ವಿನಾ ಕಾರಣ ಕೇಸು ದಾಖಲಿಸದಿರಲು
ಎಸ್ಪಿಗೆ ಕಾಂಗ್ರೆಸ್ ಮುಖಂಡರ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.04:  ನಗರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು  ಹಾಗೂ  ವಿನಾಕಾರಣ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದೂರುಗಳನ್ನು ದಾಖಲಿಸುತ್ತಿದ್ದು ಇದು ಖಂಡನೀಯ ಈ ಬಗ್ಗೆ ಪರಿಶೀಲನೆ ಮಾಡು ಸೂಕ್ತ ಕ್ರಮ‌ಕೈಗೊಳ್ಳಬೆರಕು ಎಂದು   ಜಿಲ್ಲಾ ಕಾಂಗ್ರೆಸ್‌ ನಿಯೋಗವು.  ಜಿಲ್ಲಾ ಪೋಲೀಸ್‌ ವರಷ್ಠಾಧಿಕಾರಿ ರಂಜಿತ್ ಕುಮಾರ್  ಬಂಡಾರಿ‌ ಅವರಿಗೆ ನಿನ್ನೆ  ಮನವಿ ಮಾಡಿದೆ.
ಎಸ್ಪಿ ಕಚೇರಿಗೆ ತೆರಳಿದ ನಿಯೋಗದ ಮುಖಂಡರುಗಳಾದ ಮೇಯರಗ ಎಂ. ರಾಜೇಶ್ವರಿ ಸುಬ್ಬರಾಯುಡು,  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್. ಮೊಹಮ್ಮದ್‌ ರಫೀಕ್‌,  ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಅಂಜಿನೇಯಲು, ಕೆಪಿಸಿಸಿ ಪ್ರಚಾರ ಸಮಿತಿಯ ಅಲ್ಲಂ, ಪ್ರಶಾಂತ್, ವೆಂಕಟೇಶ್ ಹೆಗಡೆ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಾದೆಪ್ಪ,  ಸದಸ್ಯರಾದ ಪೇರಂವಿವೇಕ್ , ಎಂ.ಪ್ರಭಂಜನ್ ಕುಮಾರ, ಮುಖಂಡರಾದ ಪಿ.ಜಗನ್, ಶಿವರಾಜ್ ಹೆಗಡೆ, ಹೊನ್ನಪ್ಪ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ವಿನಾಕಾರಣ ಆಡಳಿತಾರೂಡ ಪಕ್ಷದವರು ನಮ್ಮ ಕಾರ್ಯಕರ್ತರು, ಮುಖಂಡರ ಮೇಲೆ ಕೇಸು ದಾಖಲಿಸುತ್ತಿದ್ದರೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.