ವಿಪಕ್ಷ ನಾಯಕನ ಹೆಸರು ನಾಳೆ ಬಹಿರಂಗ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧:ವಿರೋಧ ಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಪ್ರಕಟಿಸಲಿದ್ದಾರೆ. ಚಿಕ್ಕಮಗಳೂರಿಗೆ ರಾಜಕೀಯ ಚರ್ಚೆ ಮಾಡಲು ಬಂದಿಲ್ಲ. ರಾಜಕೀಯ ಚರ್ಚೆ ಮಾಡಲು ಇಷ್ಟು ದೂರ ಬರುವ ಅಗತ್ಯವಿಲ್ಲ. ಮಾಜಿ ಸಚಿವ ಆರ್. ಅಶೋಕ್ ಹುಟ್ಟುಹಬ್ಬ ಆಚರಣೆಗೆ ಬಂದಿದ್ದೆ. ಇಂದು ವಾಪಸ್ ಹೋಗುತ್ತಿದ್ದೇನೆ ಎಂದರು.
ಗೃಹಜ್ಯೋತಿ ಯೋಜನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ವಿದ್ಯುತ್‌ದರವನ್ನು ಹೆಚ್ಚಿಸಲಾಗಿದೆ. ಎಲ್ಲದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.