ವಿಭಿನ್ನ ಅವತಾರದಲ್ಲಿ ಪ್ರಮೋದ್ ಶೆಟ್ಟಿ

ಪ್ರಮೋದ್‍ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ‘ಶಭಾಷ್ ಬಡ್ಡಿಮಗ್ನೆ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ, ನಾರಾಯಾಣನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಮೋಷನ್ ಪೆÇೀಸ್ಟರ್ ಹಾಗೂ ಫಸ್ಟ್ ಲುಕ್‍ನ್ನು ರಕ್ಷಿತ್‍ಶೆಟ್ಟಿ ಅವರಿಂದ ಬಿಡುಗಡೆ ಮಾಡಿಸಿ ಚಿತ್ರಕ್ಕೆ ಶುಭಹಾರೈಸಿದೆ. ಈ ವೇಳೆ ನಿರ್ಮಾಪಕ ಪ್ರಕಾಶ್, ನಾಯಕಿ ಆದ್ಯಪ್ರಿಯಾ ಹಾಜರಿದ್ದರು.

ಚಿತ್ರದ ಸಂಪೂರ್ಣ ಮಾತಿನ ಭಾಗದ ಚಿತ್ರೀಕರಣ ಮತ್ತು ಒಂದು ಹಾಡನ್ನು ಚಿಕ್ಕಮಗಳೂರಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಸೆರೆ ಹಿಡಿಯಲಾಗಿದೆ. ಸಾಮ್ರಾಟ್‍ಶೆಟ್ಟಿ, ಕಾವ್ಯ ರಮೇಶ್ ಮತ್ತೊಂದು ಯುವ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶಂಕರ್‍ಅಶ್ವಥ್, ಪ್ರಕಾಶ್‍ತುಮ್ಮಿನಾಡು, ಮೂಗುಸುರೇಶ್, ರಮೇಶ್‍ರೈ ಕುಕ್ಕವಳ್ಳಿ, ರವಿತೇಜ, ಮಿತ್ರಾ, ಈಶ್ವರ್‍ಶೆಟ್ಟಿ, ಸುಧಾಮಣಿ, ಶೋಭಾಶೆಟ್ಟಿ, ಸವಿತಾ, ದರ್ಶನ್‍ಶೆಟ್ಟಿ, ಶೋಭಾಧನಂಜಯ್,ಗೀತಾವಸಂತ್ ಮುಂತಾದವರು ನಟಿಸಿದ್ದಾರೆ.

ಎಸ್.ಜೆ.ಸಂಜಯ್ ಸಹಕಾರ ನಿರ್ದೇಶಕ, ಅಣಜಿನಾಗರಾಜ್ ಛಾಯಾಗ್ರಹಣ, ಎಸ್.ಪಿ.ಭೂಪತಿ ಸಂಗೀತ, ಶ್ರೀನಿವಾಸ್ ಕಲಾಲ್ ಸಂಕಲನವಿದೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಆಶ್ಚರ್ಯಗಳನ್ನು ಕೊಡುತ್ತಾ, ನವೆಂಬರ್ ವೇಳೆಗೆ ಅಭಿಮಾನಿಗಳಿಗೆ ತೆರೆಗೆ ಬರುವ ಸಾಧ್ಯತೆಗಳಿವೆ