
ನೂತನ ಸಂಸತ್ ಭವನ ವಿವಾದ
ನವದೆಹಲಿ,ಮೇ೨೫:ನೂತನ ಸಂಸತ್ ಭವನ ಉದ್ಘಾಟನೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೆ ಮೂರು ದೇಶಗಳ ಪ್ರವಾಸ ಮುಗಿಸಿ ದೆಹಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರಮೋದಿ, ನೂತನ ಸಂಸತ್ ಭವನದ ಸಮಾರಂಭ ಬಹಿಷ್ಕರಿಸಿರುವ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.ಸಂವಿಧಾನದ ಪ್ರಕಾರ ರಾಷ್ಟ್ರಪತಿ ದ್ರೌಪದಿಮುರ್ಮು ಅವರನ್ನು ಉದ್ಘಾಟನೆಗೆ ಆಹ್ವಾನಿಸಬೇಕು, ಆದರೆ, ಕೇಂದ್ರ ಸರ್ಕಾರ ನಿರ್ಲಕ್ಷ್ಯ ತಾಳಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದವು.
ಮೂರು ದೇಶಗಳ ಪ್ರವಾಸ ಮುಗಿಸಿ ರಾಜಧಾನಿ ದೆಹಲಿಯ ಪಾಲಂ ವಿಮಾನನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿರುವ ಪ್ರತಿಪಕ್ಷಗಳ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಮೂರು ರಾಷ್ಟ್ರಗಳ ಪ್ರಯಾಣವನ್ನು ರಾಷ್ಟ್ರದ ಒಳಿತಿಗಾಗಿ ಮತ್ತು ರಾಷ್ಟ್ರಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಮೂರು ರಾಷ್ಟ್ರಗಳ ಎಲ್ಲಾ ನಾಯಕರು ಹಾಗೂ ಪ್ರವಾಸದ ಸಮಯದಲ್ಲಿ ಭೇಟಿ ಮಾಡಿದ ಎಲ್ಲಾ ವ್ಯಕ್ತಿಗಳು ತುಂಬಾ ಮಂತ್ರಮುಗ್ಧರಾಗಿದ್ದರು ಮತ್ತು ಭಾರತ ಜಿ-೨೦ ಅಧ್ಯಕ್ಷ ಸ್ಥಾನ ಹೊಂದಿರುವುದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಯಾವುದೇ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಜಗತ್ತಿನ ಮುಂದೆ ದೇಶವನ್ನು ವೈಭವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇದಕ್ಕೆ ಕಾರಣ ನೀವೆಲ್ಲರೂ ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿದ ಸರ್ಕಾರ. ನಾನು ಮಾತನಾಡುವಾಗ, ಜಗತ್ತು ನನ್ನನ್ನು ಮಾತ್ರ ನಂಬುವುದಿಲ್ಲ, ಆದರೆ ನಾನು ಪ್ರತಿನಿಧಿಸುವ ಎಲ್ಲಾ ೧೪೦ ಕೋಟಿ ಭಾರತೀಯರನ್ನು ನಂಬುತ್ತದೆ ಎಂದು ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದವರು ಭಾರತವನ್ನು ಪ್ರೀತಿಸುವ ಜನರು, ಪ್ರಧಾನಿ ಮೋದಿಯಲ್ಲ ಎಂದು ಹೇಳಿದ ಅವರು ದೇಶದ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ, ಪ್ರಪಂಚದ ಕಣ್ಣುಗಳನ್ನು ನೋಡುತ್ತೇನೆ.ದೇಶದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿದ್ದರಿಂದ ಈ ವಿಶ್ವಾಸ ಬಂದಿದೆ ಎಂದಿದ್ದಾರೆ.ತಮಿಳು ಭಾಷೆ ನz ಭಾಷೆ ಇದು ಪ್ರತಿಯೊಬ್ಬ ಭಾರತೀಯನ ಭಾಷೆ. ಪ್ರಪಂಚದ ಅತ್ಯಂತ ಹಳೆಯ ಭಾಷೆಯಾಗಿದೆ. ’ತಿರುಕ್ಕುರಲ್’ ಪುಸ್ತಕದ ಟೋಕ್ ಪಿಸಿನ್ ಅನುವಾದವನ್ನು ಪಪುವಾ ನ್ಯೂಗಿನಿಯಾದಲ್ಲಿ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳೀದ್ದಾರೆ.
ವಿದೇಶಗಳಲ್ಲಿ ಅಭಿನಂದನೆ
’ಕೋವಿಡ್ ಸೋಂಕಿನ ಉತ್ತುಂಗದಲ್ಲಿ ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದ್ದಕ್ಕಾಗಿ ತಮ್ಮ ಸರ್ಕಾರವನ್ನು ಪ್ರಶ್ನಿಸಿದ್ದ ಪ್ರತಿಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡರು.
ಇತರ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಸಿದ್ದಕ್ಕಾಗಿ ಎಲ್ಲಾ ದೇಶಗಳು ಧನ್ಯವಾದ ತಿಳಿಸಿದ್ದಾರೆ. ಇದು ಖುಷಿಯ ಕ್ಷಣ ಎಂದಿದ್ದಾರೆ.