ವಿಪ್ರಶ್ರೀ, ಜಗನ್ನಾಥ ವಿಠ್ಠಲ ಪ್ರಶಸ್ತಿಗೆ ಸಾಧಕರ ಆಯ್ಕೆ

ಕಲಬುರಗಿ:ಮಾ.8: ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ನಗರದ ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ 23ನೇ ವಾರ್ಷಿಕೋತ್ಸವ ಮಾರ್ಚ್ 10ರಂದು ನಡೆಯಲಿದ್ದು, ಅದರಂಗವಾಗಿ ವಾಹಿನಿಯಿಂದ ಕೊಡಮಾಡುವ 2023-24ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಸನ್ಮಾನಿತರ ಹೆಸರುಗಳನ್ನು ಸಹ ಆಯ್ಕೆ ಮಾಡಿ ಪ್ರಕಟಿಸಲಾಗಿದೆ.
ದಿ. 10ರಂದು ಸಂಜೆ 6 ಗಂಟೆಗೆ ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಖ್ಯಾತ ವಕೀಲರಾದ ರಾಘವೇಂದ್ರ ನಾಡಗೌಡರು ಹಾಗೂ ವಿಶ್ವಮಧ್ವ ಮಹಾಪರಿಷತ್ ಕಲಬುರಗಿ ಘಟಕದ ಅಧ್ಯಕ್ಷರಾದ ಡಿ.ಕೆ. ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು.
ಪ್ರಶಸ್ತಿಗೆ ಆಯ್ಕೆಯಾದವರ ವಿವರ:

  1. ವಿಪ್ರಶ್ರೀ ಪ್ರಶಸ್ತಿ (ಐದು ಸಾವಿರ ರೂ.): ದಿ. ರಂಗಾಚಾರ್ಯ ಮಣ್ಣೂರ ಸ್ಮರಣಾರ್ಥ ವೇ.ಮೂ. ದತ್ತಾಚಾರ್ಯ ಹೊಗಾಡೆ ಮತ್ತು ದಿ. ಬದರಿವ್ಯಾಸ ದೇವನಹಳ್ಳಿ ಸ್ಮರಣಾರ್ಥ ವೇ.ಮೂ. ಶ್ರೀಶಿಲಾ ಶಾಸ್ತ್ರಿ-ಸುರಪುರ.
  2. ಶ್ರೀ ಜಗನ್ನಾಥ ವಿಠ್ಠಲ ಪ್ರಶಸ್ತಿ (ಐದು ಸಾವಿರ ರೂ.): ದಿ. ಜಗನ್ನಾಥರಾವ ಚಂಡ್ರಿಕಿ ಸ್ಮರಣಾರ್ಥ ಡಾ. ಉದಯ ಪಾಟೀಲ್ (ಸಾಮಾಜಿಕ ಕ್ಷೇತ್ರ), ದಿ. ವಸಂತರಾವ ನಾಡಗೌಡ ಸ್ಮರಣಾರ್ಥ ಹಳ್ಳೇರಾವ ಕುಲಕರ್ಣಿ ಕೆಂಭಾವಿ (ಶಿಕ್ಷಣ), ದಿ. ಶ್ರೀನಿವಾಸರಾವ ಕುಲಕರ್ಣಿ ಬಳೂಂಡಗಿ ಸ್ಮರಣಾರ್ಥ ಡಾ. ವಾದಿರಾಜ ತಾಯಲೂರು (ದಾಸಸಾಹಿತ್ಯ ಕ್ಷೇತ್ರ), ದಿ. ರಾಮರಾವ ಪಾಟೀಲ್ ಸ್ಮರಣಾರ್ಥ ಶೇಷಗಿರಿ ಹುಣಸಗಿ, ಉಪ ಸಹಾಯಕ ಸಂಪಾದಕರು, ಸಂಯುಕ್ತ ಕರ್ನಾಟಕ, ಕಲಬುರಗಿ (ಮಾಧ್ಯಮ ಕ್ಷೇತ್ರ).
  3. ಗೌರವ ಸನ್ಮಾನ: (ನಾಲ್ಕು ಸಾವಿರ ರೂ.): ದಿ. ಆಡಕಿ ಶ್ರೀನಿವಾಸಾಚಾರ್ಯ ಸ್ಮರಣಾರ್ಥ- ನಾರಾಯಣಾಚಾರ್ಯ ಕಮಲಾಪುರ, ಅರ್ಚಕರು. ದಿ. ಗುರುಭೀಮರಾವ ಕುಲಕರ್ಣಿ ಕುರಕುಂಟಾ ಸ್ಮರಣಾರ್ಥ- ಪ್ರಕಾಶ ಭಟ್, ಚಿತ್ತಾಪುರ.
  4. ದಿ. ಶಂಕರದಾಸ ಚಿನ್ಮಳ್ಳಿ ಸ್ಮರಣಾರ್ಥ ಸಂಗೀತ ಕ್ಷೇತ್ರದ ಯುವ ಪ್ರತಿಭೆಗೆ ಪ್ರೋತ್ಸಾಹಿಸಲು ಗೌರವಧನ-ಸನ್ಮಾನ (4 ಸಾವಿರ ರೂ.): ನಯನಕುಮಾರ್ ಎನ್. ಮಳಖೇಡಕರ್.
  5. ದಿ. ಜಾನಕಿಬಾಯಿ ದೇಶಪಾಂಡೆ ಹುಣಸಗಿ ಸ್ಮರಣಾರ್ಥ 2023-24ನೇ ಸಾಲಿನ ಅತ್ಯುತ್ತಮ ಭಜನಾ ಮಂಡಳಿ ಪ್ರಶಸ್ತಿ: ಶ್ರೀ ಧ್ಯಾನಾಂಜನೇಯ ಭಜನಾ ಮಂಡಳಿ.

