ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರ ” ಪ್ರಭುತ್ವ ” ತೆರೆಗೆ ಬರಲು ಸಜ್ಜಾಗಿದೆ.
ಮೇಘಡಹಳ್ಳಿ ಶಿವಕುಮಾರ್ ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗುವ ಕಥೆ ಹೆಣೆದಿದ್ದಾರೆ. ಪುತ್ರ ರವಿರಾಜ್ ಎಸ್ ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಚೇತನ್ ಚಂದ್ರ ಮತ್ತು ಪಾವನಾ ಗೌಡ ನಾಯಕ,ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡ ಪಾವನಾ ಗೌಡ, “ಪ್ರಭುತ್ವ” ಒಳ್ಳೆಯ ಕಥೆಯಾಧರಿತ ಚಿತ್ರ. ಅನು ಎನ್ನುವ ಅನಾಥ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿಯ ಹುಡಕಾಟದಲ್ಲಿ ಸಾಗುವ ಪಾತ್ರ. ಪರಿಸರ ಪ್ರೇಮಿ, ಪ್ರೀತಿಯನ್ನು ಹುಡುಕುತ್ತಲೇ ಪ್ರೀತಿಸಿದರ ಜೊತೆ ಎಂತಹುದೇ ಕಠಿಣ ಪರಿಸ್ಥಿತಿ ಸಂದರ್ಭದಲ್ಲಿಯೂ ನಿಲ್ಲುವ ಗಟ್ಟಿ ಪಾತ್ರ ಎನ್ನುವ ವಿವರ ಹಂಚಿಕೊಂಡರು.
ಪ್ರಭುತ್ವ ಎರಡು ಮೂರು ವರ್ಷಗಳ ಕಾಲ ಚಿತ್ರೀಕರಣಕ್ಕಾಗಿ ಸಮಯ ತೆಗೆದುಕೊಂಡಿತು. ಹೀಗಾಗಿ ಇಷ್ಟೇ ದಿನ ಎನ್ನುವ ನಿರ್ಧಿಷ್ಡ ದಿನ ಲೆಕ್ಕ ಇಟ್ಟಿಲ್ಲ. ಅಂದಾಜು ನನ್ನ ಪಾತ್ರವೇ 60 ದಿನ ಆಗಿರಬಹುದು.ಒಟ್ಟಾರೆ ಇಡೀ ಚಿತ್ರವನ್ನು 130 ರಿಂದ 140 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು.
ವಿಭಿನ್ನ ಪಾತ್ರ
ಪ್ರಭುತ್ವದಲ್ಲಿ ವಿಭಿನ್ನ ಪಾತ್ರವಿದೆ.ಈ ರೀತಿಯ ಪಾತ್ರ ಮಾಡಬೇಕು ಎನ್ನುವ ಕನಸಿತ್ತು.ಅದು ಪ್ರಭುತ್ವ ಮೂಲಕ ಈಡೇರಿದೆ. ಡಿ ಗ್ಲಾಮರ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದೆ. ತುಂಬಾ ಸರಳವಾದ ಪಾತ್ರ ಮಾಡಬೇಕು ಎನ್ನುವ ಕನಸಿತ್ತು. ಪಾತ್ರ ಮತ್ತು ಕಥೆ ಚೆನ್ನಾಗಿದ್ದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು ನಟಿ ಪಾವನಾ ಗೌಡ.
ಇದುವರೆಗಿನ ಚಿತ್ರಜೀವನದಲ್ಲಿ ಉತ್ತಮ ಪಾತ್ರಗಳನ್ನು ಅಯ್ಕೆ ಮಾಡಿಕೊಂಡು ನಟಿಸಿದ್ದೇನೆ.,ಇನ್ನು ಮುಂದೆ ಈ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಮಾತ್ರ ಮಾಡುವ ಆಸೆ ಇದೆ ಎಂದು ಮಾಹಿತಿ ಹಂಚಿಕೊಂಡರು.
ವಿಭಿನ್ನ ಪಾತ್ರಕ್ಕೆ ಹುಡುಕಾಟ
“ಇದುವರೆಗೂ ಮಾಡದ, ಮನಸ್ಸಿಗೆ,ಖುಷಿ, ತೃಪ್ತಿ ಕೊಡುವ ಪಾತ್ರಗಳ ಹುಡುಕಾಟದಲ್ಲಿದ್ದೇನೆ.ಪ್ರಭುತ್ವದ ಪಾತ್ರವೂ ಮನಸ್ಸಿಗೆ ತುಂಬಾನೇ ಹಿಡಿಸಿದೆ. ಇದೇ ಮಾದರಿಯ ಮತ್ತು ಇಷ್ಟವಾಗುವ ಪಾತ್ರಗಳ ಶೋಧನೆಯಲ್ಲಿದ್ದೇನೆ. ಸದ್ಯದಕ್ಕೆ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಪ್ರಭುತ್ವದ ಕಡೆಗೆ ಗಮನ ಹರಿಸಿದ್ದೇನೆ…”
– ಪಾವನಾ ಗೌಡ, ನಟಿ