ವಿಭಿನ್ನ ಪ್ರಯತ್ನ `ಕಲಿ ಕುಡುಕರು’

ಹೊಸ ತಂಡ ಹೊಸ ಕನಸು ಕಟ್ಟಿಕೊಂಡು ನಿರ್ಮಿಸಿರುವ ಚಿತ್ರ “ಕಲಿ ಕುಡುಕರು” ಬಿಡುಗಡೆಗೆ ಸಜ್ಜಾಗಿದೆ.

ಮಹೇಶ್ ಎನ್ ನಿರ್ಮಾಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿರುವಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಒಬ್ಬ ಆಟೋ ಡ್ರೈವರ್,  ಇನ್ನೊಬ್ಬ ಉಂಡಾಡಿ ಗುಂಡ,ಮತ್ತೊಬ್ಬ ರಿಯಲ್ ಎಸ್ಟೇಟ್ ಬ್ರೋಕರ್ ,ಇದರ ಜೊತೆಗೆ ಇನ್ನೊಬ್ಬ ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೊಬ್ಬನ ಸುತ್ತ  ಸಾಗುವ ಕಥೆ ಚಿತ್ರ ಒಳಗೊಂಡಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ನಟ, ಮಹೇಶ್ ಎನ್.ನಾಲ್ಕು ಜನರ ಪಾತ್ರದ ಸುತ್ತ ಸಾಗಲಿದೆ, ರಿಯಾಲಿಟಿ ಶೋಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತ ಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು  ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ನಾಗೇಂದ್ರ ಅರಸ್ ಮಾತನಾಡಿ, ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ತಂಡಕ್ಕೆ ಒಳ್ಳೆಯದಾಗಲಿ ಎಂದರೆ ನಾಯಕಿಯರಾದ ಸೋನು ಗೌಡ ,ರಿಚಿvಚಿ ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಬಡ್ಡಿ ಬಂಗಾರಮ್ಮ ಪಾತ್ರ, ಮನೆ ಮನೆಯ ಪಾತ್ರ ಎಂದರೆ ಲೋಹಿತ್, ರವೀಶ್, ಮುರುಳಿ ಮಾಹಿತಿ ಹಂಚಿಕೊಂಡರು

ತಾರಾಗಣದಲ್ಲಿ ಮಹೇಶ್ ಎನ್, ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್ ,ರಿತ್ಯಾ ,ಸೋನು ದೀಪು, ಶೃತಿ , ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ ಮತ್ತಿತರರು ಚಿತ್ರದಲ್ಲಿದ್ದಾರೆ. ಸನ್ನಿ ಮಾಧವನ್  ಸಂಗೀತ, ಚಿತ್ತೋರ್ ಸೂರಿ  ಕ್ಯಾಮರ ಚಿತ್ರಕ್ಕಿದೆ