ವಿನೋಬನಗರದಲ್ಲಿ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ.ಜೂ.೬; ಇಲ್ಲಿನ ವಿನೋಬನಗರ 16ನೇ ವಾರ್ಡ್ ನಲ್ಲಿ  ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ವಿನೋಬನಗರದ 3-4 ಮುಖ್ಯರಸ್ತೆಯಲ್ಲಿರುವ ಉದ್ಯಾನವನದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರುಗಳು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಎಸ್.ರವಿ, ರಾಮಚಂದ್ರ ರಾಯ್ಕರ್, ಯೋಗೇಶ್, ತೋಪಣ್ಣ, ಅರುಣಕುಮಾರ್, ಸಂದೇಶ್ ರಾಯ್ಕರ್, ಮಮತ,ರುದ್ರಮುನಿ, ಮೈಲಾರಪ್ಪ ಮತ್ತಿತರರಿದ್ದರು.