ವಿಪತ್ತು ಪರಿಹಾರ ನಿರ್ವಹಣೆಗೆ ಕ್ರಮ; ತಹಶೀಲ್ದಾರ್ ತಿರುಪತಿ ಪಟೇಲ್

ಹೊನ್ನಾಳಿ ಮೇ:19; ಮಳೆಯಿಂದ ಉಂಟಾಗಿರುವ ಹಾನಿ ಅನಾಹುತಗಳ ನಿಯಂತ್ರಣಕ್ಕೆ ಟಾಸ್ಕ್ ಪೋರ್ಟ್ ರಚಿಸಲಾಗುವುದು ಎಂದು ತಹಶೀಲ್ದಾರ್ ತಿರುಪತಿ ಪಾಟಿಲ್ ಹೇಳಿದರು. ತಾಲೂಕು ಪಂಚಾಯಿತಿಯಲ್ಲಿ  ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಪ್ರಕೃತಿಕ ವಿಪತ್ತುಗಳಿಂದ ಆಗುವ ಹಾನಿಗಳಿಗೆ ಈ ಸಮಿತಿಯ ವರದಿ ಆಧರಿಸಿ ಪರಿಹಾರ ನೀಡಲಾಗುವುದು ಎಂದರು. ಕಳೆದ ಮಳೆಯಲ್ಲಿ ಕೆರೆಕಟ್ಟೆಗಳು ತುಂಬಿ ಹೊಲ ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾದ ಗ್ರಾಮಗಳ ಪಟ್ಟಿ ನದಿ ದಡದ ಹಳ್ಳಿಗಳಿಗೆ ನೀರು ನುಗ್ಗಿದ ಮಾಹಿತಿ ಕೊಡಬೇಕು ವಿಪತ್ತಿನಲ್ಲಿರುವ ಹಳ್ಳಿಗಳ ನಕ್ಷೆ ತಯಾರಿಸಬೇಕು ಅಂತಹ ಕಡೆ ಗ್ರಾಮ ಮಟ್ಟದಲ್ಲಿ ಉತ್ತಮ ಈಜುಗಾರರನ್ನು ಗುರುತಿಸಬೇಕು ತೆಪ್ಪವನ್ನು ಒದಗಿಸಬೇಕು ಎಂದು ತಿಳಿಸಿದರು ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ತಂತಿ ತುಂಡರಿಸಿ ಬಿದ್ದಿದ್ದರೆ ಜನ ಜಾನುವಾರುಗಳ ಪ್ರಾಣ ಹಾನಿ ತಪ್ಪಿಸಲು ಬೆಸ್ಕಾಂ ಅಧಿಕಾರಿಗಳು ಎಚ್ಚರ ವಹಿಸಬೇಕು ಮತ್ತು ಅಂತಹ ಘಟನೆಗಳು ಇದ್ದರೆ ವರದಿ ಸಲ್ಲಿಸಬೇಕು ಅಗ್ನಿಶಾಮಕ ದಳ ಕೂಡ ನೆರವಿಗೆ ಧಾವಿಸಬೇಕು ಎಂದರು.ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಚರಂಡಿಗಳು ಬ್ಲಾಕ್ ಆಗಬಾರದು ಸಮಸ್ಯೆ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯ ಎಲ್ಲಾ ಪಿಡಿಒ ಗ್ರಾಮ ಲೆಕ್ಕಿಗರು ರಾಜ್ಯಸ್ವ ನೀರಿಕ್ಷಕರು ಕೈಜೋಡಿಸಬೇಕು ಮತ್ತು ಕ್ರಿಯಾ ಯೋಜನೆ ತಯಾರಿಸಿ ಕೊಡಬೇಕು ಎಂದು ಸೂಚಿಸಿದರು. ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಶಂಭುಲಿಂಗಯ್ಯ ಸೇರಿ ಮೆಸ್ಕಾಂ ಇಲಾಖೆ ಅಗ್ನಿಶಾಮಕ ದಳದ ಅಧಿಕಾರಿಗಳು ಪಿಡಿಒ ಲೆಕ್ಕಾಧಿಕಾರಿಗಳು ರಾಜಸ್ವ ನಿರೀಕ್ಷಕರು ಪಾಲ್ಗೊಂಡಿದ್ದರು.