ವಿಭಾಗೀಯ ಕಚೇರಿಗಳು ಹಬೊಹಳ್ಳಿಗೆ ಸ್ಥಳಾಂತರಗೊಂಡರೆ ಸೂಕ್ತ  ;


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಆ.06 ವಿಜಯನಗರ ಜಿಲ್ಲೆಯ ಮಧ್ಯಭಾಗದಲ್ಲಿರುವ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ 30 ರಿಂದ 35 ಕಿಮೀ ಭೌಗೋಳಿಕ ಪ್ರದೇಶ ಹೊಂದಿರುವ ಹಾಗೂ  ಮಧ್ಯವಿರುವ ಹಗರಿಬೊಮ್ಮನಹಳ್ಳಿಗೆ ಎಲ್ಲಾ ವಿಭಾಗೀಯ ಕಛೇರಿಗಳನ್ನು ಸ್ಥಳಾಂತರಗೊಂಡರೆ ಸೂಕ್ತ  ಎಂದು  ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಹಾಗೂ ಅಹಿಂದ ವೇದಿಕೆಯ ಬುಡ್ಡಿ ಬಸವರಾಜ ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು
ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಶುಕ್ರವಾರ   ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈಗಾಗಲೇ ಹೂವಿನಹಡಗಲಿ ಇದ್ದ ಡಿವೈಎಸ್‍ಪಿ ಕಛೇರಿ, ಪಿಡಬ್ಲುಡಿ, ಜಿಪಂ ಇಂಜನಿಯರಿಂಗ್ ವಿಭಾಗೀಯ ಕಛೇರಿಗಳು ಹೊಸಪೇಟೆಗೆ ಸ್ಥಳಾಂತರಗೊಳ್ಳುತ್ತಿರುವುದು ಖಂಡನೀಯ ಇದರಿಂದ ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾ ಕಛೇರಿಗಳನ್ನು ಹೊರತುಪಡಿಸಿ ಉಳಿದ ಎಸಿ ಕಛೇರಿ ಡಿವೈಎಸ್‍ಪಿ ಕಛೇರಿ, ಪಿಡಬ್ಲುಡಿ, ಜಿಪಂ ಇಂಜನಿಯರಿಂಗ್, ಜಿಲ್ಲಾ ಆಸ್ಪತ್ರೆ, ಜೆಸ್ಕಾಂ ಉಗ್ರಾಣ, ಅರಣ್ಯ ಇಲಾಖೆ, ಕೆಆರ್‍ಐಡಿಎಲ್ ಸೇರಿದಂತೆ ಎಲ್ಲಾ ವಿಭಾಗೀಯ ಕಛೇರಿಗಳನ್ನು ಹಬೊಹಳ್ಳಿ ತಾಲೂಕಿನಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿದ ಅವರು ಇದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದೆ ಎಂದರು
ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರಿಗೆ ಕಛೇರಿಗಳ ಸ್ಥಳಾಂತರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು  ಸಹಯೋಗದಲ್ಲಿ ಪಕ್ಷಾತೀತವಾಗಿ ಹೊಸಪೇಟೆ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.