ಚಿತ್ರದ ಕಥೆ ಎಂದರು.

ಚಿತ್ರಕ್ಕೆ ರಾಜ್ ಕುಮಾರ್ ಮತ್ತು ಇಂದುಮತಿ ರಾಜ್ ಕುಮಾರ್ ಬಂಡವಾಳ ಹಾಕಿದ್ದಾರೆ. ಜೊತೆಗೆ ರಾಜ್ ಕುಮಾರ್ ಕುರುಡನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಕುರಿತು ಮಾಹಿತಿ ನೀಡಿ, ನಾನು ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ ವರ್ಷಕ್ಕೊಮ್ಮೆ  ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿ ಅಪ್ಪು ಸರ್ ಹೆಸರಲ್ಲಿ ಕಾರ್ಯಕ್ರಮ ಮಾಡಲಾಗುವುದು. ಖಾನಾಪುರ ಬಳಿಯ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು

ಸಹ ನಿರ್ಮಾಪಕ ಮುರುಗೇಶ್  ಶಿವಪೂಜೆಕೊನೆ ಪುಟ, ಬಂಗಾರದ ಮಕ್ಕಳು ಸಿನಿಮಾ ಮಾಡಿದ್ದೇನೆ. ಪುನೀತ್ ರಾಜ್ ಕುಮಾರ್ ಪೋಟೋ ನೋಡಿ‌‌ದಿನಚರಿ ಆರಂಭಿಸುವ ನಿರ್ಮಾಪಕ ಜೊತೆ ಕೈಜೋಡಿಸಿದ್ದೇನೆ ಎಂದರು. ಮತ್ತೊಬ್ಬ ನಟ ರಂಜನ್ ಕುಮಾರ್ ,ಸಂಗೀತ ನಿರ್ದೇಶಕ ರವೀಶ್ಕಾರ್ಯಕಾರಿ ನಿರ್ಮಾಪಕ ರೋಹನ್, ದಿನೇಶ್ ಖಾಂಡ್ತಲೆಮನ್ ಪರುಶುರಾಮ್ ಮಾಹಿತಿ ಹಂಚಿಕೊಂಡರು

.