ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಕಾರ್ಯ ಶ್ಲಾಘನಿಯ: ಎ.ಡಿ.ಸಿ

ಬೀದರ್:ಜೂ.25: ಪಕೃತಿ ವಿಕೋಪ ಸೇರಿದಂತೆ ಇತರೆ ಯಾವುದೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಎನ್.ಡಿ.ಆರ್. ಎಫ್. ಜನರ ಜೀವ ಉಳಿಸುವ ಮಹತ್ವದ ಕಾರ್ಯ ಮಾಡುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ಜಿಲ್ಲಾಡಳಿತ ಬೀದರ, ಎನ್.ಡಿ.ಆರ್.ಎಫ್. ಅಗ್ನಿಶಾಮಕ ದಳ ಮತ್ತು ತಾಲೂಕು ಆಡಳಿತ ಬೀದರ ಇವರ ಸಹಯೋಗದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರು ಹೇಗೆ ತಮ್ಮನ್ನು ತಾವು ರಕ್ಷಣೆ ಪಡೆಯಬೇಕು ಎಂಬುದರ ಕುರಿತು ಹಮ್ಮಿಕೊಂಡಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇದು ನಿಜವಾಗಿ ಪ್ರಕೃತಿ ವಿಕೋಪ ಆದಾಗ ತುಂಬಾ ಕಷ್ಟ ಆಗುತ್ತದೆ ಅದನ್ನು ಹೇಗೆ ನಿರ್ವಹಣೆ ಮಾಡಬಹುದು ಎನ್ನುವ ಕುರಿತು ಮುಂಜಾಗ್ರತೆ ವಹಿಸಲು ಇಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎನ್.ಡಿ.ಆರ್.ಎಫ್ ತಂಡಕ್ಕೆ ನಾವು ಯಾವಾಗಲೂ ಕರೆ ಮಾಡಿದರು ಅವರ ನಮ್ಮ ಕರೆಗೆ ಬೇಗನೆ ಸ್ಪಂದಿಸಿ ಬರುತ್ತಾರೆ ಮತ್ತು ಅಗ್ನಿ ಶಾಮದ ದಳದವರು ಪ್ರಕೃತಿ ವಿಕೋಪ ಸೇರಿದಂತೆ ಇತರೆ ಅವಘಡಗಳು ಸಂಭವಿಸಿದಾಗ ಅವರು ಫಸ್ಟ ರೆಸ್ಪಾಂಡರ ಆಗಿ ಕಾರ್ಯ ನಿರ್ವಹಿಸುತ್ತಾರೆ ಆರೋಗ್ಯ ಇಲಾಖೆಯು ಇಂಥಹ ಸಂದರ್ಭಗಳಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡುತ್ತದೆ ಎಂದರು.ರಾಷ್ಟ್ರೀಯ ವಿಪತ್ತು ನಿರ್ವಹಣೆ ಎನ್.ಡಿ.ಆರ್.ಎಫ್ ತಂಡದ ಇಪ್ಪತ್ತು ಜನರು ಕಳೆದ 10-15 ದಿನಗಳಿಂದ ನಮ್ಮ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಜನರು ತಮ್ಮನ್ಮು ತಾವು ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.ಜನರು ಈ ಕುರಿತು ಮುಂಜಾಗ್ರತೆ ವಹಿಸುವದು ಬಹಳ ಮುಖ್ಯವಾಗಿದೆ, ಪ್ರಕೃತಿ ವಿಕೋಪಗಳು ಯಾವ ಸಂದರ್ಭದಲ್ಲಿ ಹೇಗೆ ಬರುತ್ತವೆ ನಮಗೆ ತಿಳಿಯುವದಿಲ್ಲ ಸರ್ಕಾರ ಜಾಗೃತಿ ಮೂಡಿಸಿದರೆ ಸಾಲದು ಅದರ ಜೊತೆಗೆ ಜನರು ಜಾಗೃತರಾಗಬೇಕು. ಆರೋಗ್ಯ ಇಲಾಖೆ, ಅಗ್ನಿಶಾಮಕ, ಎನ್.ಡಿ.ಆರ್.ಎಫ್ ತಂಡಗಳು ಈ ಅಣಕು ಪ್ರದರ್ಶನ ಎಲ್ಲರಿಗೆ ಮನಮುಟ್ಟುವಂತೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು. ಜನರು ವಿವಿಧ ಸಮಾರಂಭಗಳಲ್ಲಿ ಭಾಗವಹಿಸುವದು ಮತ್ತು ಮಧ್ಯಪಾನ ಮಾಡಿ ನಿರ್ಲಕ್ಷ್ಯ ವಹಿಸಿ ದೋಣಿಯಲ್ಲಿ ಕುಳಿತಾಗ ಮುಂದಾಗುವ ದೋಣಿ ದುರಂತ ನಂತರ ಅವರನ್ನು ರಕ್ಷಣೆ ಮಾಡುವ ಎನ್.ಡಿ.ಆರ್.ಎಫ್. ಹಾಗೂ ಅಗ್ನಿಶಾಮಕ ದಳದ ಹರ ಸಾಹಸ ಕಾರ್ಯ ಅವರನ್ನು ಆಸ್ಪತ್ರೆಗೆ ಕಳಿಸುವ ದೃಷ್ಯಗಳು, ಎಲ್ಲರ ಕಣ್ಣಿಗೆ ಕಟ್ಟುವಂತಿದ್ದ ಈ ಅಣುಕು ಪ್ರದರ್ಶನ ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ತದೇಕಚಿತ್ತದಿಂದ ವೀಕ್ಷಿಸಿದರು.ಈ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ 10 ನೇ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಪ್ರದೀಪ ಕುಮಾರ. ಅಗ್ನಿಶಾಮಕ ದಳದ ಅಧಿಕಾರಿ ಮುಜಾಯಿಲ್ ಪಟೇಲ್, ಗ್ರೆಡ್- 2 ತಹಶಿಲ್ದಾರ ನರಸಪ್ಪ, ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಸಂದೀಪ ಪಾಟೀಲ್, ಆರೋಗ್ಯ ಅಧಿಕಾರಿ ಧಮ್ಮ ರತ್ನ, ಮರಕಲ್ ಗ್ರಾಮ ಪಂಚಾಯತಿ ಪಿ.ಡಿ.ಓ ಉಮೇಶ ಜಾಬಾ, ಜನವಾಡ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಆರೋಗ್ಯ, ಅಗ್ನಿಶಾಮಕ, ಎನ್.ಡಿ.ಆರ್. ಎಫ್ ತಂಡದ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.