ವಿನಾಯತಿಗೆ ಮನವಿ


ಬೈಲಹೊಂಗಲ,ಏ.7: ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕರ್ತವ್ಯಕ್ಕೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ನೌಕರರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಅಂಗವಿಕಲ ನೌಕರರಿಗೆ, ವಿನಾಯಿತಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಶಾಖೆಯ ಪದಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಎಮ್.ಸತೀಶ್ ಕುಮಾರ ಹಾಗೂ ತಾಲೂಕಾ ದಂಡಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.
ಪಿಆರೋ, ಎಪಿಆರೋ,/ ಪಿಓ ದಂತಹ ಚುನಾವಣಾ ಕರ್ತವ್ಯಕ್ಕೆ ಆದೇಶ ಬಂದಂತಹ ನೌಕರರ ಬದಲಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಸರಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವದು ಮತ್ತು ಬೈಲಹೊಂಗಲ ತಾಲೂಕಿನ ಮತಗಟ್ಟೆ ಅಧಿಕಾರಿಗಳಿಗೆ ಗುರುತಿನ ಚೀಟಿ, ಬಿ.ಎಲ್.ಓ ಕಿಟ್ ವಿತರಣೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟಣೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಜಂತ್ರಿ, ರಾಜ್ಯ ಪರಿಷತ್ ಸದಸ್ಯ ರಮೇಶ್ ದೊಡ್ಡಗೌಡರ, ಅಹಿಂದ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ತಮ್ಮಣ್ಣವರ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಸ್ ಫಕೀರಸ್ವಾಮಿಮಠ, ರಾಜ್ಯ ಪರಿಷತ್ ಸದಸ್ಯ ಡಿಎಂ ದೇಸಾಯಿ, ಸದಸ್ಯರಾದ ಎಂ ಆರ್ ಬೋವಿ, ಶಂಕರ ಸಾಗರ, ಗಿರೀಶ ಕಾರೇಕರ, ಅಜೀಜ್ ಶಿಡ್ಲೆಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.