ವಿಭಿನ್ನ ಕಥೆಯ  `ಕ್ರೀಂ’ ಹೊಸ ಅವತಾರದಲ್ಲಿ ಕಿರಿಕ್ ಬೆಡಗಿ

ಬರಹಗಾರ, ಚಿಂತಕ ಅಗ್ನಿ ಶ್ರೀಧರ್ ವಿಭಿನ್ನ ಕಥಾಹಂದರ ಒಳಗೊಂಡಿರುವ ವಿಷಯವನ್ನು ಮುಂದಿಟ್ಟುಕೊಂಡು  ಈ ಬಾರಿ ” ಕ್ರೀಂ” ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ದಂಡುಪಾಳ್ಯ ಚಿತ್ರ ,” ಕ್ರೀಂ” ನಿರ್ಮಾಣ ಮಾಡಲು ಮೂಲ ಪ್ರೇರಣೆ ಎಂದು ಹಿರಿಯ ಪತ್ರಕರ್ತರೂ ಆಗಿರುವ ಆಗ್ನಿ ಶ್ರೀಧರ್ ಹೇಳಿದ್ದಾರೆ.

ಅಷ್ಟಕ್ಕೂ ದಂಡುಪಾಳ್ಯದ ಕಥೆಗೂ ಇವರ ಕಥೆಗೂ ಏನಾದರೂ  ಸಂಬಂಧ ಇದೆಯಾ?  ಆ ಚಿತ್ರ ಬಿಡುಗಡೆಯಾದ ಸಮಯದಲ್ಲಿ ವಾಸ್ತವ ಸಂಗತಿಗಳನ್ನು  ಸಮಾಜದ ಮುಂದಿಡುತ್ತೇನೆ ಎಂದು ತಮ್ಮದೇ ಪತ್ರಿಕೆಯಲ್ಲಿ ಬರೆದಾಗ  ಪೊಲೀಸ್ ಅಧಿಕಾರಿಗಳು ಇದೆಲ್ಲಾ ನಿನಗೇ ಬೇಕಾ.. ಭೂಗತ ಲೋಕದ ಕೇಸ್ ನಲ್ಲಿ ಫಿಟ್ ಮಾಡಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರೂ ಜಗ್ಗದೆ. ತನ್ನ ಒಡನಾಡಿ   ಬಚ್ಚನ್ ಅವರು  ಪೊಲೀಸರು ಫಿಟ್ ಮಾಡಿಬಿಡ್ತಾರೆ. ಅದು ನಮಗೆ ಬೇಕಾ ಎಂದು ವಾದ ಮಾಡಿದರೂ ಲೆಕ್ಕಿಸದೆ 12 ವರ್ಷಗಳಿಂದ ಇದೇ ಕಥೆಯನ್ನು  ಸಿನಿಮಾ ಮಾಡಬೇಕು ಎಂದು ಅಗ್ನಿ ಶ್ರೀಧರ್ ಹಠಕ್ಕೆ ಬಿದ್ದುದಾದರೂ ಯಾಕೆ..

