ವಿಭಾಗ ಮಟ್ಟದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.31:- ಪೆÇಲೀಸ್ ಇಲಾಖೆಯ ವತಿಯಿಂದ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯು ಡಿವೈಎಸ್ಪಿ ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯದ ಭವನದಲ್ಲಿ ನಡೆದ ಸಭೆಯಲ್ಲಿ ಕಳೆದ ಬಾರಿ ನಡೆದ ಸಭೆಯ ಅನುಪಾಲನಾ ವರದಿಯನ್ನು ಡಿವೈಎಸ್ ಪಿ ಅವರು ಓದಿದರು.ಸಭೆಯಲ್ಲಿ ಹಾಜರಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕುಂದುಕೊರತೆಗಳನ್ನು ಅವರು ಆಲಿಸಿದರು.
ಸಭೆಯಲ್ಲಿ ಹಾಜರಿದ್ದ ಆಲಗೂಡು ಪುಟ್ಟಮಲ್ಲಯ್ಯ ಮಾತನಾಡಿ, ಚೌಹಳ್ಳಿಯಲ್ಲಿರುವ ಶಾಹಿ ಗಾರ್ಮೆಂಟ್ಸ್ ಗೆ ಹೋಗುವ ಆಟೋಗಳಲ್ಲಿ ನಿಗದಿತ ಜನಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಆಟೋ ಚಾಲಕರು ಅತೀ ವೇಗದಲ್ಲಿ ಚಾಲನೆ ಮಾಡುತ್ತಾರೆ.ಗಾರ್ಮೆಂಟ್ ಕಾರ್ಮಿಕರು ಕೆಲಸಕ್ಕೆ ಬರುವಾಗ ಮತ್ತು ಕೆಲಸ ಬಿಡುವ ಸಂದರ್ಭದಲ್ಲಿ ರಸ್ತೆ ತುಂಬಾ ಆಟೋದವರ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ಓಡಾಡಲು ತುಂಬಾ ಕಿರಿಕಿರಿ ಆಗಿದೆ.ಪೆÇಲೀಸ್ ಸಿಬ್ಬಂದಿ ಸೂಕ್ತ ನಿರ್ವಹಣೆ ಮಾಡಬೇಕು ಎಂದರು.
ಪರಿಶಿಷ್ಟ ಜಾತಿ/ಪಂಗಡದ ಸಭೆ ನಡೆಸಿಲ್ಲ:
ಸೋಸಲೆ ಪುಟ್ಟಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಪೆÇಲೀಸ್ ಇಲಾಖೆಯ ವತಿಯಿಂದ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮ ನಡೆದಿಲ್ಲ.ಪೆÇಲೀಸ್ ಇಲಾಖೆಯ ವತಿಯಿಂದ ಅಸ್ಪೃಶ್ಯತೆ ನಿವಾರಣಾ ಜಾಗೃತಿಯಂತಹ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಅಸ್ಪೃಶ್ಯತೆ ಆಚರಣೆಯು ಸ್ವಲ್ಪಮಟ್ಟಿಗೆ ಇಳಿಮುಖವಾಗಬಹುದು.ಯಡದೊರೆ ಬಳಿ ಇರುವ ಟೋಲ್ ನಲ್ಲಿ ಅಕ್ರಮ ಹಣ ಸಂಗ್ರಹಣೆ ಮಾಡಲಾಗುತ್ತಿದೆ. ಕಂಪ್ಯೂಟರ್ ರಶೀದಿ ಬದಲು ಮಾನ್ಯುಯಲ್ ರಶೀದಿ ನೀಡಲಾಗುತ್ತದೆ.
ಟೋಲ್ ಬಳಿ ದರಪಟ್ಟಿಯನ್ನು ಕೂಡ ಪ್ರದರ್ಶನ ಮಾಡಿಲ್ಲ.ಬೇಕಾಬಿಟ್ಟಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ.ಅಲ್ಲದೆ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಪ್ರತಿ ಗ್ರಾಮಗಳಲ್ಲೂ ಪೆಟ್ಟಿಅಂಗಡಿ ಮತ್ತು ಮನೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಮದ್ಯ ಮಾರಾಟಕ್ಕೆ ಪೆÇಲೀಸ್ ಇಲಾಖೆಯು ಕಡಿವಾಣ ಹಾಕಬೇಕು ಎಂದರು.
ಗಸ್ತು ಸಮರ್ಪಕವಾಗಿಲ್ಲ:
ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ಪೆÇಲೀಸ್ ಇಲಾಖೆಯ ಗಸ್ತು ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಮರಳು ಕಳ್ಳ ಸಾಗಣೆ,ಕಳ್ಳತನ,ಕೊಲೆ, ಸುಲಿಗೆ, ಗಲಾಟೆಯಂಥಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಹಾಗಾಗಿ ಪೆÇಲೀಸ್ ಇಲಾಖೆ ಗಸ್ತು ಸಿಬ್ಬಂದಿಯನ್ನು ಹೆಚ್ಚಳ ಮಾಡಬೇಕು. ಗಸ್ತು ಸಿಬ್ಬಂದಿಯನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಕೊಲೆ,ಸುಲಿಗೆ,ಅಕ್ರಮ ಮರಳು ಸಾಗಣೆ, ಕಳ್ಳತನದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು.
