ವಿಭಾಗ ಮಟ್ಟದ ಕ್ರೀಡೆಯಲ್ಲಿ ಕ್ರೀಡಾಪಟುಗಳ ಕಲರವ

ಶಹಾಪುರ ನ 09: ನಗರದ ಡಿಗ್ರೀ ಕಾಲೇಜಿನ ಸುಸಜ್ಜಿತ ಕ್ರೀಡಾಂಗಣದಲ್ಲಿ ವಿಭಾಗ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಶೇಷವಾಗಿ ಯಾದಗಿರಿ ಜಿಲ್ಲೆಯ ಬಾಲಕರ 14 ಮತ್ತು 17 ವಯೋಮಿತಿ ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮಸ್ಥಾನವನ್ನು ಪಡೆದುಕೊಂಡಿತು, ಹಾಗೇಯೆ ಬಾಲಕಿಯರಲ್ಲಿ ದ್ವೀತಿಯಸ್ಥಾನ ಪಡೆದು ವಿಜೃಂಭಿಸಿತು.
ಕಲ್ಬುರ್ಗಿ ವಿಭಾಗ ಮಟ್ಟದ 14 ಮತ್ತು 17 ವಯೋಮಿತಿ ಒಳಗಿನ ಬಾಲಕ ಬಾಲಕಿಯರು, ಕಬ್ಬಡ್ಡಿ ಪಂದ್ಯಾವಳಿಯಲ್ಲಿ,ಕಲ್ಬುರ್ಗಿ,ಬೀದರ್,ಬಳ್ಳಾರಿ,ಕೊಪ್ಪಳ,ರಾಯಚೂರು,ಯಾದಗಿರಿ,ವಿಜಯನಗರ ಜಿಲ್ಲೆಗಳಿಂದ ಒಟ್ಟು 336 ವಿದ್ಯಾರ್ಥಿಗಳು ಮತ್ತು ತರಬೇತಿ ಹೊಂದಿದ 56 ಜನ ಶಿಕ್ಷಕರು ಮಾರ್ಗದರ್ಶನದಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಬೆಳಗಿಂದ ಸಂಜೆವರೆಗೆ ವಿವಿಧ ಜಿಲ್ಲೆಗಳ ನಡುವೆ ಕಬಡ್ಡಿ ಪಂದ್ಯಾವಳಿ ಜರುಗಿದವು. 14 ವಯೋಮಿತಿ ಬಾಲಕರ 7 ತಂಡಗಳು, 17 ವಯೋಮಿತಿ ಬಾಲಕರ 7 ತಂಡಗಳು, ಮತ್ತು 14 ವಯೋಮಿತಿ ಬಾಲಕಿಯರ 7 ತಂಡಗಳು, 17 ವಯೋಮಿತಿ ಬಾಲಕಿಯರ 7 ತಂಡಗಳು ಒಟ್ಟು 28 ತಂಡಗಳು ಪಾಲ್ಗೊಂಡಿದ್ದವು, ಅಂತಿಮವಾಗಿ ಬಾಲಕರ ವಿಭಾಗದಲ್ಲಿ 14 ವಯೋಮಿತಿಯಲ್ಲಿ ಯಾದಗಿರಿ ಜಿಲ್ಲೆಯು ಪ್ರಥಮ ಸ್ಥಾನ, ಹಾಗೂ 17 ವಯೋಮಿತಿಯಲ್ಲಿ ಯಾದಗಿರಿ ಜಿಲ್ಲೆಯು ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ 14 ವಯೋಮಿತಿಯಲ್ಲಿ ಕೊಪ್ಪಳ ಜಿಲ್ಲೆಯು ಪ್ರಥಮ ಸ್ಥಾನ, ಹಾಗೂ 17 ವಯೋಮಿತಿಯಲ್ಲಿ ಬಳ್ಳಾರಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಕ್ರಮೇಣ ದ್ವೀತಿಯ ಸ್ಥಾನವನ್ನು ಬಾಲಕರಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯು ಪಡೆದುಕೊಂಡವು. ಬಾಲಕಿಯರಲ್ಲಿ ದ್ವೀತಿಯ ರಾಯಚೂರ, ಯಾದಗಿರಿ ತಂಡವು ಪಡೆದುಕೊಂಡವು, ವಿಜೇತ ತಂಡಗಳಿಗೆ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಸಮಸ್ತ ದೈಹಿಕ ಶಿಕ್ಷಕರ ದೈಹಿಕ ಶಿಕ್ಷಣಾಧಿಕಾರಿಗಳ, ಶಿಕ್ಷಣ ಇಲಾಖೆಯ ಅಧಿಕಾರಿಗಳ, ಸಂಪನ್ಮೂಲ ವ್ಯಕ್ತಿಗಳ, ಹಾಗೂ ವಿವಿಧ ಶಾಲೆಗಳ ಮುಖ್ಯಗುರುಗಳ, ಶಿಕ್ಷಕರ, ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ವಿಭಾಗ ಮಟ್ಟದ ಕ್ರೀಡಾಕೂಟ ಸಂಪನ್ನಗೊಂಡಿತು.