ವಿಪಕ್ಷಗಳ ಟೀಕೆಗೆ ಕೇಜ್ರಿವಾಲ್ ತಿರುಗೇಟು

ನವದೆಹಲಿ, ನ. ೨೮: ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಈಗಾಗಲೇ ಚುನಾವಣಾ ಕಾರ್ಯವನ್ನು ಆರಂಭ ಮಾಡಿದೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಪಂಜಾಬ್‌ನಲ್ಲಿ ಎಎಪಿ ಗೆದ್ದರೆ ೧೮ ವರ್ಷ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಾಕಲಾಗುವುದು,” ಎಂದು ಆಶ್ವಾಸನೆ ನೀಡಿರುವುದು ವಿರೋಧ ಪಕ್ಷಗಳು ಟೀಕೆಗೆ ಗುರಿಯಾಗಿದೆ.
ಈ ಟೀಕೆಗೆ ತಿರುಗೇಟು ನೀಡಿರುವ ಅರವಿಂದ್ ಕೇಜ್ರಿವಾಲ್, “ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿದಳ ಎಂಬ ರಾಜ್ಯ ವಂಶದ ಪಕ್ಷಗಳು ಪಂಜಾಬ್‌ನಲ್ಲಿ ಆಡಳಿತ ನಡೆಸಿದೆ. ಈಗಾಗಲೇ ಈ ಪಕ್ಷಗಳು ಸರ್ಕಾರದ ಖಜಾನೆಯನ್ನು ಬರಿದು ಮಾಡಿ ಆಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ವರ್ಷಕ್ಕೆ ೧೨,೦೦೦ ಕೋಟಿ ರೂ. ಖರ್ಚು!, ಕಾರಣವೇನು? ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ವರ್ಷಕ್ಕೆ ೧೨,೦೦೦ ಕೋಟಿ ರೂ. ಖರ್ಚು!, ಕಾರಣವೇನು?
ಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆ
ಪಂಜಾಬ್‌ನಲ್ಲಿ ೧೮ ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆ ಮಾಡಿದರೆ ಪಂಜಾಬ್ ಸರ್ಕಾರದ ಬೊಕ್ಕಸಕ್ಕೆ ತೊಂದರೆ ಉಂಟಾಗುತ್ತದೆ ಎಂದು ಕಾಂಗ್ರೆಸ್, ಅಕಾಲಿದಳ ಹಾಗೂ ಬಿಜೆಪಿ ನನ್ನನ್ನು ಟೀಕೆ ಮಾಡುತ್ತಿದೆ,” ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ೨೦೨೨ ರಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಈ ರಾಜ್ಯಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಜ್ರಿವಾಲ್ ನೇತೃತ್ವದ ಎಎಪಿ ಎಲ್ಲಾ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಪ್ರಯತ್ನದಲ್ಲಿ ಇದೆ. ಈ ಪ್ರಯತ್ನಗಳ ಭಾಗವಾಗಿ ಅರವಿಂದ್ ಕೇಜ್ರಿವಾಲ್ ಪಂಜಾಬ್, ಗೋವಾ ಜನತೆಗೆ ಚುನಾವಣಾ ಪೂರ್ವ ಭರವಸೆಯನ್ನು ನೀಡುತ್ತಿದ್ದಾರೆ.