ಅಂತಹ ವಿಷಯ ಏನು ಎನ್ನುವ ಕುತೂಹಲವನ್ನು ” ಕ್ರೀಂ”  ಚಿತ್ರದ ಮೂಲಕ ಅನಾವರಣ ಮಾಡಲು ನಿರ್ದೇಶಕ ಅಭಿಷೇಕ್ ಬಸಂತ್ ಗೆ ಸಾಥ್ ನೀಡಿದ್ದಾರೆ ಚಿತ್ರಕ್ಕೆ ಕಥೆ ಹಾಗು ಸಂಭಾಷಣೆ ಬರೆದಿರುವ  ಅಗ್ನಿ ಶ್ರೀಧರ್.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಕಥೆಗಾರ ಅಗ್ನಿ ಶ್ರೀಧರ್, ಅಧಿಕಾರ, ಸಂಪತ್ತಿಗಾಗಿ ಅಧಿಕಾರಸ್ಥರು, ರಾಜಕಾರಣಿಗಳು  ಮಾಡುವ ನರಬಲಿ, ಬೀದಿ ವೇಶ್ಯೆಯರನ್ನು ನೋಡಿಕೊಳ್ಳುವ ರೀತಿ, ಅಂತಹುದೇ ಸಮಸ್ಯೆಗೆ ಸಿಲುಕಿದ ಕಥಾ ನಾಯಕಿ ಸಂಯುಕ್ತ ಹೆಗಡೆ ಬೀದಿ ಸೂಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಅವರು ಸಮಸ್ಯೆಯನ್ನು  ಹೇಗೆ ಎದುರಿಸುತ್ತಾರೆ.ಅನುಭವಿಸುವ ಯಾತೆನೇ ಏನು ಎನ್ನುವ ವಿಷಯವನ್ನು  ಚಿತ್ರದ ಮೂಲಕ ಹೇಳಲಾಗಿದೆ.‌ಬಿಡುಗಡೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ  ವಿವಾದವಾಗಲಿದೆ ಅದನ್ನು ಎದುರಿಸಲು ಸಿದ್ದ ಎಂದು ಘೋಷಿಸಿದರು.

ನಿರ್ದೇಶಕ ಅಭಿಷೇಕ್ ಬಸಂತ್ , ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ದೊಡ್ಡಪ್ಪ ಅಗ್ನಿ ಶ್ರೀಧರ್  ಮತ್ತು ನಟಿ ಸಂಯುಕ್ತ ಹೆಗಡೆ ಅವರ ಸಹಾಕಾರದಿಂದ ಚಿತ್ರ ಚೆನ್ನಾಗಿ  ಮೂಡಿ ಬಂದಿದೆ.ಜೂನ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದು ಹೇಳಿಕೊಂಡರು.

ನಟಿ ಸಂಯುಕ್ತ ಹೆಗಡೆ ಮಾತನಾಡಿ  ತುಂಬಾ ಹತ್ತಿರವಾದ ಚಿತ್ರ. ಪಾತ್ರ ಚೆನ್ನಾಗಿ ಮೂಡಿಬಂದಿದೆ.ಅದಕ್ಕಾಗಿ ಕಷ್ಡಪಟ್ಟಿದ್ದೇನೆ. ವಿಭಿನ್ನ  ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ ಎಲ್ಲರ ಸಹಕಾರವಿರಲಿ ಎಂದರು.

ನಿರ್ಮಾಪಕ ದೇವೇಂದ್ರ‌  ಮಾತನಾಡಿ ಅಂಡರ್ ವಲ್ಡ್ ಸಿನಿಮಾ ಮಾಡೋಣ ಅಂದುಕೊಂಡಿದ್ದೆ.ಈ ಕಥೆ ಹೇಳಿದರು. ನಟಿ ಸಂಯುಕ್ತ ಹೆಗಡೆ ಚಿತ್ರ ಮಾಡ್ತೇವೆ ಎಂದಾಗ ಅನೇಕರು ಅವರ ಕಥೆ ಗೊತ್ತಾ , ಅವರ ಚಿತ್ರ ಗೊತ್ತಾ ಅಂದ್ರು ನನಗೂ ಭಯ ಆಗಿತ್ತು‌ ಸಮರ್ಪಣಾಭಾವದಿಂದ ಕೆಲಸ ಮಾಡುವ  ನಾಯಕಿ. ಒಂದು ರೀತಿ  ನಟ ರಾಕ್ಷಸಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರವನ್ನು ಬೆಂಗಳೂರು ಮತ್ತು ಚೆನ್ನಪಟ್ಟಣದಲ್ಲಿ ಚಿತ್ರೀಕರಣ ಮಾಡಲಾಗಿದೆ.ಅರುಣ್ ಸಾಗರ್ ,ಅಚ್ಯುತ್  ರೋಷನ್ ಸೇರಿದಂತೆ ಮತ್ತಿತರ ಕಲಾವಿದರಿದ್ದಾರೆ.