ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲಿ ಪೆಂಡಾಲ್ ನಿರ್ಮಾಣ: ಭರವಸೆ

ಮಧುಗಿರಿ, ಸೆ. ೨- ಮುಂದಿನ ವರ್ಷ ವಿನಾಯಕ ಮೂರ್ತಿ ಪ್ರತಿಷ್ಠಾಪಿಸುವ ಜಾಗದಲ್ಲಿಯೇ ಶಾಶ್ವತವಾದಂತಹ ಪೆಂಡಾಲ್ ನಿರ್ಮಿಸಿ ಕೊಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಶ್ರೀ ವೆಂಕಟರವಣಸ್ವಾಮಿ ದೇವಾಲಯದಲ್ಲಿ ವಿನಾಯಕ ಚರ್ತುರ್ಥಿಯ ಅಂಗವಾಗಿ ಪಟ್ಟಣದ ನಾಗರಿಕರು ಹಾಗೂ ಭಕ್ತರು ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಎಂಟು ದಿನಗಳ ನಂತರ ವಿಸರ್ಜನೆ ಮಾಡಲಾಗುವುದು. ಕಾರ್ಯಕ್ರಮದ ಆಯೋಜನೆಗೆ ಎಲ್ಲರ ಸಹಕಾರ ಅಗತ್ಯವಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವಾಗ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದರು.
ಪಟ್ಟಣದ ಕಾರ್ಯಕ್ರಮವಾಗಿರು ವುದರಿಂದ ಪಕ್ಷಾತೀತಾವಾಗಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿಜೃಂಭಣೆಯಿಂದ ವಿನಾಯಕನ ಮಹೋತ್ಸವ ಆಚರಿಸಿ, ಬರಗಾಲವಾಗಿರುವುದರಿಂದ ಹೆಚ್ಚು ದುಂದು ವೆಚ್ಚವಾಗದಂತೆ ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಐತಿಹಾಸಿಕ ಶ್ರೀ ವೆಂಕಟರಮಣಸ್ವಾಮಿ, ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯ ಹಾಗೂ ಶ್ರೀದಂಡಿನ ಮಾರಮ್ಮ ದೇವಾಲಯಗಳಿಗೆ ಮೂಲಭೂತ ಸೌಕರ್ಯ ಹಾಗೂ ದೇವಾಲಯಗಳ ಮುಂಭಾಗ ರಕ್ಷ ಕವಚದ ಕಮಾನುಗಳು, ಹೈಮಾಸ್‌ಕ್ ದೀಪ ಆಳವಡಿಕೆ, ಶೌಚಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವುದು. ಮಧುಗಿರಿಯಲ್ಲಿ ಬಸ್ ಡಿಪೋ ಇದ್ದು, ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿರುವ ಸಾರಿಗೆ ಬಸ್‌ಗಳ ಮೇಲೆ ಏಕಶಿಲಾ ಬೆಟ್ಟದ ಲಾಂಛನವನ್ನು ಆಳವಡಿಸುವಂತೆ ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ವಿ.ಗೋವಿಂದರಾಜು, ಲಾಲಪೇಟೆ ಮಂಜುನಾಥ್, ಎಂ.ಜಿ ಶ್ರೀನಿವಾಸ್‌ಮೂರ್ತಿ, ಎಂ.ಆರ್. ಜಗನ್ನಾಥ್, ಆಚಾರ್ ಮಂಜುನಾಥ್, ಚಂದ್ರಶೇಖರ್, ಮೂಡ್ಲಗಿರೀಶ್, ಮಂಜುನಾಥ್, ಧನಪಾಲ್, ದೋಲಿಬಾಬು, ಮಂಡ್ಸ್, ಸಿದ್ದಾಪುರ ವೀರಣ್ಣ, ಲಾಲಾಪೇಟೆ ಮಂಜುನಾಥ್, ಪಾಂಡುರಂಗಾರೆಡ್ಡಿ, ಆರ್ಚಕರಾದ ನಟರಾಜು ದೀಕ್ಷಿತ್, ಅನಂತ್, ಗಾಯತ್ರಿ ನಾರಾಯಣ್ , ಸಹನಾ ನಾಗೇಶ್, ಶಂಕರನಾರಾಯಣ, ಜಗದೀಶ್‌ಕುಮಾರ್, ಕೆ.ಪ್ರಕಾಶ್, ಶ್ರೀಧರ್, ಆರ್.ಎಲ್.ಎಸ್. ರಮೇಶ್, ಟಪಾರಿ ಶ್ರೀನಿವಾಸ್, ನಾರಾಯಣರಾಜು ಮತ್ತಿತರರು ಉಪಸ್ಥಿತರಿದ್ದರು.