ಭಜನಾ ಮಂಡಳಿಗಳನ್ನು ಕಟ್ಟಿ, ಬೆಳೆಸಿ ದಾಸರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುತ್ತ ಸಾಧನೆಗೈಯುತ್ತಿರುವುದಕ್ಕಾಗಿನ ಸನ್ಮಾನಕ್ಕೆ ಆಯ್ಕೆಯಾದವರು:- ನಳಿನಿ ತುಮಾರನವಿಸ್, ಸಾವಿತ್ರಿ ದೇಶಪಾಂಡೆ, ಮಾಲಾಬಾಯಿ, ಕಾಮಾಕ್ಷಿ ಜಹಗೀರದಾರ, ಸುಧಾ ಕುಲಕರ್ಣಿ, ಗಿರಿಜಾ ವೆಂಕಣ್ಣಾಚಾರ್ಯ, ರುಕ್ಮಿಣಿ ಡಿ. ಕುಲಕರ್ಣಿ, ಸುವರ್ಣಾ ದೇಶಮುಖ, ಮಂಜುಳಾ ಹೊಸೂರಕರ್, ಸವಿತಾ ಕಂದರ್ಪಿ, ರೇಖಾ ದೇಶಪಾಂಡೆ, ಅನುರಾಧಾ ದೇಶಮುಖ, ಅಶ್ವಿನಿ ಕುಲಕರ್ಣಿ, ನಾಗವೇಣಿ ಜೋಶಿ, ಪುಷ್ಪಾ ಅಗ್ನಿಹೋತ್ರಿ, ಜಯಶ್ರೀ ಕುಲಕರ್ಣಿ, ಸುಲಭಾ ಕುಲಕರ್ಣಿ, ಪ್ರತಿಭಾ ಕುಲಕರ್ಣಿ, ಪಲ್ಲವಿ ಕೊಪ್ಪರ.


ಶೋಭಾಯಾತ್ರೆ

ಪ್ರಶಸ್ತಿ ಪ್ರದಾನ ಸಮಾರಂಭದ ಮುನ್ನ 10ರಂದು (ರವಿವಾರ) ಸಂಜೆ 5 ಗಂಟೆಗೆ ಬ್ರಹ್ಮಪುರ ಉತ್ತರಾದಿ ಮಠದಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದವರೆಗೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನ ಹಾಗೂ ದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ಭಕ್ತರು ಭಾಗವಹಿಸಬೇಕೆಂದು ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯಕ್ಷರಾದ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕರಾದ ಭೀಮಭಟ್ಟ ಬೆಂಕಿ ಮೋತಕಪಲ್ಲಿ ಕೋರಿದ್ದಾರೆ.