ದೌರ್ಜನ್ಯ ಕಾಯ್ದೆಯ ಧ್ಯೇಯ ನಿಷ್ಕ್ರಿಯ:
ದಸಂಸ ಜಿಲ್ಲಾ ಸಂಚಾಲಕ ಉಮಾ ಮಹದೇವ್ ಮಾತನಾಡಿ, ಪರಿಶಿಷ್ಟ ಜಾತಿ /ಪಂಗಡದ ದೌರ್ಜನ್ಯ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಪೆÇಲೀಸ್ ತನಿಖೆ ಹಂತದಲ್ಲಿ ಬಹುತೇಕ ‘ಬಿ’ ರಿಪೆÇೀರ್ಟ್ ಆಗುತ್ತಿವೆ.ಈ ಪ್ರಕರಣಗಳಲ್ಲಿ ಪೆÇಲೀಸ್ ಇಲಾಖೆಯ ನಿರ್ಲಕ್ಷ್ಯ ಮನೋಭಾವದಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತಷ್ಟು ಹೆಚ್ಚಳ ಆಗುತ್ತಿವೆ.ದೌರ್ಜನ್ಯ ಪ್ರಕರಣಗಳಲ್ಲಿ ಪೆÇಲೀಸ್ ಇಲಾಖೆಯು ತಪ್ಪಿತಸ್ಥರ ಮೇಲೆ ಮೃದುಧೋರಣೆ ತಳೆಯುತ್ತಿದೆ.ದೌರ್ಜನ್ಯ ಪ್ರಕರಣದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆರೋಪಿಸಿದರು.
ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿದ ಡಿವೈಎಸ್ಪಿ ಗೋವಿಂದರಾಜು, ಎಸ್ಸಿ/ಎಸ್ಟಿ ಪ್ರಕರಣಗಳು ಜಾಸ್ತಿ ಆಗದಂತೆ ಹೆಚ್ಚು ನಿಗಾವಹಿಸಲಾಗುತ್ತಿದೆ.ದೌರ್ಜನ್ಯ ಕಾಯ್ದೆಯ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸುವುದು ಪೆÇಲೀಸ್ ಇಲಾಖೆಯ ಕರ್ತವ್ಯ.ಜಾತಿ ನಿಂದನೆ ಪ್ರಕರಣಗಳು ದುರುಪಯೋಗ ಆಗದಂತೆ ತಡೆಯಬೇಕು.ಗಸ್ತು ಸಿಬ್ಬಂದಿಯನ್ನು ಮತ್ತಷ್ಟು ಹೆಚ್ಚಿಸಲಾಗುವುದು.ಪೆÇಲೀಸ್ ಠಾಣೆಗಳಲ್ಲಿ ಮಹಿಳೆಯರ ಜೊತೆ ಸಂವಹನ ಮತ್ತು ವಿಚಾರಣೆ ನಡೆಸಲು ಮಹಿಳೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಪೆÇೀಸ್ಕೋ ಕಾಯ್ದೆಯ ಜಾರಿಗೆ ಕಟ್ಟುನಿಟ್ಟಿನ ಕ್ರಮಗೊಳ್ಳಲಾಗುವುದು. ದಂಡ ವಸೂಲಿ ಇಲಾಖೆಯ ಗುರಿಯಲ್ಲ ಸಂಚಾರಿ ನಿಯಮಗಳನ್ನು ಚಾಲಕರು ಪಾಲನೆ ಮಾಡಬೇಕು.ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತುರ್ತು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ತಲಕಾಡು ಸಿಪಿಐ ಆನಂದಕುಮಾರ್ ಜೆ. ಎನ್,ನಂಜನಗೂಡು ಟೌನ್ ಸಿಪಿಐ ಬಸವರಾಜು,ಸಂಚಾರಿ ಸಿಪಿಐ ಯಾಸ್ಮಿನ್ ತಾಜ್, ಬಿಳಿಗೆರೆ ಪಿಎಸ್‍ಐ ಕರಿಬಸಪ್ಪ,ಬನ್ನೂರು ಪಿಎಸ್‍ಐ ವಿನೋದ್,ದಸಂಸ ಜಿಲ್ಲಾ ಸಂಚಾಲಕರಾದ ಸೋಸಲೆ ರಾಜಶೇಖರ್, ತಾಲೂಕು ಸಂಚಾಲಕಕುಕ್ಕೂರು ರಾಜು, ಯರಗನಳ್ಳಿ ಸುರೇಶ, ಹಿರಿಯೂರು ಸೋಮಣ್ಣ,ತಲಕಾಡು ಆನಂದ,ನಿರಂಜನ್, ಚೌಹಳ್ಳಿ ಸಿದ್ದರಾಜು, ಬಸವರಾಜ್,ಸೋಸಲೆ ಮಹೇಶ್,ನಾಗರಾಜು, ಸೋಸಲೆ ಗಂಗಾಧರ್, ತುಂಬಲ ರಂಗದಾಸ್, ಪೇದೆಗಳಾದ ಮಾದೇಶ್, ವಿನೋದ್ ಇತರರು ಹಾಜರಿದ್ದರು.