ವಿನೋಬನಗರದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ದಾವಣಗೆರೆ. ಏ.೧೬; ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರ 130ನೇ ಜಯಂತಿಯನ್ನು ವಿನೋಬನಗರದಲ್ಲಿರುವ ಶ್ರೀ ಕನ್ನಡಾಂಬೆ ಸಂಘಟನೆ ವೇದಿಕೆಯ ವತಿಯಿಂದ ದೀಪ ಬೆಳಗುವ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ  ಶ್ರೀನಿವಾಸ ದಾಸಕರಿಯಪ್ಪ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ  ಎ.ನಾಗರಾಜ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ  ಗೋವಿಂದರಾಜು ಇವರುಗಳು ಹಾಗೂ ಸರ್ವ ಜನಾಂಗದ ಬಂಧುಗಳು, ಸ್ನೇಹಿತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 
ಈ ಸಂದರ್ಭದಲ್ಲಿ ಕನ್ನಡಾಂಬೆ ಸಂಘಟನೆ ವೇದಿಕೆಯ ಗೌರವಾಧ್ಯಕ್ಷರಾದ ಮಾರುತಿರಾವ್ ಚಂದುಕರ್, ಅಧ್ಯಕ್ಷರಾದ ನಜೀರ್ ಆಹ್ಮದ್, ಉಪಾಧ್ಯಕ್ಷರಾದ ರಮೇಶ ಹಾಗೂ ಫೈರೋಜ ಅಹ್ಮದ್, ಅಜ್ಮತ್‌ಖಾನ್, ಶಫೀ ಆಹ್ಮದ್, ಸುರೇಶ್ ಗಂಟೆಕರ್, ಅಸ್ತಾ ಟಿ.ವಿ. ಮುನ್ನ, ಗೌಸ್ ಮಾಬೆಲ್, ರೇವಣಪ್ಪ ಖರ್ಜೂಕರ್, ಮಲ್ಲಿಕಾರ್ಜುನ ಶಾರ್ಪುಕರ್, ಸುಂದರ ಕಲಾಲ್ ಇನ್ನಿತರರು ಭಾಗವಹಿಸಿದ್ದರು.