ವಿನ್ನಿಟ್ಸ್ಯಾ ಮೇಲೆ ಕ್ಷಿಪಣಿ ದಾಳಿ: ೨೩ ಮಂದಿ ಮೃತ್ಯು

ಕೀವ್, ಜು.೧೫- ಕೇಂದ್ರ ಉಕ್ರೇನ್‌ನ ವಿನ್ನಿಟ್ಸ್ಯಾ ಮೇಲೆ ರಶ್ಯಾದ ಭಾರೀ ಕ್ಷಿಪಣಿ ದಾಳಿಯ ಪರಿಣಾಮ ಮೂವರು ಸೇರಿದಂತೆ ಕನಿಷ್ಠ ೨೩ ಮಂದಿ ನಾಗರಿಕರು ಮೃತಪಟ್ಟ ಘಟನೆ ನಡೆದಿದೆ. ರಶ್ಯಾದ ಈ ಘೋರ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭಯೋತ್ಪಾದಕ ಕೃತ್ಯವೆಂದು ಬಣ್ಣಿಸಿದ್ದಾರೆ. ಘಟನೆ ಬಳಿಕ ಹಲವರು ಕಣ್ಮರೆಯಾಗಿದ್ದು, ಹಾಗಾಗಿ ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


ಒಂದೆಡೆ ಯುರೋಪಿಯನ್ ಯೂನಿಯನ್ ಅಧಿಕಾರಿಗಳು ಉಕ್ರೇನ್‌ನಲ್ಲಿ ರಶ್ಯಾ ನಡೆಸುತ್ತಿರುವ ದುಷ್ಕೃತ್ಯದ ಬಗ್ಗೆ ಹೇಗ್‌ನಲ್ಲಿ ಚರ್ಚೆ ನಡೆಸುತ್ತಿದ್ದರೆ ಮತ್ತೊಂದೆಡೆ ವಿನಿಟ್ಸ್ಯಾ ಮೇಲೆ ಕ್ಷಿಪಣಿ ದಾಳಿ ಒಂದೇ ಸಮಯದಲ್ಲಿ ನಡೆಸಲಾಗಿದೆ. ಸುಟ್ಟ ಭಗ್ನಾವಶೇಷಗಳಿಂದ ಸುತ್ತುವರಿದ ತಲೆಕೆಳಗಾದ ಕಾರುಗಳ ಸುಟ್ಟ ಅವಶೇಷಗಳು ಕಂದು ಹೊಗೆಯಿಂದ ಬೆಂಕಿಯಿಂದ ಸುಟ್ಟುಹೋದ ದೃಶ್ಯಗಳು ಸದ್ಯ ಘಟನಾ ಸ್ಥಳದಿಂದ ಕಂಡುಬಂದಿವೆ. ಕ್ಷಿಪಣಿ ದಾಳಿಯ ಬಳಿಕ ಹಲವರು ನಾಪತ್ತೆಯಾಗಿದ್ದು, ಹಾಗಾಗಿ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಕ್ಷಿಪಣಿ ದಾಳಿಯ ಬಗ್ಗೆ ಗುರುವಾರ ತಡರಾತ್ರಿ ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿ, ಪ್ರಪಂಚದ ಯಾವುದೇ ದೇಶವು ರಷ್ಯಾದ ರೀತಿ ಭಯೋತ್ಪಾದಕ ಬೆದರಿಕೆಯನ್ನು ಒಡ್ಡುವುದಿಲ್ಲ. ಶಾಂತಿಯುತ ನಗರಗಳನ್ನು ಮತ್ತು ಸಾಮಾನ್ಯ ಮಾನವ ಜೀವನವನ್ನು ಪ್ರತಿದಿನವೂ ಕ್ರೂಸ್ ಕ್ಷಿಪಣಿಗಳು ಮತ್ತು ರಾಕೆಟ್ ಫಿರಂಗಿಗಳಿಂದ ನಾಶಮಾಡಲು ಯಾವುದೇ ದೇಶವು ಅನುಮತಿಸುವುದಿಲ್ಲ ಎಂದು ತಿಳಿಸಿದ ಅವರು, ರಶ್ಯಾದ ದಾಳಿಯ ಬಗ್ಗೆ ಯುರೋಪಿಯನ್ ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಿಶೇಷ ನ್ಯಾಯಮಂಡಲಿ ರಚಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನ್ನ ವ್ಯಾಪ್ತಿಗೆ ಒಳಪಡುವ ಅಪರಾಧಗಳ ಅಪರಾಧಿಗಳಿಗೆ ಹೊಣೆಗಾರಿಕೆಯನ್ನು ತರುವುದು ಅನಿವಾರ್ಯ ಎಂದು ನಾನು ನಂಬುತ್ತೇನೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.