ವಿನೋಬನಗರದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ

ದಾವಣಗೆರೆ.ಮಾ.೨೨; ದಾವಣಗೆರೆ ವಿನೋಬನಗರದ ವಾರ್ಡ್ 16ರಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಭಾರತದಾದ್ಯಂತ ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದು, ಇದರ ಪ್ರಯುಕ್ತ ವಾರ್ಡ್ 16 ವಿನೋಬನಗರದ 1ನೇ ಮುಖ್ಯರಸ್ತೆ ನಾಗರಕಟ್ಟೆ ದೇವಸ್ಥಾನದಿಂದ ಆರಂಭಿಸಲಾಯಿತು.ವಾರ್ಡ್ ಕಾರ್ಪೋರೇಟರ್ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹೆಲ್ತ್ ಆಫೀಸರ್ ಸಂತೋಷ್ ಕುಮಾರ್, ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಪ್ರಕಾಶ್, ವಾರ್ಡ್ ಹೆಲ್ತ್ ಇನ್ಸ್ಪೆಕ್ಟರ್ ಶ್ರೀಧರ್, ನಿಂಗಪ್ಪ, ವಾರ್ಡಿನ ಹಿರಿಯರಾದ ಎಸ್.ರವಿ, ಹೆಚ್.ಸುರೇಶ್, ರಮೇಶ್, ಚಂದ್ರಣ್ಣ, ಮಲ್ಲೇಶಪ್ಪ, ಮಂಜು , ವೀರಣ್ಣ, ಮಂಜು, ವಾರ್ಡಿನ ಎಲ್ಲಾ ಪೌರಕಾರ್ಮಿಕರು ಭಾಗವಹಿಸಿದ್ದರು.