ವಿಪಕ್ಷ ನಾಯಕರ ಕುರ್ಚಿ ಖಾಲಿ ನೋಡಿ ಯಾರೂ ಕಳೆದುಕೊಂಡಿದ್ದಾರೆಂದು ಅನಿಸುತ್ತದೆ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಜು.9:ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಅವರು ಮಾಡಿರುವ ಸ್ವಯಂಕೃತ ಅಪರಾಧಗಳೇ ಅವರು ರಾಜ್ಯದಲ್ಲಿ ಹೀನಾಯವಾಗಿ ಸೋಲಲು ಕಾರಣ,
ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯ ಸ್ಥಿತಿ ಮನೆಯೊಂದು ಆರು ಬಾಗಿಲುಗಳಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಹಲ್ಯಾಳದಲ್ಲಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸುವ ಹಂಗಾಮಿಗೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಗೊಂಡು ಒಂದುವರೆ ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಜೆಟ್ ಅಧಿವೇಶನದಂತಹ ಮಹತ್ವದ ಸಮಯದಲ್ಲಿಯೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನ ತುಂಬಲು ಸಾಧ್ಯವಾಗಿಲ್ಲ ಆದರೂ ಬಿಜೆಪಿಯವರು ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಕೆಲ ದಿನಗಳವರೆಗೆ ವಿಳಂಬವಾದಾಗ ಮಾಧ್ಯಮಗಳೆದುರು ಅನಾವಶ್ಯಕ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು, ಈಗ ಅವರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ದುರಾದೃಷ್ಟ ಎಂದ ಅವರು ರಾಜ್ಯ ಬಿಜೆಪಿಯಲ್ಲಿ ಗಟ್ಟಿ ನಾಯಕತ್ವ ಇಲ್ಲ ಹೀಗಾಗಿ ಯಾರ ಮೇಲೂ ಯಾರದೂ ಹಿಡಿತ ಇಲ್ಲದಂತಾಗಿದೆ ಎಂದರು.
ಈ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗಾಗಿ ಸುಮಾರು 19400 ಕೋಟಿ ಅನುದಾನ ಮೀಸಲಿಡಲಾಗಿದ್ದು, ಈ ಅನುದಾನ ಅಥಣಿ ಮತಕ್ಷೇತ್ರದ ನೀರಾವರಿ ಯೋಜನೆಗೂ ಅನುಕೂಲವಾಗಲಿದೆ, ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಸಣ್ಣ ಮಧ್ಯಮ ಮತ್ತು ದೊಡ್ಡ ರೈತರಿಗೆ ಉಪಯೋಗವಾಗಲಿದೆ ಒಟ್ಟಿನಲ್ಲಿ ಈ ಬಜೆಟ್ ಸರ್ವರಿಗೂ ಸಮ ಪಾಲು, ಸಮ ಬಾಳು ಸಂದೇಶ ನೀಡುತ್ತದೆ,
ಒಟ್ಟಿನಲ್ಲಿ ಈ ಬಜೆಟ್ ಕಡು ಬಡವರು, ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರಿಗೂ ಅನಕೂಲವಾಗುವಂತೆ ಸಿಎಂ ಸಿದ್ಧರಾಮಯ್ಯ ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ, ವಿರೋಧ ಪಕ್ಷದವರು ಆಡಳಿತ ಪಕ್ಷದ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಬೇಕು, ರಚನಾತ್ಮಕವಾದ, ಪ್ರಗತಿಪರವಾದ ಹಾಗೂ ರಾಜ್ಯದ ಹಿತಕ್ಕಾಗಿ ಟೀಕೆಗಳನ್ನ ಮಾಡಿ ರಾಜಕಾರಣಕ್ಕಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಯುವ ನಾಯಕ ಚಿದಾನಂದ ಸವದಿ, ಮುಖಂಡರಾದ ಎಸ್.ಕೆ.ಬುಟಾಳಿ, ಶಿವು ಗುಡ್ಡಾಪುರ, ಮಹಾಂತೇಶ ಠಕ್ಷಣ್ಣವರ, ಸುರೇಶ ಮಾಯಣ್ಣವರ, ಶಾಂತಿನಾಥ ನಂದೇಶ್ವರ, ಶಿವರುದ್ರ ಧೂಳಪ್ಪನವರ, ಮಹಾದೇವ ಬಸಗೌಡರ, ಲಕ್ಷ್ಮಣ ಮುಗಳಖೋಡ, ಅಶೋಕ ಕೌಜಲಗಿ, ಪುರಸಭಾ ಸದಸ್ಯರಾದ ಕಲ್ಲೇಶ ಮಡ್ಡಿ, ರಾಜಶೇಖರ ಗುಡೊಡಗಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಬಸವರಾಜ ಗಲಗಲಿ, ಗುತ್ತಿಗೆದಾರ ವಿಕ್ರಮ ಭೋಸಲೆ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು
ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಆಗದಿರುವುದು ದುರ್ದೈವದ ಸಂಗತಿ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಖುರ್ಚಿ ಖಾಲಿ ಇರುವುದನ್ನು ನೋಡಿ, ಯಾರೂ ಕಳೆದುಕೊಂಡಿದ್ದಾರೆಂದು ಅನಿಸುತ್ತದೆ, ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡುವ ಮೂಲಕ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ,
ಲಕ್ಷ್ಮಣ ಸವದಿ, ಶಾಸಕರು