ವಿಭಿನ್ನಕಥೆಯ `ಡೇವಿಡ್’ ಟ್ರೈಲರ್ ಅನಾವರಣ..

ನಾಲ್ಕು ಕಥೆಗಳ ಸುತ್ತ  ಸಾಗುವ ಕಥಾ ಹಂದರವಿರುವ ಚಿತ್ರ ಡೇವಿಡ್.  ನಾಯಕ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಬಲವಂತವಾಗಿ ತೊಡಗಿಸಿಕೊಳ್ಳುವ ತಿರುಳು ಹೊಂದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಮುಂದಿನ ತಿಂಗಳು ತೆರೆಗೆ ತರುವ ಎಲ್ಲಾ ಸಾಧ್ಯತೆಗಳಿವೆ.

ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಇತ್ತು.ಸಮಾಜ ಸೇವಕ ಧನರಾಜ್  ಬಾಬು ಬಿಡುಗಡೆ‌ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ‌ ನಾಯಕ ಕಮ್‌ ನಿರ್ದೇಶಕ  ಶ್ರೇಯಸ್ ಚಿಂಗಾ  ,ಕೇನ್ಸ್ ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಇದಾಗಿದೆ . ಸಾಕಷ್ಟು ಸ್ನೇಹಿತರು ಸೇರಿ  ಚಿತ್ರ ನಿರ್ಮಾಣ ಮಾಡಿದ್ದೇವೆ‌.  ಧನರಾಜ್ ಬಾಬು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು. ಚಿತ್ರದ ಟ್ರೇಲರ್ ಎಡಿಟ್  ಮಾಡಿರುವ ಅರ್ಜುನ್,

ಇಸ್ರೇಲ್ ನ ಸಂಗೀತ ನಿರ್ದೇಶಕ ಸಂಗೀತ ನೀಡಿರುವುದು ಹಾಗೂ ಚೆನ್ನೈ ನಲ್ಲಿ ಸೌಂಡಿಂಗ್ ಮಾಡಿಸಲಾಗಿದೆ ಎಂದರು.

“ಡೇವಿಡ್” ವಿಭಿನ್ನ ಪ್ರಯತ್ನ. ನಾನು ಹಾಗೂ ಭಾರ್ಗವ್ ಯೋಗಾಂಬರ್ ಜಂಟಿಯಾಗಿ ನಿರ್ದೇಶಿಸಿದ್ದು  ನಾಯಕನಗೂ ನಟಿಸಿದ್ದೇನೆ. ಸಾರಾ ಹರೀಶ್  ನಾಯಕಿ. ಅವಿನಾಶ್,  ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಕವ್ಯ ಶಾ, ಬುಲೆಟ್ ಪ್ರಕಾಶ್, ಎಸ್ ಐ.ಡಿ ಮುಂತಾದವರು  ಚಿತ್ರದ ತಾರಬಳಗದಲ್ಲಿದ್ದಾರೆ ಎನ್ನುವ ಮಾಹಿತಿ ನೀಡಿದರು.

ಆಲ್ ಒಕೆ ಸಂಗೀತದ ಹಾಡಿದೆ ಸಂಚಿತ್ ಹೆಗಡೆ ಧ್ವನಿಯಾಗಿದ್ದಾರೆ. ಇದೇ ವೇಳೆ ಧನರಾಜ್ ಬಾಬು ನಿರ್ಮಾಣದಲ್ಲಿ ಶ್ರೇಯಸ್ಸ್ ಚಿಂಗಾ ನಾಯಕರಾಗಿ ನಟಿಸುತ್ತಿರುವ “ಪ್ರೊಡಕ್ಷನ್ ನಂ ೨”  ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.